ಗೆಳೆಯರ ಬಳಗ* ಬಿ ಹೊಸಹಳ್ಳಿ ಇವರ ವತಿಯಿಂದ ಬಿ ಹೊಸಹಳ್ಳಿ ಗ್ರಾಮದಲ್ಲಿ *ಬೋದಿಸತ್ವ, ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್* ಜಯೊಂತೋತ್ಸವ ಕಾರ್ಯಕ್ರಮ…
1 min read
- *ಗೆಳೆಯರ ಬಳಗ* ಬಿ ಹೊಸಹಳ್ಳಿ ಇವರ ವತಿಯಿಂದ ಬಿ ಹೊಸಹಳ್ಳಿ ಗ್ರಾಮದಲ್ಲಿ *ಬೋದಿಸತ್ವ, ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್* ಜಯೊಂತೋತ್ಸವ ಕಾರ್ಯಕ್ರಮವನ್ನ


ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸಮಿತಿಯ ಅಧ್ಯಕ್ಷರು ಶ್ರೀಯುತ ರವಿ ಹೆಚ್ ಎಂ, ಜೆಸಿಐ ಮಾಜಿ ಅಧ್ಯಕ್ಷರಾದ ಶ್ರೀಯುತ ಜೆ ಸಿ ಐ ಕೃಷ್ಣೆಗೌಡ್ರು ಮತ್ತು ಊರಿನ ಹಿರಿಯರು ಮತ್ತು ಮಕ್ಕಳೆಲ್ಲರೂ ಸೇರಿ ಕೇಕ್ ಕತ್ತಿರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಲಾಯಿತು ನಂತರ ಎಲ್ಲರಿಗೂ ಸಿಹಿ ವಿತರಿಸಿ ಗ್ರಾಮದ ಭವ್ಯ ಬೀದಿಗಳಲ್ಲಿ ನಾಸಿಕ್ ಡೊಲ್, ಸುಗ್ಗಿ ಕುಣಿತ ತಂಡದವರಿoದ ಮತ್ತು ಸಮಸ್ತ ಗ್ರಾಮಸ್ಥರಿಂದ ಮೆರವಣಿಗೆ ಸಾಗಲಾಯಿತು ನಂತರ ಗ್ರಾಮದ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನ ನಡೆಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಅಶ್ವಿನಿ ಮತ್ತು ತಂಡದವರು ಭೀಮಗೀತೆಯನ್ನ ಹಾಡಲಾಯಿತು ನಂತರ ಯುವ ಶಿಕ್ಷಕಿಯಾದ ಕುಮಾರಿ ರಂಜಿತಾ ರವರು ಸರ್ವರನ್ನು ಸ್ವಾಗತಿಸಿದರು. ನಂತರ ಯುವ ಉಪನ್ಯಾಸಕರಾದ ಕುಮಾರಿ ಮಾನವೀಯವರು ಭಾರತದ ಶ್ರೇಷ್ಠ ಗ್ರಂಥವಾದ ಸಂವಿಧಾನದ ಪೀಠಿಕೆಯ ಪ್ರಸ್ತಾವನೆಯನ್ನು ಬೋದಿಸಿದರು, ನಂತರ ಕಾರ್ಯಕ್ರಮ ಉದ್ಘಾಟಕರು ಮತ್ತು ಪ್ರಮುಖ ಭಾಷಣಕಾರರಾದ ಯುವ ವಕೀಲರಾದ ಶ್ರೀಯುತ ಚಂದ್ರಶೇಖರ್ ಕಲ್ಗುಡ್ಡ ಮತ್ತು ವೇದಿಕೆ ಗಣ್ಯರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನ ಸಲ್ಲಿಸಲಾಯಿತು.
ಡಾ ಬಿ ಆರ್ ಅಂಬೇಡ್ಕರ್ ರವರು ಒಂದು ವೇಳೆ ಭಾರತದ ಶ್ರೇಷ್ಠ ಗ್ರಂಥವಾದ ಸಂವಿಧಾನವನ್ನ ಬರೆಯದೇ ಇದ್ದರೆ ಸಮಾಜದ ಸ್ಥಿತಿ ಚಿಂತಾಜನಕವಾಗಬೇಕಿತ್ತು ಅವರು ಕೊಟ್ಟಿರುವ ಸಂವಿಧಾನದ ಸವಲತ್ತುಗಳು ಮತ್ತು ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕು, ಅಟ್ರಾಸಿಟಿ, ಪೋಕ್ಸೋ, ಆಸ್ತಿ ಹಕ್ಕು, ಮಹಿಳೆಯರ ಸಬಲೀಕರಣ, ಹಿಂದೂ ಕೋಡ್ ಬಿಲ್, ಸಮಾಜದಲ್ಲಿ ಹೇಗೆ ಎಲ್ಲರೂ ನಡೆದುಕೊಳ್ಳಬೇಕು, ಹಾಗೂ
ಯುವ ಜನತೆ ಪ್ರಸ್ತುತ ವಿದ್ಯಾಮಾನದಲ್ಲಿ ತಮ್ಮ ಪಾತ್ರವನ್ನ ಹೇಗೆ ವಹಿಸಬೇಕೆಂದು ಸುದೀರ್ಘವಾಗಿ ವಿಚಾರವನ್ನು ಮಂಡಿಸಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನ ಕೋರಿದರು.
