लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಧಿಕಾರದ ಅಮಲು, ಹಣದ ಮದ, ನೆತ್ತಿಗೇರಿದ ಅಹಂ… ಇಂತಾ ದುರಹಂಕಾರಿಗೆ ಪೊಲೀಸ್ ಹಾಗೂ ಆಡಳಿತ ಯಂತ್ರವೂ ಬೆನ್ನಿಗಿದ್ದು ಅಭಯ ನೀಡಿಬಿಟ್ರೆ ಏನೆಲ್ಲಾ ಅನಾಹುತ ಆಗಬಹುದು ಅನ್ನೋದಕ್ಕೆ ಅದ್ಭುತ ಉದಾಹರಣೆ ಈ ವಿನಯ್ ಕುಲಕರ್ಣಿ…

1 min read

ಅಧಿಕಾರದ ಅಮಲು, ಹಣದ ಮದ, ನೆತ್ತಿಗೇರಿದ ಅಹಂ…
ಇಂತಾ ದುರಹಂಕಾರಿಗೆ ಪೊಲೀಸ್ ಹಾಗೂ ಆಡಳಿತ ಯಂತ್ರವೂ ಬೆನ್ನಿಗಿದ್ದು ಅಭಯ ನೀಡಿಬಿಟ್ರೆ ಏನೆಲ್ಲಾ ಅನಾಹುತ ಆಗಬಹುದು ಅನ್ನೋದಕ್ಕೆ ಅದ್ಭುತ ಉದಾಹರಣೆ ಈ ವಿನಯ್ ಕುಲಕರ್ಣಿ…

ನೂರಾರು ಕೋಟಿಗಟ್ಲೆ ಆಸ್ತಿಪಾಸ್ತಿ…
ಮಂತ್ರಿಗಿರಿ, ಬಯಸಿದ್ದೆಲ್ಲಾ ಕಾಲಬುಡಕ್ಕೇ ಬಂದು ಬೀಳೋ ಐಷಾರಾಮಿ ಬದುಕು. ಎಲ್ಲವೂ ಕೈಗೆಟಕುತ್ತಿದ್ದಾಗ ನಾನೇನು ಮಾಡಿದ್ರೂ ಯಾರೇನು ಕಿತ್ಕೋತಾರೆ, ಯಾರಿಗ್ ಮೀಟ್ರಿದೆ ನನ್ನ ಟಚ್ ಮಾಡೋಕೆ ಅನ್ನೋ ಅಹಂ ನೆತ್ತಿಗೇರಿಬಿಡುತ್ತದೆ.
ಅದೇ ಇವತ್ತು ಹ ತ್ಯೆ ಕೇಸಲ್ಲಿ ಜೀವಾವಧಿ ಶಿಕ್ಷೆಯಾಗುವ ವರೆಗೂ ಕರ್ಕೊಂಡೋಗಿದ್ದು ವಿನಯ್ ಕುಲಕರ್ಣಿಗೆ…

ಅವತ್ತು 2016ರ ಜೂನ್ 15…
ಬೆಳ್ ಬೆಳಿಗ್ಗೆ ತನ್ನದೇ ಜಿಮ್ಮಲ್ಲಿ ಪೇಪರ್ ಓದ್ತಾ ಕೂತಿದ್ದ ಯೋಗೀಶ್ ಗೌಡನ ಮೇಲೆ ಮುಗಿಬಿದ್ದ ಆರು ಜನರ ತಂಡವೊಂದು ಭೀಕರ ಹ ತ್ಯೆ ಮಾಡಿಬಿಡುತ್ತದೆ.

ಇದಾದ ಮರುದಿನವೇ…
ಪೊಲೀಸ್ ಸ್ಟೇಶನ್ನಿಗೇ ಬಂದ ಆರುಜನರ ತಂಡವು ಒಂದು ಪ್ರಾಪರ್ಟಿ ವಿವಾದಕ್ಕೆ ನಾವೇ ಕೊಂದಿದ್ದು ಅಂತ ಶರಣಾಗಿ ಬಿಡ್ತಾರೆ. ಅಲ್ಲಿಗೆ ಕೇಸೇ ಕ್ಲೋಸ್ ಆಗೋಯ್ತಲಾ.
ಆದರೆ ಇಲ್ಲಿ ಅಸಲೀ ಕಥೆಯೇ ಬೇರೆಯಾಗಿತ್ತು…

