ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ *ವಿಪತ್ತು ನಿರ್ವಹಣೆ ಗೆ ಸಿದ್ಧರಾಗೋಣ.ಕೆ. ವಿಜಯ್ *#avintvcom
1 min read
*ವಿಪತ್ತು ನಿರ್ವಹಣೆ ಗೆ ಸಿದ್ಧರಾಗೋಣ.ಕೆ. ವಿಜಯ್ *
ಚಿಕ್ಕಮಗಳೂರು ಜಿಲ್ಲೆ.
ಕಳಸ ತಾಲೂಕಿನ :
ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವುದರಿಂದ
ವಿಪತ್ತುಗಳು ಸಂಭವಿಸುತ್ತವೆ ಪ್ರತಿಯೊಬ್ಬರು ವಿಪತ್ತು ನಿರ್ವಹಣೆಗೆ ಸಿದ್ಧರಾಗೋಣ ಎಂದು ಕುದುರೆ ಮುಖ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಕೆ ವಿಜಯ್ ಹೇಳಿದರು.
ಅವರು ಶನಿವಾರ ಕಳಸ ಪೊಲೀಸ್ ಠಾಣೆ ಯ ಆವರಣದಲ್ಲಿ ಧರ್ಮಸ್ಥಳ ವಿಪತ್ತು ನಿರ್ವಹಣೆ ಕ್ಸಿಪ್ರ ಕಾರ್ಯತಂಡ ಕಳಸ ಘಟಕದ ಸ್ವಯಂ ಸೇವಕ ರಿಗೆ ವಿಶೇಷ ಸಭೆ ಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇವಲ ವಿಪತ್ತು ನಿರ್ವಹಣೆ ಮಾತ್ರವಲ್ಲದೆ ಮಹಿಳೆಯರು ಮಕ್ಕಳ ರಕ್ಷಣೆ ಗೆ ಸ್ವಯಂ ಸೇವಕರು ಮುಂದಾಗಬೇಕು ಎಂದರು.
ಪಿಎಸ್ಐ.
ಎ. ಬಿ. ಮಂಜಯ್ಯ ಪೊಲೀಸ್ ರೊಂದಿಗೆ ಧರ್ಮಸ್ಥಳ ವಿಪತ್ತು ನಿರ್ವಹಣೆ ಸ್ವಯಂಸೇವಕರು ಸ್ವಯಂ ಪ್ರೇರಿತರಾಗಿ ಕೈ ಜೋಡಿಸಿದರೆ ವಿಪತ್ತುನ್ನು ಸುಲುಭವಾಗಿ ನಿರ್ವಹಿಸ ಬಹುದು.
ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಮೇಲ್ವಿಚಾರಕ,
ಶ್ರೀ ನಾಗರಾಜ್ ತಾಲೂಕಿನಲ್ಲಿ ಪ್ರತಿವರ್ಷ ನೆರೆ ಹಾವಳಿ ಕಾಡುತ್ತಿರುತ್ತೆ ಆಗ ನಮ್ಮ ಸ್ವಯಂ ಸೇವಕರು.
ಪೊಲೀಸ್ ನವರು ಒಟ್ಟಿಗೆ ಕಾರ್ಯಾಚರಣೆ ಮಾಡಿದರೆ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡಬಹುದು ಎಂದರು
ಸಭೆಯಲ್ಲಿ ಎ ಎಸ್ ಐ ಮುರುಳೀಧರ್.
ಸಿ ಆರ್ ಮೋಹನ್ ಕುಮಾರ್.
ಉಮೇಶ್ ಕರಿಗೋಳಿ. ಮಲ್ಲೇಶ್ ಮೊದಲ ಮಟ್ಟಿ. ಠಾಣೆಯ ಎಲ್ಲಾ ಸಿಬ್ಬಂದಿಗಳು ಸ್ವಯಂ ಸೇವಕರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.