ಜೆಸಿಐ ಗೋಣಿಬಿಡು ಹೊಯ್ಸಳ ಅಧ್ಯರಾಗಿ ಜಗತ್ ಬಿ ಎಂ*
1 min read
*ಜೆಸಿಐ ಗೋಣಿಬಿಡು ಹೊಯ್ಸಳ ಅಧ್ಯರಾಗಿ ಜಗತ್ ಬಿ ಎಂ*
************************************
ಮೂಡಿಗೆರೆ : ಜೆಸಿಐ ಗೋಣಿಬೀಡು ಹೊಯ್ಸಳ ವಲಯ -14 ರ ನೂತನ ಅಧ್ಯಕ್ಷರ ಪ್ರದಾನ್ಯ ತಂಡದ ಪದ ಪ್ರಧಾನ ಸಮಾರಂಭವು ಜೆಸಿ ಆದರ್ಶ ಹೆಚ್ ಜಿ ಅವರ ಅಧ್ಯಕ್ಷತೆಯಲ್ಲಿ ಗೋಣಿಬಿಡು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಗವಹಿಸಿದ ಕಿರಣ್ ಕುಮಾರ್ ಬಿ, ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತರು, ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ ಬೇಲೂರು ಇವರು ಮಾತನಾಡಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜಗತ್ ಅವರಲ್ಲಿ ಎಲ್ಲಾ ಚಾಕಚಕ್ಯತೆ ಇದೆ.
ಅವತ್ತಿನ ಕಾಲದಲ್ಲಿ ಹೆಗ್ಗರವಳ್ಳಿ ಎಂಬ ಕುಗ್ರಾಮದಲ್ಲಿ ಯಾವುದೆ ರೀತಿಯ ಮೂಲಭೂತ ಸೌಕರ್ಯಗಳು ಇರಲಿಲ್ಲ ಈ ಹಳ್ಳಿಯಲ್ಲಿ ವಿದ್ಯಾಭ್ಯಾಸ ಎಂಬುದು ಮರೀಚಿಕೆಯಾಗಿತ್ತು ಅಂತ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಜಗತ್ ಮೂಡಿಗೆರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡು ಇಡಿ ಮೂಡಿಗೆರೆ ತಾಲೂಕಿನಲ್ಲಿ ಹೆಗ್ಗರವಳ್ಳಿ ಶಾಲೆಯನ್ನು ತಿರುಗಿ ನೋಡುವಂತೆ ಮಾಡಿದ ವಿದ್ಯಾರ್ಥಿಯಾಗಿದ್ದರು.
ನನಗೆ ಹೆಮ್ಮೆ.ಒಬ್ಬ ಗುರುವಿಗೆ ಇನ್ನೇನು ಆಗಬೇಕು ತನ್ನ ಗುರುವಿನ ಮುಂದೆ ಒಬ್ಬ ವಿದ್ಯಾರ್ಥಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ ಅಂದರೆ ನನಗೆ ನಿಜಕ್ಕೂ ಹೃದಯ ತುಂಬಿ ಬರುತ್ತಿದೆ.
ದ್ರೋಣಾಚಾರ್ಯರ ವಿಗ್ರಹವನ್ನು ಮುಂದಿಟ್ಟುಕೊಂಡು ಏಕಲವ್ಯ ಬಿಲ್ ವಿದ್ಯೆಯನ್ನು ಕಲಿತಿದ್ದ, ಅರ್ಜುನ ಭೀಮ ನಕುಲ ಸಹದೇವ ಇವರು ಗುರುಗಳ ಬಳಿ ಹೇಳಿಸಿಕೊಂಡು ವಿದ್ಯೆಯನ್ನು ಕಲಿತಿದ್ದರು . ಗುರುಗಳು ಬಳಿ ಹೇಳಿಸಿಕೊಂಡು ವಿದ್ಯೆ ಕಲಿಯುವುದಕ್ಕೂ ಗುರುಗಳ ಮೂರ್ತಿಯನ್ನು ಮುಂದಿಟ್ಟುಕೊಂಡು ವಿದ್ಯೆ ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಏಕಲವ್ಯನ ಸ್ಥಿತಿಯಲ್ಲಿ ಜಗತ್ ತನ್ನ ಕೀರ್ತಿಯನ್ನು ಹೆಚ್ಚು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇಂಥ ಅತ್ಯುತ್ಯಮ ವ್ಯಕ್ತಿತ್ವವುಳ್ಳ ಜಗತ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ ಜೆಸಿಐ ಸಂಸ್ಥೆಯನ್ನ ಶ್ಲಾಘಿಸಿದರು.
