ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆದ ವಿಚಾರದ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ….
1 min read
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆದ ವಿಚಾರದ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ….
🌹🌹🌹🌹🌹🌹🌹🌹
ಭಾರತ ದೇಶದಲ್ಲಿ “ಅಸಮಾನತೆ” “ಅಜ್ಞಾನ ” “ಅನಕ್ಷರತೆ” “ಅಸ್ಪೃಶ್ಯತೆ” ” ಅವೈಜ್ಞಾನಿಕ” ಆಚರಣೆಗಳು ನಾಯಿ ಕೊಡೆಗಳಂತೆ ಬೆಳೆದಿದ್ದ ಸಂದರ್ಭದಲ್ಲಿ 1891 ಏಪ್ರಿಲ್ 14ರಂದು “ಅ ” ಎಂಬ ಅಕ್ಷರದಿಂದಲೇ ಹುಟ್ಟಿ ಬಂದಂತಹ ಬೆಳಕಿನ ಕಿರಣವಾದ ಅಂಬೇಡ್ಕರ್ ರವರು ಎಲ್ಲಾ ಸಿದ್ದ ಮಾದರಿಗಳನ್ನು ಮೆಟ್ಟಿನಿಂತು ಕೋಟ್ಯಂತರ ಶೋಷಿತರ ಬಾಳಿಗೆ ಬೆಳಕಾದರು.
ಒಂದು ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಜನಿಸದಿದ್ದರೆ ಭಾರತದ ಬಹುಜನರ ಬದುಕನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ.
ಬಹುಜನರ ಶೋಷಿತರ ಬಾಳಿಗೆ ಬೆಳಕಾಗದಂತಹ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನವನ್ನು ಇಡೀ ವಿಶ್ವದಾದ್ಯಂತ ಆಚರಿಸುವಂತೆ ಭಾರತದ ಮೂಲೆ ಮೂಲೆಗೆ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಆದರೆ ಬಹು ಮುಖ್ಯ ದುರಂತ ಎಂದರೆ,
ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ, ಎಷ್ಟು ಗಂಟೆಗೆ ಬೇಕಾದರೂ, ಹೇಗೆ ಬೇಕಾದರೂ ಆಚರಿಸುತ್ತಿರುವುದು ಬಹು ದೊಡ್ಡ ದುರಂತ. ಕೇಳಿದರೆ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ನಾಯಕ ಎಂಬ ಒಂದೇ ವಾಕ್ಯದ ಉತ್ತರ.
ಡಾ. ಬಿ.ರ್.ಅಂಬೇಡ್ಕರ್ ಅವರ ಜಯಂತಿಯಲ್ಲಿ ನಡೆಯುವ ಗೊಂದಲಗಳು ವಿಶ್ವದ ಯಾವ ನಾಯಕರ ಜಯಂತಿಗಳಲ್ಲೂ ನಡೆಯುವುದಿಲ್ಲ. ಯಾಕೆ? ಎಂಬ ಪ್ರಶ್ನೆ ಹಾಕಿಕೊಳ್ಳಲೇಬೇಕು.
ಉತ್ತರ ಇಷ್ಟೇ, ಡಾ. ಬಿಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಗಳು
ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ವೈಚಾರಿಕವಾಗಿ, ಸೈಧ್ಯಾಂತಿಕವಾಗಿ ನಡೆಯದಿರುವುದೇ ಇಂತಹ ದುರಂತಕ್ಕೆ ಪ್ರಮುಖ ಕಾರಣ….
ಆದರೆ ಅಂಬೇಡ್ಕರ್ ಜಯಂತಿಗಳು ಈ ಹೊತ್ತಿನಲ್ಲಿ ರಾಜಕಾರಣಗೊಂಡು, ವಿಚಾರದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಳು ನಡೆಯದೆ ಪ್ರಚಾರದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗಳು ನಡೆಯುತ್ತಿರುವುದೇ ಕಾರಣ. ಇಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ವೈಭವಿಕರಿಸಲಾಗುತಿದೆ.
