ಮೂಡಿಗೆರೆ ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರು ಬಾಲಕೃಷ್ಣರವರ ಅದ್ಯಕ್ಷತೆಯಲ್ಲಿ. ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಬೆಳೆಗಾರರ ನಡುವಿನ ಸಭೆ ಪಟ್ಟಣದ ಬೆಳೆಗಾರರ ಸಂಘದ ಕಾಫ಼ಿ ಭವನದ ಸಭಾಂಗಣದಲ್ಲಿ ಗುರುವಾರ ನಡೆಯಿತು.
1 min read
ಮೂಡಿಗೆರೆ : ಮೂಡಿಗೆರೆ ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರು ಬಾಲಕೃಷ್ಣ ನೆತ್ರತ್ವದಲ್ಲಿ…
ತಾಲ್ಲೂಕಿನ ಬೆಲೆಗಾರರಿಗೆ ಕಾರ್ಮಿಕರಿಗೆ ಸಣ್ಣಸಣ್ಣ ರೈತರ ನೆಮ್ಮದಿಯನ್ನು ಕಸಿಯುತ್ತಿರುವ ಕಾಡನೇ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಬೆಳೆಗಾರರ ಸಂಘ ಮೂಡಿಗೆರೆ ಕೆ ಜಿ ಎಪ್ ಮತ್ತು ಅರಣ್ಯ ಇಲಾಖೆ ವತಿಯಿಂದ ಚಿಕ್ಕಮಗಳೂರು ಹಾಸನ ಕೊಡಗು ಜಿಲ್ಲೆಗಳ ಉನ್ನತ ಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಬೆಳೆಗಾರರ ನಡುವಿನ ಸಭೆ ಪಟ್ಟಣದ ಬೆಳೆಗಾರರ ಸಂಘದ ಕಾಫ಼ಿ ಭವನದ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಎಂ ಜೆ ದಿನೇಶ್ ಮಾತನಾಡಿ ಬೆಳೆಗಾರರ ಸಮಸ್ಯೆಯ ಬಗ್ಗೆ ಪ್ರಾರಂಭದಿಂದಲೂ ಸರ್ಕಾರದ ಜೊತೆಯಲ್ಲಿ ಚರ್ಚಿಸುತ್ತಿದ್ದು ಬಹುತೇಕ ಸಣ್ಣ ಬೆಳೆಗಾರರಿಗೆ ಬದುಕು ಕಟ್ಟಿಕೊಳಲು ಆಗುತ್ತಿಲ್ಲ ಪ್ರತಿ ಸಂದರ್ಭದಲ್ಲು ಕಾಡು ಪ್ರಾಣಿ ಹಾಗೆ ಕಾಡನೇಯಿಂದ ಬೆಳೆ ನಾಶವಾಗುತ್ತಿದೆ ಬೆಳೆನಾಶದ ಅನುದಾನವನ್ನು ಹೆಚ್ಚಿಸಿದರೆ ರೈತರಿಗೆ ಅನುಕೂಲ ಆಗುತ್ತದೆ ಈ ಭಾಗದ ಕಾಡನೆಗಳನ್ನು ಬೇರೆಡೆಗೆ ಅಟ್ಟುವುದಕ್ಕಿಂತ ಅದಕ್ಕೆ ಶಾಶ್ವತಾವಾದ ಪರಿಹಾರ ವನ್ನು ಕಂಡು ಹಿಡಿಯಬೇಕು ಎಂದು ತಿಳಿಸಿದರು
ಮಾಜಿ ಶಾಸಕ ಹೆಚ್ ಎಂ ವಿಶ್ವನಾಥ್ ಮಾತನಾಡಿ ಆನೆಗಳನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಿಸುವುದನ್ನು ಬಿಟ್ಟು ಸಕಲೇಶಪುರದ ಹೆತ್ತೂರಿನಲ್ಲಿ ಸುಮಾರು 18 ಎಕರೆಗೂ ಹೆಚ್ಚು ಕಾಡು ಇದೆ ಅಲ್ಲಿ ಬಿಡರ ಮಾಡಿದರೆ ಅನುಕೂಲವಾಗುತ್ತದೆ ಇಲ್ಲಿಯವರೆಗೆ ಮಾಡಿರುವ ಸೋಲಾರ್ ಬೇಲಿ ಬ್ಯಾರಿಗೆಟ್ ನಂತಹ ಯೋಜನೆಗಳು ಉಪಯೋಗ ಆಗಿಲ್ಲ.