ನಂತರ
ಜೇಸಿಐನ ಮಾಜಿ ಅಧ್ಯಕ್ಷರಾದ ಶ್ರೀಯುತ ಕೃಷ್ಣೆ ಗೌಡ್ರು ರವರು ಉದ್ಘಾಟಕರ ಮಾತುಗಳಿಂದಲೇ ಮುಂದುವರೆಸುತ್ತಾ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ ಎಲ್ಲರೂ ಅದನ್ನ ಸರಿಯಾಗಿ ಬಳಸಿಕೊಂಡು ತಮ್ಮ ಜೀವನವನ್ನ ಸರಿದಾರಿಯಲ್ಲಿ ಕೊಂಡೋಯ್ಯಬೇಕು ಎಂದು ತಿಳಿಸುತ್ತಾ ಗ್ರಾಮಕ್ಕೆ ಅಗತ್ಯವಿರುವ ಗದ್ದೆಯಲ್ಲಿ ರಸ್ತೆ ಮಾಡುವ ವಿಚಾರವಾಗಿ ಪಾಲುದಾರರ ಸಹಕಾರವಿದೆ ನಿಮ್ಮಕಡೆಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕು ಇದಕ್ಕೆ ಸಂಬಂದಿಸಿದoತೆ ಮುಂದಿನ ಕಾರ್ಯವನ್ನ ಎಲ್ಲರೂ ಸೇರಿ ಮಾಡೋಣ ಎಂದರು. ಹೊಸಹಳ್ಳಿಯ ಸೊಸೆ, ನಿವೃತ್ತ ಉಪನ್ಯಾಸಕರು,
ರಾಜ್ಯ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸಾವಿತ್ರಿ ಮಹೇಂದ್ರ ಮೌರ್ಯ ರವರು ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಪಾತ್ರವೇನು, ಮಹಿಳೆಯರು ಸಬಲರಾದರೆ ಮನೆ, ಊರು, ಸಮಾಜ ಸುಂದರವಾಗುತ್ತೆ ಅವರುಗಳು ಶೋಷಣೆಗೆ ಒಳಗಾಗದೆ ಒಗ್ಗಟ್ಟಾಗಬೇಕು ಸಮ ಸಮಾಜದ ನಿರ್ಮಾಣದಲ್ಲಿ ಮಹಿಳೆಯರು ಮತ್ತು ಪುರುಷ ಸಮಾನವಾದ ಪಾತ್ರವನ್ನ ವಹಿಸಬೇಕು ತಿಳಿಸುತ್ತಾ, ಸಮುದಾಯ ಭವನಕ್ಕೆ ನನ್ನ ವೈಯಕ್ತಿಕವಾಗಿ ಗಾಳಿಗಾಗಿ *ಫ್ಯಾನ್* ವವಸ್ಥೆಯನ್ನು ಮಾಡಿಕೊಡುತ್ತೇನೆ ಮತ್ತು ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನ ಕೋರಿದರು,
ನಂತರ ಹೊಸಹಳ್ಳಿಯ ಮಗ, ಅಂಚೆ ಇಲಾಖೆಯ ನಿವೃತ್ತ ಅಧಿಕಾರಿಗಳು, ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಕಾರ್ಯದರ್ಶಿಗಳು, ಸಾಮಾಜಿಕ ಕಳಕಳಿಯುಳ್ಳವರಾದ ಶ್ರೀಯುತ ಮಹೇಂದ್ರ ಮೌರ್ಯರವರು ತನ್ನ ಭಾಲ್ಯದ ಜೀವನವನ್ನ ನೆನಪುಮಾಡಿಕೊಳ್ಳುತ್ತಾ ಮೌಢ್ಯತೆಯನ್ನ ಬದಿಗೊತ್ತಿ, ಸಂವಿಧಾನತ್ಮಕವಾಗಿ ವಿಚಾರವಂತರಾಗಬೇಕು, ಯುವ ಜನತೆಯು ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕು ಅವರು ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾವಂತರಾಗಬೇಕು, ವಿಚಾರವಂತರಾಗಬೇಕು, ಒಂದು ಊರಲ್ಲಿ ದೇವಸ್ಥಾನದ ಗಂಟೆ ಬಾರಿಸದೆ ಶಾಲೆಯ ಗಂಟೆಯನ್ನ ಬಾರಿಸುವಂತೆ ಮಾಡಬೇಕು ಕೊನೆಗೆ ಎಲ್ಲರಿಗೂ ಮುಕ್ತಿ ಸಿಗೋದೇ ಅಂಬೇಡ್ಕರ್ ಮತ್ತು ಬುದ್ಧನ ಮಾರ್ಗವನ್ನ ಅನುಸರಿಸಿದಾಗ ಮಾತ್ರ ಎಂದು ತಿಳಿಸುತ್ತಾ, ಅಂಬೇಡ್ಕರ್ ಆಶಯದಂತೆ ಖಡ್ಗಕಿಂತ ಅರಿತವಾದದ್ದು ಲೇಖನಿ ಅದರ ನಿಟ್ಟಿನಲ್ಲಿ ಇನ್ನೂ ಮುಂದೆ ಪ್ರತಿ ವರ್ಷವೂ ನಮ್ಮೂರಿನ SSLC ಮತ್ತು PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನನ್ನ ವಯಕ್ತಿಕವಾಗಿ ನೀಡುತ್ತೇನೆ ಮತ್ತು ಊರಿಗಾಗಿ ಅಂಬೇಡ್ಕರ್ ಪುತ್ತಳಿಯನ್ನ ಕೊಡುಗೆಯಾಗಿ ನೀಡುತ್ತೇನೆ, ತಾವೆಲ್ಲರೂ ಕೈಜೋಡಿಸಿಬೇಕು, ಒಂದಾಗಬೇಕು ಎಂದು ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಕೋರಿದರು.
ನಂತರದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಗೌರಮ್ಮ ರವರು ನಮ್ಮೂರ ಶಾಲೆ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಿ ಎಂದು ತಿಳಿಸಿದರು ಮತ್ತು ಊರಿನ ಹಿರಿಯರಾದ ಈರಯ್ಯ ನವರು ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಗ್ರಾಮದ ಯುವ ಶಿಕ್ಷಕರುಗಳಾದ ಮಾನವಿ, ರಂಜಿತಾ, ವಿನಯ್ ರವರಿಗೆ ಮತ್ತು ನಮ್ಮೂರಿನ SSLC ಮತ್ತು PUC ವಿದ್ಯಾರ್ಥಿಗಳಿಗೆ ಶಾಲು ಮತ್ತು ಹಾರವನ್ನು ಹಾಕಿ ಗೌರವಸಲ್ಲಿಸಲಾಯಿತು. ಅಂಗನವಾಡಿ ಯಿಂದ ಪದವಿ ಮತ್ತು ವಿವಿಧ ಕೋರ್ಸ್ ಗಳನ್ನ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ನು ನೀಡಿ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಲಾಯಿತು. ಇವರೆಲ್ಲರಿಗೂ ವೇದಿಕೆಗಣ್ಯರು, ಗೆಳೆಯರ ಬಳಗದ ಪದಾಧಿಕಾರಿಗಳು, ಹಿರಿಯರು ಪ್ರತಿಭಾ ಪುರಸ್ಕಾರವನ್ನ ನೆರವೇರಿಸಿಕೊಟ್ಟರು. ನಂತರ ನಮ್ಮೂರಿನ ಸರ್ಕಾರಿ ನೌಕರರು ವಯೋನಿವೃತ್ತಿಯನ್ನ ಹೊಂದಿರುವoತಹ ಶ್ರೀಯುತ ಮಹೇಂದ್ರ ಮೌರ್ಯ ಮತ್ತು ಶ್ರೀಮತಿ ಸಾವಿತ್ರಿ ಮಹೇಂದ್ರ ಮೌರ್ಯ ದಂಪತಿಗಳಿಗೆ ಅಭಿನಂದನಾ ಪತ್ರವನ್ನ ನೀಡಿ ಗೌರವಿಸಲಾಯಿತು.
ನಂತರ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಯುತ ರವಿ ಹೆಚ್ ಎಂ ರವರು ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನ ತಿಳಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಂತರ ಶ್ರೀಯುತ ಗೋಪಾಲ್ ರವರು ವೇದಿಕೆಯಲ್ಲಿ ಆಸೀನರಿದ್ದ ಸರ್ವರಿಗೂ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ, ನಿರೂಪಕರಾದ ಶ್ರೀ ಜಯಪಾಲ್ ರವರಿಗೂ, ದಾನಿಗಳಿಗೂ, ಮೆರವಣಿಗೆ ಪಾಲ್ಗೊಂಡ ಹೊಸ್ಕೆರೆಯ ನಾಸಿಕ್ ಡೋಲ್ ನವರಿಗೂ ಧನ್ಯವಾದಗಳನ್ನ ಸಲ್ಲಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಾನಿಕ ಮತ್ತು ನಿರೀಕ್ಷಾ ಇವರಿಂದ ಸ್ವಾಗತ ನೃತ್ಯ, ಭೀಮಾ ಗೀತೆಗಳನ್ನ ಊರಿನ ಯುವಕರು ಮತ್ತು ಮಿತ್ರ ಜಾನಪದ ಕಲಾ ಸಂಘದ ಗಾಯಕರಾದ ನವೀನ್ ಕಣಚೂರು ಇವರಿಂದ ಹಾಡಲಾಯಿತು, ಅಂಬೇಡ್ಕರ್ ಗೀತೆಗಳಿಗೆ ಊರಿನ ಮಹಿಳೆಯರು ಮತ್ತು ಮಕ್ಕಳಿಂದ ನೃತ್ಯವನ್ನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೇರುಗನ್ನ ನೀಡುವ ಮೂಲಕ ಕಾರ್ಯಕ್ರಮವನ್ನ ಮುಗಿಸಲಾಯಿತು..