ಇಂದು ಭಾರತದ ಸಂವಿಧಾನಕ್ಕೆ ಅಪಾಯ ಬಂದಿರುವ ಸಂದರ್ಭದಲ್ಲಿ ಸರಳವಾಗಿ ತಮ್ಮ ತಮ್ಮ ಊರುಗಳಲ್ಲಿ ಮನೆ ಅಂಗಳದಲ್ಲಿ ಊರಿನ ಮುಖ್ಯಸ್ಥರನ್ನು ಕರೆದು ವೇದಿಕೆಯಲ್ಲಿ ಕೂರಿಸಿ ಮಹಿಳೆಯರನ್ನು ಒಳಗೊಂಡಂತೆ ವಿದ್ಯಾವಂತ ಯುವಕರು ಯುವತಿಯರು ಅಂಬೇಡ್ಕರ್ ವಿಚಾರಗಳೊಂದಿಗೆ ಸಂವಿಧಾನದ ಆಶಯಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳಬೇಕು. ಬಹು ಮುಖ್ಯವಾಗಿ ಮಕ್ಕಳನ್ನು ಒಳಗೊಂಡಿರಬೇಕು.
ಏಪ್ರಿಲ್ 14ರಂದು ಅವರ ಜನ್ಮದಿನದ ಕಾರ್ಯಕ್ರಮ ನಡೆಯುವುದು ಒಳ್ಳೆಯ ಬೆಳವಣಿಗೆ ಆ ದಿನವೇ ಹಳ್ಳಿ ಹಳ್ಳಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನ ನಡೆಯಬೇಕು. ಆಗ ಮಾತ್ರವೇ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಗೆ ಒಂದು ಸೈದ್ಧಾಂತಿಕ ಅರ್ಥ ಬರುತ್ತದೆ.
ಅಂತಹ ಒಂದು ಸೈದ್ಧಾಂತಿಕ ಕಾರ್ಯಕ್ರಮ ಬೇಲೂರು ತಾಲೂಕು, ಅರೇಹಳ್ಳಿ ಹೋಬಳಿ ನಲ್ಕೆ ಗ್ರಾಮದಲ್ಲಿ ನಡೆದಿರುವುದು ವಿಶೇಷ.
ಪ್ರಚಾರದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ನಡೆಯದೆ ವಿಚಾರದ ಡಾ. ಬಿಆರ್ ಅಂಬೇಡ್ಕರ್ ಜಯಂತಿ ನಡೆಯಿತು.
ಪುಟ್ಟ ಗ್ರಾಮ ವಾಗಿದ್ದರು ಸ್ಥಳೀಯರೇ ಹಣವನ್ನು ಸ್ವಯಂ ಪ್ರೇರಿತರಾಗಿ ಕೊಟ್ಟು , ಒಂದಿಷ್ಟು ಜನ ಸ್ವಯಂ ಪ್ರೇರಿತರಾಗಿ ಊಟದ ವ್ಯವಸ್ಥೆಯನ್ನು ಮಾಡಿದರೆ, ಮತ್ತೊಬ್ಬರು ಶಾಮಿಯನ್, ಮತ್ತೊಬ್ಬರು ಚೇರ್ ಮತ್ತು ಮೈಕ್, ಮತ್ತೊಬ್ಬರು ಸ್ಥಳೀಯ ಮಕ್ಕಳಿಗೆ ಪುಸ್ತಕ ಪೆನ್ ಕೊಡಿಸಿದರೆ, ಮತ್ತೊಬ್ಬರು ಬೆಳಕಿನ ವ್ಯವಸ್ಥೆಯನ್ನು ಸಿದ್ಧಪಡಿಸಿದರೆ ಮಹಿಳೆಯರಂತೂ ಉರಿ ಬಿಸಿಲಿನಲ್ಲಿಯೂ ರಂಗೋಲಿಯನ್ನು ಹಾಕಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ಸಿಂಗಾರಗೊಳಿಸಿದರೆ ಸ್ಥಳೀಯ ಮಕ್ಕಳು ಕಾರ್ಯಕ್ರಮದ ಸಲುವಾಗಿ ಅಂಬೇಡ್ಕರ್ ಗೀತೆಗಳನ್ನು ಕಲಿತು ಡಾ. ಬಿ ಆರ್ ಅಂಬೇಡ್ಕರ್ ಗೀತೆಗಳನ್ನು ಹಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಇಂಥ ಒಂದು ಸೈದ್ಧಾಂತಿಕ ಕಾರ್ಯಕ್ರಮಕ್ಕೆ ಹೊರಗಿನ ಯಾವ ರಾಜಕಾರಣಿಗಳನ್ನು ಕರೆಸದೆ ಸ್ಥಳೀಯರನ್ನೇ ವೇದಿಕೆಯಲ್ಲಿ ಕೂರಿಸಿದ್ದು ಮತ್ತೊಂದು ವಿಶೇಷ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಲೋಕೇಶ್ ರವರು ವಹಿಸಿದ್ದಾರೆ. ಪ್ರಮುಖ ಭಾಷಣಗಾರರಾಗಿ ಗ್ರಾಮದ ಡಾಕ್ಟರ್ ಆಫ್ ಫಿಲಾಸಫಿ ಪದವೀಧರಾದ ಡಾ. ಹರೀಶ್ ನಲ್ಕೆ, ಮುಖ್ಯ ಅತಿಥಿಗಳಾಗಿ, ಭಾಗವಹಿಸಿ ಹಲವಾರು ಹೋರಾಟದ ಗೀತೆಗಳ ಮುಖಾಂತರ ಡಾ. ಬಿಆರ್ ಅಂಬೇಡ್ಕರವರ ಬದುಕು ಬವಣೆ ಮತ್ತು ಅವರ ವಿಚಾರಧಾರೆಗಳನ್ನು ಮತ್ತು ಸಂವಿಧಾನಕ್ಕೆ ಬಂದಿರುವ ಅಪಾಯಗಳನ್ನು ಬಿಡಿಸಿ ಹೇಳಿರುತ್ತಾರೆ. ಅಷ್ಟು ಮಾತ್ರವಲ್ಲದೆ ಮತದಾನದ ಮಹತ್ವವನ್ನು ಅನೇಕ ಉದಾಹರಣೆಗಳ ಮುಖಾಂತರ ಬಿಡಿಸಿ ಹೇಳಿರುತ್ತಾರೆ. ಹಾಗೂ ಮುಂದಿರುವ ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಹೇಗೆ ಒಗ್ಗೂಡಬೇಕೆಂಬುವ ಬಗ್ಗೆ ಸ್ಪಷ್ಟವಾಗಿ ವೈಚಾರಿಕವಾಗಿ ಕಟ್ಟಿಕೊಟ್ಟಿರುತ್ತಾರೆ. ಹಿರಿಯರಾದಂತ ಶ್ರೀಮತಿ ಜಯಮ್ಮನವರು, ಶ್ರೀಯುತ ಸೋಮಶೇಖರವರು, ಶ್ರೀಯುತ ವಸಂತ್ ಕುಮಾರ್ ರವರು, ಶ್ರೀಯುತ ಮೋಹನ್ ಕುಮಾರ್ ರವರು ವೇದಿಕೆಯಲ್ಲಿ ಆಸೀನರಾಗಿದ್ದರು.