ಶ್ರೀಲಂಕಾದಲ್ಲಿ ಹೆಚ್ಚು ಆನೆ ಬಿಡರಗಳು ಇದೆ ತುಂಬಾ ಚನ್ನಾಗಿ ಆನೆಗಳನ್ನು ನೋಡಿಕೊಳಳುವುದರೊಂದಿಗೆ ಪ್ರವಾಸಿ ತಣ ಮಾಡಿದ್ದಾರೆ ಅದೇ ಮಾದರಿಯಲ್ಲಿ ಅಧಿಕಾರಿಗಳು ಇಲ್ಲಿಯೂ ಯೋಜನೆ ಮಾಡಿದರೆ ಒಳ್ಲೆಯದು. ನಾವುಗಳು ರಾಜಕಾರಣಿಗಳನ್ನು ನಂಬುವುದಕ್ಕಿಂತ ಅಧಿಕಾರಿಗಳನ್ನು ನಂಬೋಣ. ಅವರನ್ನು ಗೌರವದಿಂದ ಕಾಣುವುದರೊಂದಿಗೆ ಅವರೊಂದಿಗೆ ಕೈ ಜೋಡಿಸೋಣ ಎಂದರು
ಹುರುಡಿ ವಿಕ್ರಂ ಮಾತನಾಡಿ ಹೇಮಾವತಿ ನದಿಯ ಬಳದಂಡೆಯಲ್ಲಿ ಇರುವ ಕಾಡಿನಲ್ಲಿ ಹಿಂದೆ ಆನೆಗಳು ವಾಸಿಸುತಿದ್ದವು ಆದರೆ ಈಗ ಅಲ್ಲಿ ಹೆಚ್ಚು ಕೊರೆ ಮಾಪಿಯ ದಿಂದ ಪ್ರತಿ ದಿನ ಬಂಡೆ ಬ್ಲಾಸ್ಟ್ ಮಾಡುವ ಶಬ್ದಕ್ಕೆ ಆನೆಗಳು ಊರಿಗೆ ಲಗ್ಗೆ ಇಡುತ್ತಿವೆ ರಾಷ್ಟ್ರೀಯ ಹೆದ್ದಾರಿಯ ಹೊಸೂರು ಎಸ್ಟೇಟ್ ಬಳಿ ರಸ್ತೆಗೆ ಒಂದು ಬ್ರಿಡ್ಜ್ ಅಳವಡಿಸಿದರೆ ಈ ಭಾಗದ ಆನೆಗಳು ವಾಪಸು ಹೋಗಲು ಸಾಧ್ಯವಾಗುತ್ತದೆ ಎಂದರು ಮುಖ್ಯ ಅರಣ್ಯಸಂರಕ್ಷಣ ಅಧಿಕಾರಿ ಯಶಪಲ್ ಕ್ಷಿರ ಸಾಗರ್ ಮಾತನಾಡಿ ಕಳೆದ ಹಲವರು ದಿನಗಳಿಂದ ಆನೆಗಳನ್ನು ಪತ್ತೆ ಹಚ್ಚಿ ಹೊಡಿಸುವ ಕೆಲಸ ಮೂರು ಜಿಲ್ಲೆಗಳಲ್ಲಿ ಆಗುತ್ತಿದೆ ಈ ಭಾಗದಲ್ಲಿ 40 ಆನೆಗಳು ಸಂಚಾರಿಸುತ್ತಿದ್ದು ಅದನ್ನು ಸಾಗಿಸಲು ತಕ್ಷಣ ಅಧಿಕಾರಿಗಳ ಜೊತೆ ಚರ್ಚಿಸಿ ಸಾಗಿಸುವ ಕಾರ್ಯಕ್ಕೆ ಮುಂದಾಗುತ್ತೆವೆ.ನಮ್ಮಲ್ಲಿ ಒಳ್ಳೆ ಅಧಿಕಾರಿಗಳ ತಂಡ ಇದೆ ಮೂರು ಜಿಲ್ಲೆಗಳ ಬೆಳೆಗಾರರ ಕಾರ್ಮಿಕರ ಸಮಸ್ಯೆ ಬಗ್ಗೆ ವಾಸ್ತವ ವರದಿಯ ದಾಖಲೆಯನ್ನು ಸಿದ್ದಪಡಿಸಿ ಸಮಸ್ಯೆಯನ್ನು ಸರಿಪಡಿಸಲು ಮುಂದಾಗುತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ಬಿ ನಿಂಗಯ್ಯ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ , ಕೊಡಗು ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸೋನಲ್ ಹಾಸನ ವಿಭಾಗದ ಸಿ ಎಪ್ ಏಡುಕೊಂಡಲ್ , ಡಿ ಎಫ್ ಓ, ರಮೇಶ್ ಬಾಬು, ಬಿ ಎಸ್ ಜೈರಾಮ್, ಸೆಂತಿಲ್, ದೀಪಕ್, ಮೂಡಿಗೆರೆ ಎ ಸಿ ಎಫ್ ಆಕರ್ಷ ದೊಡ್ಡಯ್ಯ,ಸೌರವ್ ಕುಮಾರ್, ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್ ನೂರಾರು ಬೆಳೆಗಾರರು ಬಾಗವಹಿಸಿದ್ದರು.

