ವಿಶಾಲ ಮನೋಭಾವದ ಸಂಕೇತವೇ ನೀಲಿ ಬಣ್ಣ”…
1 min read
” ವಿಶಾಲ ಮನೋಭಾವದ ಸಂಕೇತವೇ ನೀಲಿ ಬಣ್ಣ”
🌌🌌🌌🌌🌌🌌🌌🌌
ಭಾರತದ ಬಾವುಟದಲ್ಲಿ ನಾಲ್ಕು ಬಣ್ಣಗಳಿವೆ. ಕೇಸರಿ ಬಣ್ಣವು=ತ್ಯಾಗ, ಧೈರ್ಯ ಮತ್ತು ಶಕ್ತಿಯ ಸಂಕೇತವಾದರೆ, ಬಿಳಿ ಬಣ್ಣವು= ಶಾಂತಿ,ಸತ್ಯ ಮತ್ತು ಶುದ್ಧತೆಯ ಸಂಕೇತವಾದರೆ, ನೀಲಿ ಬಣ್ಣವು= ವೈಚಾರಿಕತೆ, ಹೋರಾಟ ಮತ್ತು ವಿಶಾಲತೆಯ ಸಂಕೇತವಾದರೆ, ಹಸಿರು ಬಣ್ಣವು= ಫಲವತ್ತತೆ, ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವಾಗಿದೆ…
ಆಕಾಶವು ವಿಶಾಲವಾಗಿದೆ ಅದರ ಬಣ್ಣವು ನೀಲಿಯಾಗಿದೆ. ಅಂತೆಯೇ ” ದಲಿತ ಸಂಘರ್ಷ ಸಮಿತಿ” ಯು ವಿಶಾಲವಾದ ಮನೋಭಾವನೆಯನ್ನು ಹೊಂದಿದ್ದರಿಂದ ನೀಲಿ ಬಣ್ಣದ ಬಾವುಟವನ್ನು ಹೊಂದಿದ್ದು, ವ್ಯೆಚಾರಿಕವಾಗಿ ವಿಶಾಲ ಮನೋಭಾವದಿಂದ ಹೋರಾಟವನ್ನುಮಾಡಿ ಕೊಟ್ಯಾಂತರ ಶೋಷಿತರ ಪಾಲಿಗೆ ಬೆಳಕಾಗಿದೆ.
ಇಂತಹ ಜನಪರ ಜೀವಪರ ಚಳುವಳಿಯ ಬಗ್ಗೆ ಮಹಾಪ್ರಬಂಧ ಬರೆದು ಚರಿತ್ರೆಯ ಪುಟಗಳಲ್ಲಿ ಸೇರಿಸಲು ಸಹಕರಿಸಿ ಪ್ರೋತ್ಸಾಹಿಸಿ ಬೆಂಬಲ ನೀಡಿದ ಎಲ್ಲಾ, ಗುರುಹಿರಿಯರಿಗೆ ಕುಟುಂಬದವರಿಗೆ ಹೋರಾಟಗಾರರಿಗೆ, ಆತ್ಮೀಯ ಮಿತ್ರರಿಗೆ, ಮಾಧ್ಯಮ ಗೆಳೆಯರಿಗೆ ಹಾಗೂ ಸರ್ಕಾರಿ ಇಲಾಖೆಯವರಿಗೆ ಮೂಡಿಗೆರೆಯ ಪಟ್ಟಣದಲ್ಲಿ “ನೀಲಿ ಬಣ್ಣದ ಬಾವುಟ” ವನ್ನು ಹಾರಿಸುವ ಮೂಲಕ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿರುತ್ತೇನೆ.
ಜೈ ಭೀಮ್, ಜೈ ಭಾರತ್, ಜೈ ಸಂವಿಧಾನ.
✍️ ಡಾ.ಹರೀಶ್ ನಲ್ಕೆ.

