AVIN TV

Latest Online Breaking News

ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ ಸತ್ಕರಿಸಿ ಅಭಿನಂದನೆ

Featured Video Play Icon

ಅಭಿವೃದ್ಧಿಯೇ ನಮ್ಮ ಮೂಲಮಂತ್ರ.

ನಿಪ್ಪಾಣಿ ನಗರಸಭೆ ಕಾರ್ಯಾಲಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಶ್ರೀ ಜಯವಂತ ಬಾಟಲೆ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀತಾ ಬಾಗಡಿ ಅವರ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು. ಬಳಿಕ ಮಹಾಲಕ್ಷ್ಮೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಗಜ್ಯೋತಿ ಬಸವಣ್ಣ, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್  ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನಗರಸಭೆ ಅನ್ನುವುದು ಪ್ರಜೆಗಳ ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಂರ್ಪಕದ ಕೊಂಡಿಯಾಗಿದೆ. ಪ್ರಜೆಗಳ ಪ್ರತಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಚುನಾಯಿತ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಮೊದಲ ಬಾರಿಗೆ ಬಿಜೆಪಿ ಮಡಿಲಿಗೆ ನಿಪ್ಪಾಣಿ ನಗರಸಭೆ ಬಂದಿದೆ. ಹೀಗಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ ನಾಯಕರು ಜನಪರ ಕಾರ್ಯಕ್ರಮಗಳನ್ನು ಕೈಗೊಂಡು, ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕಬೇಕು ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ಊರಿನ ಗಣ್ಯರು, ಜನಪ್ರತಿನಿಧಿಗಳು, ನಗರಸಭೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

निपाणी

विकास हाच आपला मूल मंत्र आहे

निपाणी नगरपालिका कार्यालयात पहिल्यांदाच भाजपाची सत्ता आली असून, नवीन अध्यक्ष म्हणून बिनविरोध निवड झालेले भारतीय जनता पक्षाचे अध्यक्ष श्री जयवंत भाटले आणि उपाध्यक्षपदी श्रीमती नीता बागडी, यांच्या पदग्रहण कार्यक्रमात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भाग घेऊन, सत्कार करून, अभिनंदन केले व त्यानंतर महालक्ष्मी प्रतिमेला पूजा करून, जगज्योती बसवण्ण, छत्रपती शिवाजी महाराज आणि घटनेचे शिल्पकार डॉ. बी.आर आंबेडकर, यांच्या पुतळ्याला पुष्पहार अर्पण करून, कार्यक्रम उद्देशून संबोधित केले.

नगरपालिका ही जनतेच्या आणि निवडलेल्या लोकप्रतिनिधींची संपर्क स्थान आहे. नागरिकांच्या प्रत्येक आवाहनाला सकारात्मक प्रतिसाद देण्याची जबाबदारी निवडलेल्या प्रतिनिधींची आहे. पहिल्यांदाच निपाणी नगरपालिकेवर भाजपची सत्ता आली आहे. नवीन सत्ताधारी नेत्यांनी जनसामान्यांसाठी कार्यक्रम राबवून, विकासाच्या मार्गावर पाऊल टाकले पाहिजे असे सांगितले.

यावेळी नगरपालिका अधिकारी, मान्यवर लोकप्रतिनिधी, नगरपालिका सदस्य व कार्यकर्ते उपस्थित होते.

लाइव कैलेंडर

February 2021
M T W T F S S
1234567
891011121314
15161718192021
22232425262728
error: Content is protected !!