ಮೆಘರಾಜ್. ಬಸ್ನಿ. ಮಾಜಿ ಗ್ರಾಮಪಂಚಾಯಿತಿ ಸದಸ್ಯ.ಕಾಫ಼ಿಬೆಳೆಗಾರ. 31ನೆ ವಯಸ್ಸಿಗೆ ಬದುಕಿನ ಯಾನ ಮುಗಿಸಿದ್ದಾನೆ#avintvcom
1 min read
ನಿಧನ………..ಬಾಯ್ತುಂಬ ಪ್ರೀತಿಯಿಂದ ಎಲ್ಲೇ ಸಿಕ್ಕಿದ್ರು ಅತೀ ಆತ್ಮೀಯವಾಗಿ ಮತನಾಡಿಸುತ್ತಿದ್ದ ಗೆಳೆಯ ಜನಪರ ಕಾಳಜಿ ಹೊಂದಿದ್ದ, ಸಮಾಜದ ಎಲ್ಲಾ ಆಗು ಹೋಗುಗಳ ಬಗ್ಗೆ ಚಿಂತಿಸುತ್ತಿದ್ದ, ಯುವ ನಾಯಕ ಬಿಜೆಪಿ ಬೆಂಬಲಿತ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ. ಈಗ ಸದ್ಧ್ಯಕ್ಕೆ ಮುಂಬೈ ಸೈಬರ್ ಕ್ರೈಮ್ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅದೆಲ್ಲದ್ದಕು ಮೀರಿ ಅತೀ ವಿಚಾರವಂಥ ಬುದ್ದಿವಂತ ಶ್ರಮಜೀವಿ ಇಂದು ಮಹಾಮಾರಿ ಕೊರನಕ್ಕೆ ಬಲಿಯಾಗಿದ್ದು ಅರಗಿಸಿಕೊಳ್ಳಲಾಗದ ವಿಚಾರ. ತನ್ನ 31ನೆ ವಯಸ್ಸಿಗೆ ಬದುಕಿನ ಯಾನ ಮುಗಿಸಿದ್ದಾನೆ. ಸ್ವತಹ ಕಾಫ಼ಿ ತೋಟದ ಮಾಲಿಕನಾಗಿದ್ದು ಪ್ರಗತಿ ಪರ ಕೃಷಿಕರಾಗಿದ್ದರು. ರಾಜಕಿಯದಲ್ಲಿ ಉತ್ತಮ ಭವಿಷ್ಯ ಹೊಂದಿದ್ದವರು. ಇದು ನಮ್ಮ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ.. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ತಂದೆ ತಾಯಿಗೆ ಸಮಾಧಾನ ಮಾಡಿಕೊಳ್ಳಿ ಅಂಥ ಯಾವ ಮುಖ ಇಟ್ಟಕೊಂಡು ಹೇಳೋಣ. ಎಚ್ಚರ ತಪ್ಪಿದರೆ ಕೊರೊನ ಯಾರನ್ನೂ ಬಿಡುವುದಿಲ್ಲ.ಎಚ್ಚರ ಮುಖ್ಯ.ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.