ಇದಕ್ಕೆಲ್ಲಾ ಕಾರಣವಾಗಿದ್ದು…
ಅದೊಂದು ಜಿಲ್ಲಾ ಪಂಚಾಯತ್ ಸಭೆ.
ಅಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ವಿನಯ್ ಕುಲಕರ್ಣಿಗೂ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡನಿಗೂ ನಡುವೆ ಕುಡಿಯುವ ನೀರಿನ ವಿಚಾರಕ್ಕೆ ಸಣ್ಣ ವಾಗ್ವಾದ…ಅಷ್ಟೇ.

ಯಕಶ್ಚಿತ್ ಪಂಚಾಯ್ತಿ ಮೆಂಬರ್ರು…
ನನ್ನಂತವ್ನ ಎದುರಿಗೇ ನಿಂತು ಮಾತಾಡೋಷ್ಟು ದೊಡ್ಡವನಾಗಿಬಿಟ್ನಾ? ಇಗೋ ಹರ್ಟಾಗಿಬಿಡ್ತು. ಇದು ಬೆಳೀತಾ ಹೋಗಿ ಹೋಗಿ ಅದ್ಯಾವ್ ರೇಂಜಿಗೆ ಹೆಮ್ಮರವಾಗಿಬಿಡ್ತು ಅಂದ್ರೆ,
ಕೊನೆಗೆ ಯೋಗೀಶ್ ಗೌಡನ ಹ ತ್ಯೆಯೇ ಮಾಡಿಸಿಬಿಟ್ಟಿತ್ತು.
ಇದಕ್ಕೆಲ್ಲಾ ಬೆನ್ನಿಗೆ ನಿಂತು ಹಾಲೆರೆದಿದ್ದು ಧಾರವಾಡದ ಪೊಲೀಸರು ಹಾಗೂ ಆಡಳಿತ ಯಂತ್ರ…

ಯೋಗೀಶ್ ಹ ತ್ಯೆ ಆಯ್ತಲಾ…
ಅವತ್ತು ಸಂಜೆಯೇ ಮೀಡಿಯಾಗಳಿಗೆ ಹೇಳಿಕೆ ನೀಡಿದ ಗೃಹಮಂತ್ರಿ ಪರಮೇಶ್ವರ್, ಇದು ಆಸ್ತಿ ವಿಚಾರಕ್ಕಾದ ಹ ತ್ಯೆ. ಬೇರೇನೂ ಇಲ್ಲ ಅಂತಾರೆ.
ಮರುದಿನವೇ ಆರು ಜನ ಸರಂಡರ್ ಆಗ್ತಾರೆ.
ಮಜಾ ಏನಂದ್ರೆ ಗೃಹಮಂತ್ರಿಗಳು ಹೇಳಿಕೆ ನೀಡುವಾಗ ಅವರ ಹಿಂದೆಯೇ ನಿಂತಿದ್ದವನು ವಿನಯ್ ಕುಲಕರ್ಣಿ…

ಕಾಮಿಡಿ ವಿಚಾರ ಏನಂದ್ರೆ…
ಮರುದಿನವೇ ಸರಂಡರ್ ಆದ್ರಲಾ, ಅವರ್ಯಾರೂ ಹ ತ್ಯೆ ಮಾಡಿರಲೇ ಇಲ್ಲ. ಇವರೆಲ್ಲಾ ವಿನಯ್ ಕುಲಕರ್ಣಿಯೇ ಸೃಷ್ಟಿಸಿದ್ದ ಡಮ್ಮಿ ಪೀಸುಗಳು.
ಇವರನ್ನೇ ಫಿಕ್ಸ್ ಮಾಡಿ ಕೇಸೇ ಕ್ಲೋಸ್ ಮಾಡಿದ್ದು ಪೊಲೀಸ್ ಇಲಾಖೆ…

ಅಸಲೀ ವಿಷಯ ಏನ್ ಗೊತ್ತಾ…
ಹ ತ್ಯೆಯಾಗುವ ಹಿಂದಿನ ದಿನ,
ವಿನಯ್ ಕುಲಕರ್ಣಿ ಫಾರ್ಮ್ ಹೌಸಲ್ಲಿ ಒಂದು ಮೀಟಿಂಗ್ ನಡೆಯುತ್ತೆ. ಅಲ್ಲಿ ಸೇರಿದ್ದವರು ಪೊಲೀಸರು ಹಾಗೂ ನಿಜವಾದ ಕಿಲ್ಲರ್ರುಗಳು.
ಹೇಗೆ ಹ ತ್ಯೆ ಮಾಡಬೇಕು, ನಂತರ ಯಾರನ್ನು ಫಿಟ್ ಮಾಡಬೇಕು, ಹೇಗೆ ಕೇಸ್ ಕ್ಲೋಸ್ ಮಾಡವೇಕು ಅನ್ನೋ ಅಷ್ಟೂ ಪ್ಲಾನಿಂಗು ಇವ್ರಿಬ್ರೂ ಕೂತು ಹಾಕಿರ್ತಾರೆ ಅಂದ್ರೆ ನಂಬ್ತೀರಾ?

ಇಷ್ಟೆಲ್ಲಾ ಆಗಿ ಕೇಸೇ ಕ್ಲೋಸಾಗೋಯ್ತಾ…
ಸರ್ಕಾರ ಬದಲಾಗಿ ಯಡಿಯೂರಪ್ಪ ಬಂದವ್ರೇ, ಕೇಸನ್ನು ಸಿಬಿಐ ಗೆ ಕೊಡ್ತಾರಾ,
ಆಗಲೂ ಕೇಸ್ ಹಳ್ಳ ಹಿಡಿಸಲು ಬಿಟ್ಟೂ ಬಿಡದಂತೆ ಹೋರಾಡಿದವರು ಇದೇ ಪೊಲೀಸರು.
ಸಿಬಿಐ ಕಷ್ಟಪಟ್ಟು ಸಾಕ್ಷಿಗಳನ್ನು ಹುಡುಕಿ ಅವರನ್ನು ಕೋರ್ಟಿಗೆ ಕರ್ಕೊಂಡ್ ಬರೋಕ್ ಹೇಳಿದ್ರೆ,
ಹೋಗೋ ಮೊದಲು ವಿನಯ್ ಕುಲಕರ್ಣಿ ಫಾರ್ಮ್ ಹೌಸಿಗ್ ಕರ್ಕೊಂಡೋಗಿ ಕೋರ್ಟಲ್ಲಿ ಏನೇನ್ ಹೇಳ್ಬೇಕು ಅಂತ ತರಬೇತಿ ನೀಡಲಾಗ್ತಿತ್ತು.
ಪೊಲೀಸರೇ ಮುಂದೆ ನಿಂತು ಕೇಸಿಗೆ ಸಂಬಂಧಪಟ್ಟ ಅಷ್ಟೂ ಜನರಿಗೂ ಆಮಿಷ, ಒಪ್ಪದಿದ್ರೆ ನೇರಾನೇರಾ ಕೊಲೆಬೆದರಿಕೆಯೂ ಹಾಕೋ ಮಟ್ಟಕ್ಕೆ ಇಳಿದುಬಿಟ್ರು.
ಅದೂ ಯಾರೋ ಕಾನ್ಸ್‌ಟೇಬಲ್ ಗಳಲ್ಲ.
SI, Dysp ಸೇರಿದಂತೆ ಕಮೀಷನರ್ ವರೆಗೂ ಈ ವಿನಯ್ ಕುಲಕರ್ಣಿ ಬೆನ್ನಿಗ್ ನಿಂತುಬಿಟ್ಟಿದ್ರು…

ಯಾರು ನಿಂತ್ರೇನಾಯ್ತು…
ದೈವಗಳು ಯೋಗೀಶ್ ಗೌಡನ ಮನೆಯವರ ಬೆನ್ನಿಗ್ ನಿಂತಿದ್ರು.
ಅದೇನೇ ಹರಸಾಹಸಪಟ್ಟರೂ,
ಅಷ್ಟೂ ಪೊಲೀಸರ ಕಳ್ಳಾಟಗಳು ಬಟಾಬಯಲಾದ್ವು. ಸಾಕ್ಷಿಗಳು ಸತ್ಯ ನುಡಿದರು, ಹ ತ್ಯೆ ಯಾದ ಮರುದಿನವೇ ಯಾರು ಆರು ಜನರು ಶರಣಾಗಿದ್ದರೋ ಅದರಲ್ಲಿ ಪ್ರಮುಖನೇ ಅಪ್ರೂವರ್ ಆಗಿ ಬದಲಾಗಿ, ನಡೆದ ಅಷ್ಟೂ ವಿವರಗಳನ್ನು ಹೇಳಿಬಿಟ್ಟಿದ್ದ. ಹ ತ್ಯೆ ಮಾಡಿದ್ದ ನಿಜವಾದ ಸುಪಾರಿ ಕಿಲ್ಲರ್ಸ್ ಅರೆಸ್ಟಾಗಿದ್ದರು.
ನಂತರ ಕೊನೆಯಲ್ಲಿ…
ವಿನಯ್ ಕುಲಕರ್ಣಿಯನ್ನೂ ಅರೆಸ್ಟ್ ಮಾಡಿ ಒದ್ದು ಒಳಗ್ ಹಾಕಿದ್ರು…

ಲಾಯರ್ರುಗಳು ಕೈ ಬಿಡಲಿಲ್ಲ…
ಹೋರಾಟಗಾರರು ಹಿಂದಕ್ಕೆ ಸರಿಯಲಿಲ್ಲ,
ಯೋಗೀಶ್ ಗೌಡನ ಮನೆಯವರೂ ಎಂತೆಂತಾ ಹಣದ ಆಮಿಷಗಳಿಗೂ ಬಲಿಯಾಗಲಿಲ್ಲ.
ಹಾಗಾಗಿ ದೇವರೂ ಬೆನ್ನಿಗೆ ನಿಂತು ಕೊನೆಗೂ ಅಷ್ಟೂ ಜನರಿಗೂ ಜೀವಾವಧಿ ಶಿಕ್ಷೆಯಾಗುವಂತೆ ಮಾಡಿದೆ.
ಈತನ ಬೂಟು ನೆಕ್ಕೋದೇ ಕಾಯಕ ಮಾಡಿಕೊಂಡ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್ರಿಗೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆಯಾಗಿದೆ.

ಕೊನೆಗೂ…
ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆಯೇ ಹೊರತು ನ್ಯಾಯಾಧೀಶರಿಗಲ್ಲ, ನ್ಯಾಯಕ್ಕೇ ಗೆಲುವು ಅನ್ನೋದು ಮತ್ತೊಮ್ಮೆ ಪ್ರೂವಾಗಿದೆ.

ಕೊನೆಯದಾಗಿ :
ಇಲ್ಲಿ ಎಲ್ಲಾ ಬರ್ದಿದೀರಿ ಆದರೆ ಯೋಗೀಶ್ ಗೌಡರ ಪತ್ನಿ ಮಲ್ಲಮ್ಮನ ಬಗ್ಗೆ ಏನೂ ಬರ್ದೇ ಇಲ್ವಲ ಅನ್ನೋದು ಸುಮಾರು ಜನರ ಕೋಪ ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಲಮ್ಮ ಸಾಮಾನ್ಯ ಹೆಣ್ಣಲ್ಲ.
ಮಲ್ಲಮ್ಮನ ಪವಾಡಗಳೂ ಅಂತಿಂತಾ ಪವಾಡವಲ್ಲ.
ಆದ್ದರಿಂದ ಆಕೆಯ ಬಗ್ಗೆ ಎರಡು ಮಾತಲ್ಲಿ ಬರೆದುಮುಗಿಸೋದು ಸಾಧ್ಯವಿಲ್ಲ.
ಅದನ್ನು ಸಪರೇಟ್ ಪೋಸ್ಟ್ ಬರೆದೇ ಗೌರವಿಸಬೇಕು.
ಹಾಗಾಗಿ ಅದೆಲ್ಲಾ ಮುಂದಿನ ಪೋಸ್ಟಲ್ಲಿ ಸಪರೇಟಾಗೇ ಬರೀತೀನಿ, ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದಾಗಿ ವಿನಂತಿ.

ಬರಹ : ಸುಧೀರ್ ಸಾಗರ್.
ಕಿರಿಯ ರಾಜಕೀಯ ವಿಶ್ಲೇಷಕರು ಹಾಗೂ ಹಿರಿಯ ಕ್ರೈಮ್ ನ್ಯೂಸ್ ವೀಕ್ಷಕರು.

About Author

More Stories

Leave a Reply

Your email address will not be published. Required fields are marked *

You may have missed