ನೂತನ ಅಧ್ಯಕ್ಷರಾದ ಜಗತ್ ಮಾತನಾಡಿ ಮುಂದಿನ ದಿನದಲ್ಲಿ ಜಿಸಿಐ ಸಂಸ್ಥೆಯ ಎಲ್ಲಾ ನಿಕಟಪೂರ್ವ ಅಧ್ಯಕ್ಷರು ಮತ್ತು ಗೌರವಾನ್ವಿತ ಸಲಹೆಗಾರರು ಹಾಗೂ ಸದಸ್ಯರ ಜೊತೆಗೂಡಿ ಹಲವಾರು ಜನಪ್ರಿಯ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ
ಓಲವನ್ನು ತೋರಿಸುವ ಕಾರ್ಯಕ್ರಮಗಳ ಆಯೋಜನೆ ಮಾಡುವುದು, ಹಲವಾರು ಪ್ರತಿಭೆಗಳು ಎಲೆಮರೆ ಕಾಯಿಯಂತೆ ಇರುವವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳನ್ನು ಮಾಡುವುದು ಅರಣ್ಯ ಸಂರಕ್ಷಣೆ ಕಾರ್ಯಕ್ರಮದ ಜಾಗೃತಿ ಮೂಡಿಸುವುದು ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜೆಸಿಐ ಗೋಣಿಬಿಡು ಹೊಯ್ಸಳ ವಲಯ ವತಿಯಿಂದ ಮಾಡಿ ರಾಷ್ಟ್ರಮಟ್ಟದಲ್ಲಿ ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯನ್ನು ಗುರುತಿಸುವಂತ ಕೆಲಸವನ್ನು ಮಾಡಿಲಾಗುವದೆಂದರು.
ಜೆಸಿಐ ಪದ ಪ್ರಧಾನ ಸಮಾರಂಭದಲ್ಲಿ ಜೆಸಿಐ ಮೋಹನ್ ರಾಜಣ್ಣ, ಜೆ ಎಫ್ ಎಂ ವಿಜಯ ಕುಮಾರ್, ಜೆ ಎಫ್ ಎಂ ಅಕ್ಷಯ್, ನಿಯೋಜಿತ ಕಾರ್ಯದರ್ಶಿ ಸಂತೋಷ ಹೆಚ್ ಎಂ, ಲೇಡಿ ಜೆಸಿ ನೇತ್ರಾವತಿ, ಜೂನಿಯರ್ ಜೆಸಿ ಪ್ರದಾನ್ಯ, ಚಂದ್ರಶೇಖರ, ಯೋಗೀಶ್, ರಂಜಿತ್, ಭರತ್, ಉದಯ್, ಪರಮೇಶ್, ದೀಕ್ಷಿತ್ ಹಾಗೂ ಹಲವು ರಾಜಕೀಯ ಮುಖಂಡರು ವಿವಿಧ ಸಂಸ್ಥೆಯ ಅಧ್ಯರು ಭಗವಾಹಿಸಿ ಜಗತ್ ಮತ್ತು ಸಂತೋಷ ಅವರಿಗೆ ಶುಭ ಹಾರೈಸಿದರು.
ವರದಿ
ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