ಮೂಡಿಗೆರೆ :ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಹೇಮಾ ಸಿಂಧೂರ ಳಿಗೆ ಅಭಿನಂದನೆ….
1 min read

ಮೂಡಿಗೆರೆ :ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಹೇಮಾ ಸಿಂಧೂರ ಳಿಗೆ ಅಭಿನಂದನೆ.

ಮೂಡಿಗೆರೆ :ಸ್ಥಳೀಯ ಬಿಜಿ ಎಸ್ ವಿಎಸ್. ಪಿಯು ಕಾಲೇಜಿನ ವಿದ್ಯಾರ್ಥಿನಿ ಹೇಮಾಸಿಂಧೂರ ರಾಜ್ಯಕ್ಕೆ ಪಿ ಯುಸಿ ವಾಣಿಜ್ಯ ವಿಭಾಗ ದಲ್ಲಿ 5ನೇ ರಾಂಕ್ ಪಡೆದಿರುತ್ತಾರೆ. ಇವರು ಮೆಸ್ಕಾಂ ಇಲಾಖೆಯ ಕಿರಿಯ ಇಂಜಿನಿಯರ್ ಷಣ್ಮುಖ ಹಾಗೂ ಅನುಸೂಯ ದಂಪತಿಯ ಪುತ್ರಿ ಇವರು ಮೂಡಿಗೆರೆ ತಾಲ್ಲೂಕು ಗೆ ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಮ್ಮೆ ತಂದಿರುತ್ತಾರೆ..
ಇವರಿಗೆ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿದರು. ನಂತರ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಈ ಪ್ರತಿಭೆ. ಭರತ ನಾಟ್ಯ ಹಾಗೂ ಸಂಗೀತ ದಲ್ಲೂ ಸಹ ಸೈ ಎನಿಸಿಕೊಂಡಿದ್ದು ಇವರು ಮುಂದಿನ ವಿದ್ಯಾಭ್ಯಾಸ ಮೈಸೂರ ನಲ್ಲಿ ಸಿ ಎ ಮಾಡುವ ಅಭಿಲಾಷೆ ಹೊಂದ್ದಿದರೆಂದು ಹೇಳಿದರು. ಹಾಗೂ ಮುಂದಿನ ದಿನಗಳಲ್ಲಿ ನಿಮ್ಮ ವಿದ್ಯಾಭ್ಯಾಸ ಕ್ಕೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಿಳಿದರು.
ಪೋಷಕರಾದ ಶಣ್ಮುಖರವರು ಮಗಳ ವಿದ್ಯಾಭ್ಯಾಸ ಕ್ಕೆ ಹಾಗೂ ಕಲೆ ಸಾಹಿತ್ಯ ಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೇಮಾ ಸಿಂಧುರ ಮೊದಲಿಗೆ ನಮ್ಮ ತಂದೆ ತಾಯಿ ಗೆ ಕೃತಜ್ಞತೆ ಸಲ್ಲಿಸಿದಳು. ನನಗೆ ವಿದ್ಯಾ ಸಂಸ್ಥೆಯ ಶಿಕ್ಷಕರು ಆಡಳಿತ ಮಂಡಳಿ ಯವರು ಸಂಪೂರ್ಣ ಸಹಕಾರ ನೀಡಿದರು ಹಾಗೂ ನಾನು ಎಲ್ಲಾ ವಿಷಯ ದಲ್ಲಿ ಸಂಪೂರ್ಣ ಅಂಕ ಗಳನ್ನು ನಿರೀಕ್ಷಿಸಿದ್ದೆ. ಪ್ರತಿದಿನ ಬೆಳಿಗ್ಗೆ ಜಾಸ್ತಿ ಓದುತ್ತಿದ್ದೆ ಮುಂದೆ ಸಿ ಎ ಮಾಡಿ ಲೆಕ್ಕ ಪರಿಶೋಧಕ ರಾಗಿವ ಕನಸಿದೆ ಎಂದರು.
ಕಾರ್ಯಕ್ರಮ ದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್ ಅಧ್ಯಕ್ಷತೆ ವಹಿಸಿ ಹೆಣ್ಣುಮಕ್ಕಳು ಇಂತಹ ಸಾಧನೆ ಮಾಡಿದಾಗ ಜೀವನ ಸಾರ್ಥಕ ವಾಗುತ್ತದೆಂದರೂ.
ಪ್ರತಿಷ್ಠಾನದ ಗೌರವ ಟ್ರಸ್ತಿ ಸಿ ಸಿ ರಾಜಣ್ಣ. ಡಿಂಪಲ್. ಯೋಗಮ್ಮ. ಸಾವಿತ್ರಮ್ಮ. ಹಾಗೂ ಮುಂತಾದವರು ಉಪಸ್ಥಿತರಿದ್ದರು.

