day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆ : ಅಭಿವೃದ್ಧಿಯತ್ತ ಸಾಗುವುದೇ ನನ್ನ ಗುರಿ ಎಂದ ಭರವಸೆಯ ಶಾಸಕಿ ನಯನ ಮೋಟಮ್ಮ.” – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

“ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆ : ಅಭಿವೃದ್ಧಿಯತ್ತ ಸಾಗುವುದೇ ನನ್ನ ಗುರಿ ಎಂದ ಭರವಸೆಯ ಶಾಸಕಿ ನಯನ ಮೋಟಮ್ಮ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪ.ಪಂ. ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ಮುಗಿಸುವ ಜತೆಗೆ ತನ್ನ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸುವ ಕೆಲಸ ನಡೆಯುತ್ತಿದೆ.ಇದರಲ್ಲಿ ಯಶಸ್ಸು ಕೂಡ ಕಾಣುತ್ತೇನೆಂದು ಶಾಸಕಿ ನಯನಾ ಮೋಟಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ 8,10 ಹಾಗೂ 11ನೇ ವಾರ್ಡಿನಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕಳೆದ 25 ವರ್ಷದ ಹಿಂದೆ ತನ್ನ ತಾಯಿ ಮೋಟಮ್ಮ ಅವರು ಪಟ್ಟಣದ ಜನತೆಗೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಸೌಲಭ್ಯ ಮಾಡಿಕೊಟ್ಟಿದ್ದರು.ಈಗ 19.5 ಕೋಟಿ ರೂ ವೆಚ್ಚದಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣ,ಹೊಸ ಹೈಟೆಕ್ ಮೋಟಾರು,ಪೈಪ್‌ಗಳನ್ನು ಹಾಕಿ ಮುಂದಿನ 25 ವರ್ಷವರೆಗೆ ಸಮಸ್ಯೆ ಬಾರದಂತೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು.ಅಲ್ಲದೇ ಈಗಾಗಲೇ ಪಟ್ಟಣದವರೆಗೆ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಬಂದಿದ್ದು,ಇನ್ನು 300 ಮೀಟರ್ ಪೈಪ್‌ಲೈನ್ ಕಾಮಗಾರಿ ಬಾಕಿ ಉಳಿದಿದೆ.ಅದಕ್ಕೆ ಟೆಂಡರ್ ಕೂಡ ನಡೆದಿದೆ. ಇವೆಲ್ಲಾ ಕಾರ್ಯ ಮುಗಿದರೆ ಪಟ್ಟಣದಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಯಾಗುತ್ತದೆ.ಅಲ್ಲದೇ ತಾಲ್ಲೂಕಿಗೆ ಈಗಾಗಲೆ ಲೆಕ್ಯಾ ಡ್ಯಾಮಿನಿಂದ ನೀರು ಪೂರೈಕೆ ಮಾಡುವ ಪ್ರಕ್ರಿಯೆ ಕೂಡ ನಡೆಯುತ್ತಿದ್ದು,ಆ ಕೆಲಸ ಪೂರ್ಣಗೊಂಡರೆ ತಾಲ್ಲೂಕಿನ ಜನತೆಗೆ ಕೂಡ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ಹೇಳಿದರು.

ಪಟ್ಟಣದಲ್ಲಿ 2002 ದಿಂದ ಇಲ್ಲಿಯವರೆಗೂ ಡಾಂಬಾರು ಕಾಣದ 8,10,11ನೇ ವಾರ್ಡಿನಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿದ್ದು,ಕಾಮಗಾರಿ ಶೀಘ್ರವಾಗಿ ಪ್ರಾರಂಭಗೊಳ್ಳಲಿದೆ.ನಗರೋತ್ಥಾನ ಯೋಜನೆಯಲ್ಲಿ ಬಿಡುಗಡೆಯಾಗಿರುವ 3.5 ಕೋಟಿ ಅನುದಾನದಲ್ಲಿ ಪಟ್ಟಣದಲ್ಲಿ ಬಾಕಿ ಉಳಿದಿರುವ ಬಹುತೇಕ ಕಾಮಗಾರಿಗಳಿಗೆ ಮುಕ್ತಿ ದೊರಕಲಿದೆ.ಮುಂದಿನ ದಿನದಲ್ಲಿ ಯುಜಿಡಿ ಕಾಮಗಾರಿ ಕೂಡ ನಡೆಯಲಿದೆ.ಅಲ್ಲದೇ ಚಿಕ್ಕಮಗಳೂರು ಮೂಗ್ತಿಹಳ್ಳಿಯಿಂದ ಹ್ಯಾಂಡ್‌ಪೋಸ್ಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ.ಸಧ್ಯದಲ್ಲೇ ಜನಸಂಪರ್ಕ ಸಭೆ ನಡೆಸಿ ಪಟ್ಟಣದ ನಿವಾಸಿಗಳ ಅಭಿಪ್ರಾಯ ಪಡೆದು ಎಂ.ಜಿ ರಸ್ತೆ ಅಗಲೀಕರಣದ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪ.ಪಂ.ಸದಸ್ಯರಾದ ವೆಂಕಟೇಶ್,ಎಚ್.ಪಿ.ರಮೇಶ್, ಹಂಝ,ಮುಖ್ಯಾಧಿಕಾರಿ ರಂಗಸ್ವಾಮಿ,ಮುಖಂಡರಾದ ದೀಕ್ಷಿತ್,ಸಿ.ಬಿ.ಶಂಕರ್,ಸುರೇಂದ್ರ,ಸುಧೀರ್,ಹರೀಶ್ ಮತ್ತಿತರರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *