day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಹೊರಗೆ ಹೊಳಪು.ಒಳಗೆ ಹುಳುಕು*ಆಸ್ಪತ್ರೆಯ ಸುಂದರ ನೋಟ#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಹೊರಗೆ ಹೊಳಪು.ಒಳಗೆ ಹುಳುಕು*ಆಸ್ಪತ್ರೆಯ ಸುಂದರ ನೋಟ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹೊರಗೆ ಹೊಳಪು.ಒಳಗೆ ಹುಳುಕು

ಆಸ್ಪತ್ರೆಯ ಹೊರಗೆ ಸುಂದರ ನೋಟ-ಒಳಗೆ ರೋಗಿಗಳ ನರಳಾಟ.

ದೇಶವು ಕೊರೊನದ ಹೊಡೆತಕ್ಕೆ ಸಿಕ್ಕಿ ಸದ್ಯಕ್ಕೆ ಚೇತರಿಸಿಕೊಳ್ಳದ ಸ್ಥಿತಿಯಲ್ಲಿದ್ದರೆ,
ಇದನ್ನು ಕಂಡು ಇಡೀ ವಿಶ್ವದ ಹಲವಾರು ರಾಷ್ಟ್ರಗಳು ಭಾರತಕ್ಕೆ ಸಹಾಯ ನೀಡುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ.
ಎಲ್ಲರ ಸಹಾಯ ಸಹಕಾರವನ್ನು ಪಡೆದುಕೊಂಡು ಯಾವುದನ್ನು ಲೆಕ್ಕಕೊಡದ ನಮ್ಮ ಸರ್ಕಾರಗಳು ಅದನ್ನು ಸದುಪಯೋಗ ಪಡಿಸಿಕೊಳ್ಳದೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ವಿಪರ್ಯಾಸ.
ಇದಕ್ಕೆ ಮುನ್ನುಡಿಯಂತೆ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಂ ಜಿ ಎಂ ಅಸ್ಪತ್ರೆಯು ನಮ್ಮ ಮುಂದೆ ದೊಡ್ಡ ಉದಾಹರಣೆಯಾಗಿದೆ. ಪ್ರಸ್ತುತ ಕಳೆದ ಒಂದು ತಿಂಗಳಿಂದ ನಮ್ಮ ತಾಲ್ಲೂಕಿನಲ್ಲಿ ಕೊರೊನ ಪಾಸಿಟಿವ್ ಕೇಸ್ 100ರ ಮೇಲೆ ಬರುತ್ತಿದೆ.
ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಮನೆಗಳಲ್ಲಿರಿಸಿ ಸಂಬಂಧ ಪಟ್ಟಂತೆ ಔಷದೋಪಚಾರ ನೀಡಲಾಗುತ್ತಿದೆ.
ತೀವ್ರ ಉಸಿರಾಟದ ತೊಂದರೆ ಅಥವಾ ಜ್ವರ ಇದ್ದರೆ ಅವರುಗಳನ್ನು ಆಸ್ಪತ್ರೆಯಲ್ಲಿರಿಸಿ ಚಿಕಿಸ್ಥೆ ಮಾಡಲಾಗುತ್ತಿದ್ದು ಸದ್ಯ ಮೂಡಿಗೆರೆಯ ಎಂ ಜಿ ಎಂ ಆಸ್ಪತ್ರೆಯಲ್ಲಿ 50 ಬೆಡ್ ವ್ಯವಸ್ಥೆ ಆಕ್ಸಿಜನ್ ಕಲ್ಪಿಸಲಾಗಿದೆ.
ಆದರೆ ಇಲ್ಲಿಯ ದುರಂತ ಏನೆಂದರೆ ಕೇವಲ ಒಬ್ಬ ವೈದ್ಯ ಹಾಗೂ ಏಳು ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದು.
ಅಲ್ಲಿ ಚಿಕಿಸ್ಥೆ ಪಡೆಯುತ್ತಿರುವ ಪ್ರತಿಯೊಬ್ಬ ರೋಗಿಯು ತಾನು ಬದುಕಿ ಮನೆಗೆ ತೆರುಳುತ್ತೇನೆ ಎಂಬುವ ಭರವಸೆಯನ್ನು ಕಳೆದುಕೊಂಡು ದಿನಗಳ ಎಣಿಸುತ್ತಿದ್ದಾನೆ,
ಅಲ್ಲದೆ ಸ್ವಲ್ಪವೂ ಸೌಜನ್ಯ ತೋರಿಸದೆ ಬಹಳ ದರ್ಪದಿಂದ ರೋಗಿಗಳ ಜೊತೆಯಲ್ಲಿ ವರ್ತಿಸುವುದನ್ನು ತುಂಬ ನೋವಿನಿಂದ ಅಲ್ಲಿಯ ರೋಗಿಯೊಬ್ಬರು ಕರೆ ಮಾಡಿ ತಿಳಿಸಿದ್ದು ತುಂಬಾ ಸಂಕಟ ಎನಿಸುತ್ತಿದೆ.
ಕೋರನ ಎಂಬ ರೌದ್ರ ನರ್ತನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನ ದಿನ ಹೆಚ್ಚಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದು ದಾಖಲಾಗುವ ರೋಗಿಗಳಿಗೆ ಸರಿಯಾದ ರೀತಿಯ ಚಿಕಿಸ್ಥೆ, ಆತ್ಮ ಸ್ಟೈರ್ಯ, ನೀಡ ಬೇಕಿದ್ದ ಜೊತೆಗೆ ಕೊರೊನ ವಾರಿಯರ್ಸು ಎಂದು ನಾವುಗಳು ಪೂಜಿಸುವ ಇಂತಹ ವೈದ್ಯರು ಹಾಗೂ ಸಿಬ್ಬಂದಿಗಳೇ ಯಮರಂತೆ ಕಾಣಿಸುತ್ತಿರುವುದು ನಮ್ಮೆಲ್ಲರ ದೌರ್ಬಗ್ಯ.
ಒಬ್ಬ ರೋಗಿಯು ಹೋಗಿ ದಾಖಲಾಗಿ ಮುಂಜಾನೆಯಿಂದ ಸಂಜೆ ಆದರೂ ಯಾರು ಬಂದು ಏನು ಎತ್ತ ಎಂದು ಒಂದು ಮಾತು ಕೇಳದೆ ಆ ರೋಗಿಯು ಯಾರಿಗೆ ಹೇಳುವುದು ಎಂದು ಗೊತ್ತಾಗದೆ ಒದ್ದಾಡುವ ಸ್ಥಿತಿಯಲ್ಲಿ ನಮ್ಮ ಮೂಡಿಗೆರೆ ಎಂ ಜಿ ಎಂ ಕೋವಿಡ್ ಅಸ್ಪತ್ರೆಯಲ್ಲಿ ರೋಗಿಗಳ ಪರಿಸ್ಥಿತಿಯಾಗಿದೆ.
ಮಹಾತ್ಮ ಗಾಂಧಿ ಯ ಹೆಸರನ್ನು ಇಟ್ಟುಕೊಂಡು ಹೊರಗಿನ ನೋಟಕ್ಕೆ ಜಿಲ್ಲಾ ಕೇಂದ್ರದಲ್ಲಿ ಕಾಣಿಸುವಂತ ದೊಡ್ಡ ಆಸ್ಪತ್ರೆ ಆದರೆ ಒಳಗೆ ಹೋಗಿ ನೋಡಿದರೆ ಅದರ ನೈಜ ಬಣ್ಣ ಗೊತ್ತಾಗುತ್ತದೆ.
ಯಾವುದೇ ಪೂರಕವಾದ ತುರ್ತು ವ್ಯವಸ್ಥೆಗಳು ಇಲ್ಲ ಸಿಟಿ ಸ್ಕಾನಿಂಗ್,ವೆಂಟಿಲೇಟರ್ ಯಾವುದು ಇಲ್ಲ ಚಿಕ್ಕಮಗಳೂರು ಹೋಗಿ ಹಾಸನ್ ಹೋಗಿ ಎಂದು ಹೇಳುವುದೇ ಇವರ ಕೆಲಸವಾಗಿದೆ ಆ ಕಾರಣಕ್ಕೆ ಸಾಯುವ ಸಂಖ್ಯೆ ಹೆಚ್ಚಾಗುತ್ತಿದೆ.
ಹಾಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು,ಇಲಾಖೆ ಹಾಗೂ ತಾಲೂಕಿನ ಎಂ ಎಲ್ ಎ ಗಳು ಇತ್ತ ಗಮನ ಹರಿಸಿ ಕೂಡಲೇ ಕೋವಿಡ್ ವಾರ್ಡಗೆ ಹೆಚ್ಚಿನ ವೈದರು ಹಾಗೂ ಸಿಬ್ಬಂದಿಗಳನ್ನು ನೇಮಿಸಿ ಸಾಧ್ಯವಾದ ಅಗತ್ಯ ಸೇವೆಗಳು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗ ಬೇಕು.
ಕೊವಿಡ್ ಪರಿಕ್ಷೆಯ ಸ್ತಳದಲ್ಲಿ ಒಡೆದ ಗಾಜನ್ನು ಸರಿಪಡಿಸದೆ ಇರುವುದು.
ತುಕ್ಕು ಹಿಡಿದ ಬಾಗಿಲು.
ನೆರಳಿಲ್ಲದೆ ಪರಿಕ್ಷೆಗೆ ಕಾದು ಕಾದು ಸುಸ್ತಾಗುವ ರೋಗಿಗಳು.
ಜಿಲ್ಲಾ ಮಂತ್ರಿಗಳು ಬಂದಾಗ,
ಉದ್ಘಾಟನೆ ಇದ್ದಾಗ ಆಸ್ಪತ್ರೆ ಕಡೆ ಬಂದು ಹೊಗುವ ಶಾಸಕರು.ಎಂ ಎಲ್ ಸಿ ಗಳು.
ಜನಪ್ರತಿನಿದಿಗಳು.

ಇಲ್ಲ ವಾದಲ್ಲಿ ಮುಂದಿನ ದಿನಗಳಲ್ಲಿ ಆಗುವ ಎಲ್ಲ ಅನಾಹುತಕ್ಕೆ ನೀವುಗಳೇ ನೇರ ಹೊಣೆಯಾಗುತ್ತಿರಿ ಎಂದು ಈ ಮೂಲಕ ಬಕ್ಕಿ ಮಂಜುನಾಥ್ ಬಿ ಎಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್ಚರಿಸುತ್ತಿದ್ದೇನೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

http://nisargacare.com/career/

Navachaitanya Old Age Home

About Author