ಬುದ್ಧನ ಗೀತೆಯನ್ನು ಸ್ಥಳಿಯ ಮಕ್ಕಳಾದ ಪ್ರೀತಿ, ಅಂಕಿತ, ಭವ್ಯ ಹಾಡಿದರೆ, ಕಾರ್ಯಕ್ರಮ ಮಧ್ಯದಲ್ಲಿ ಸ್ಥಳೀಯರೇ ಅನೇಕ ಹೋರಾಟದ ಗೀತೆಗಳನ್ನು ಹಾಡಿದರು. ದೇಹ ದೊಳಗಿನ ರಕ್ತ ಒಂದೇ ಬಡವರೆಲ್ಲರ ಬಾಧೆ ಒಂದೇ ಮತದ ಮತಲ್ಲಿ ಮಣ್ಣಾಗ ಬೇಡ ಅಣ್ಣ ಕೋಲಣ್ಣ…..ಎಂದು ಶ್ರೀಮತಿ ಪಾರ್ವತಮ್ಮ ನವರು ಹಾಡಿದ್ದು ದಲಿತ ಸಂಘರ್ಷ ಸಮಿತಿಯ ಹೋರಾಟದ ಕಾಲಘಟ್ಟವನ್ನು ಹೋರಾಟದ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಮ್ಮೆ ನೆನಪಿಸಿದ್ದು, ಹೋರಾಟ ನಿಂತ ನೀರಲ್ಲ ಅದು ಸದಾ ಚಲನೆಯಲ್ಲಿ ಇರುತ್ತದೆ. ಎಂದು ಎಲ್ಲರಿಗೂ ಮನಮುಟ್ಟುವಂತೆ ದಲಿತ ಸಂಘರ್ಷ ಸಮಿತಿಯ ಹೋರಾಟ ಗೀತೆಯನ್ನು ಹಾಡಿದರು.
ಅಂಬೇಡ್ಕರ್ ಗೀತೆಯನ್ನು ಜಿ.ಕೆ ಶೇಖರ್ ಅವರು ಹಾಡಿದರೆ, ಪರಿವರ್ತನೆ ಗೀತೆಯನ್ನು ವಸಂತ್ ಕುಮಾರ್, ಮೋಹನಾಕ್ಷಿ ತಂಡದವರು ಹಾಡಿದರು.
ಸಂವಿಧಾನದ ಪೀಠಿಕೆಯನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಊರಿನ ಪುಟ್ಟ ಮಕ್ಕಳು ಬೋಧಿಸಿದ್ದು ಕಾರ್ಯಕ್ರಮದ ಮೆರುಗನ್ನೇ ಹೆಚ್ಚಿಸಿತು.
ಕಾರ್ಯಕ್ರಮವನ್ನು ಸೈದ್ಧಾಂತಿಕವಾಗಿ ಏಪ್ರಿಲ್ 14ರ ದಿನದಂದೆ ಮಾಡಲು ಅನೇಕ ಉತ್ಸಾಹಿ ಯುವಕರು ಯುವತಿಯರು ಅನೇಕ ದಿನಗಳಿಂದ ಅವಿರತವಾಗಿ ದುಡಿದಿದ್ದು ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು.
ದಿನಾಂಕ.14 04.2026ನೇ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಲಿಖಿತ್ ರವರು ಮಾತನಾಡಿದರೆ, ಹಾಸನದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮದ ಪ್ರತಿಭಾವಂತರಾದ ಶ್ರೀಯುತ ನಾಗೇಶ್ ರವರು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು, ಹಾಗೂ ಗ್ರಾಮದಲ್ಲಿ ಪ್ರಥಮ ಸರ್ಕಾರಿ ನೌಕರರಾಗಿ ಗುರುತಿಸಿಕೊಂಡು ಪ್ರಸ್ತುತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅರೇ ಹಳ್ಳಿಯಲ್ಲಿ (SDA) ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತ ಕುಮಾರಸ್ವಾಮಿಯವರು ಅಚ್ಚುಕಟ್ಟಾಗಿ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಪ್ರೀತಿಯಿಂದ ಶ್ರೀಮತಿ ಭೂಮಿಕರವರು ವಂದಿಸಿದರು.
ಕಾರ್ಯಕ್ರಮಕ್ಕೆ ಎಲ್ಲರೂ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಾಗಿ ಭಾಗವಹಿಸಿ ಡಾ. ಬಿ. ಆರ್. ಅಂಬೇಡ್ಕರ್ ರವರ ವಿಚಾರದ ಜಯಂತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು……..
🌹🌹🌹🌹🌹🌹🌹🌹🌹
ವರದಿ :
ಶ್ರೀಯುತ ಸುರೇಶ್ ನಲ್ಕೆ
8618634087…….
🙏🙏🙏🙏🙏🙏🙏🙏🙏

