ಸಾಣ್ಣೇಹಳ್ಳಿಯಲ್ಲಿ ಚಿಣ್ಣರ ಲೋಕದ ಕಲರವ ~ ಬೇಸಿಗೆ ರಂಗ ಶಿಬಿರಕ್ಕೆ ಅಹ್ವಾನ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಸಾಣ್ಣೇಹಳ್ಳಿಯಲ್ಲಿ ಚಿಣ್ಣರ ಲೋಕದ ಕಲರವ ~ ಬೇಸಿಗೆ ರಂಗ ಶಿಬಿರಕ್ಕೆ ಅಹ್ವಾನ.
ಹೊಸದುರ್ಗ ಏ ೦೯: ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು ಸಾಣ್ಣೇಹಳ್ಳಿಯಲ್ಲಿರುವ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಇದೇ 2026ರ ಏಪ್ರಿಲ್ 13ರಿಂದ 30ರ ವರೆಗೆ 17 ದಿನಗಳ ಕಾಲ ವಸತಿ ಸಹಿತ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಸತತ 17 ವರ್ಷಗಳ ಕಾಲದಿಂದ ಈ ಮಕ್ಕಳ ಬೇಸಿಗೆ ಶಿಬಿರವನ್ನು ಈ ಮೇಲ್ಕಂಡ ಸಂಘಟನೆಗಳು ಆಯೋಜಿಸುತ್ತಾ ಬರುತ್ತಿವೆ, ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ವಿಶಿಷ್ಟವಾಗಿ ರಂಗಕಲೆ, ಪರಿಸರ, ಸಂಗೀತ, ಯೋಗ, ಆರೋಗ್ಯ, ಮಣ್ಣು ನೀರು, ಹಾಡುಗಾರಿಕೆ ಸೇರಿದಂತೆ ಓದಿನೊಂದಿಗೆ ಸಮಾಜಮುಖಿಯಾಗಿ ಸರ್ವೋದಯದ ಬದುಕನ್ನು ಕುರಿತು ಮಕ್ಕಳ ಮನೋವಿಕಾಸದ ಬಗ್ಗೆ ಈ ಶಿಬಿರ ಮಕ್ಕಳೊಂದಿಗೆ ಮಾತನಾಡುತ್ತದೆ.
ಇಂತಹ ಈ ಬೇಸಿಗೆ ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು ಶಿಬಿರಾರ್ಥಿಗಳಾಗಿ ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಾ ಬರುತ್ತಿದ್ದಾರೆ.
5 ರಿಂದ 10 ನೇ ತರಗತಿಯ ಒಟ್ಟು ನೂರು ವಿದ್ಯಾರ್ಥಿಗಳಿಗೆ ಮಾತ್ರ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ನಿಗದಿತವಾದ ಶುಲ್ಕವನ್ನು ಬರಿಸಿ ನೊಂದಣಿ ಮಾಡಿಕೊಂಡವರಿಗೆ ಊಟ ಮತ್ತು ವಸತಿಯ ಜೊತೆಗೆ ವಿವಿಧ ವಿಷಯಗಳ ಮೇಲೆ ತಜ್ಞರಿಂದ ಮಾಹಿತಿ ಮತ್ತು ಪ್ರಾಯೋಗಿಕ ಚಟುವಟಿಕೆಗಳು ನಡೆಯುತ್ತವೆ.
ಈ ಬೇಸಿಗೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ನೋಂದಾವಣೆಯಾಗಿದ್ದು ಇನ್ನು ಕೆಲವೇ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ
ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ
ರಾಜು ಡಿ. 9972007015
ಮತ್ತು ಈ. ಮಧು 9448398144
ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

