लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯುಗಾದಿ ಹಬ್ಬ ದಂದು ಬೇವು -ಬೆಲ್ಲ ತಿನ್ನುವ ಆಚರಣೆ ಒಂದು ವಿಶಿಷ್ಟ ಪರಿಕಲ್ಪನೆ :ಡಾ.ಮೋಹನ್ ರಾಜಣ್ಣ #avintvcom

1 min read
Featured Video Play Icon

ಮೂಡಿಗೆರೆ :ಬೇವು -ಬೆಲ್ಲ ತಿನ್ನುವ ಆಚರಣೆ ಒಂದು ವಿಶಿಷ್ಟ ಪರಿಕಲ್ಪನೆ :ಡಾ.ಮೋಹನ್ ರಾಜಣ್ಣ. —————————————- ಮೂಡಿಗೆರೆ :ಯುಗಾದಿ ಹಬ್ಬ ದಂದು ಬೇವು -ಬೆಲ್ಲ ತಿನ್ನುವ ಆಚರಣೆಯ ಒಂದು ವಿಶಿಷ್ಟ ಪರಿಕಲ್ಪನೆ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದಸಂಸ್ಥಾಪಕ ರಾದ ಡಾ.ಮೋಹನ್ ರಾಜಣ್ಣ ಹೇಳಿದರು. ಅವರು ಇಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಯವರು ಜಿ ಹೊಸಳ್ಳಿ ಗ್ರಾಮದ. ಹೆಚ್. ಕೆ . ರಾಜೇಗೌಡ ರವರ ಮನೆ ಯ ಮುಂಭಾಗದ ಆವರಣ ದಲ್ಲಿ “ಯುಗಾದಿ ಸಂಭ್ರಮ-2021 “ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು. ಸಿಹಿ -ಕಹಿ, ಸುಖ -ಕಷ್ಟ. ನಲಿವು -ನೋವು. ಎಂಬ ಮಾತಿನಂತೆ ಜೀವನ ದಲ್ಲಿ ಇವೆರಡರ ಸಮಾನ ಇರುವಿಕೆ ಅಗತ್ಯ ವಾಗಿದೆ ಆಗ ಮಾತ್ರ ಜೀವನ ಸುಗಮ ವಾಗಿ ಸಾಗಲು ಸಾಧ್ಯ ವಿದೆ ಆದರೆ ಕಷ್ಟ ಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿ ಯಲ್ಲಿ ಕಷ್ಟವನ್ನು ಕಹಿ ಯನ್ನು ನೋವನ್ನು ಬಯಸುವವರೇ ಇಲ್ಲಾ ವೆನ್ನ ವಂತಾಗಿದೆ ಆದರೆ ಜೀವನ ಎನ್ನುವುದು ಕಷ್ಟ-ಸುಖ ಗಳ ಸಂಯೋಜನೆ ಯಾಗಿದೆ ಹಾಗಾಗಿ ಇವೆರಡು ಒಂದನ್ನೊಂದು ಬಿಟ್ಟಿರಲಾರವು ಎಂದು ಹೇಳಿದರು. .ಹಾಗೂ ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬೇವು ಬೆಲ್ಲ ಅರೋಗ್ಯ ಕ್ಕೆ ರಾಮಬಾಣ. ಮಾತ್ರ ವಲ್ಲದೆ ಜೀವನ ದಲ್ಲಿ ಕಷ್ಟ -ಸುಖ ಸಮನಾಗಿ ಹಂಚಿ ಕೊಂಡು ಸಾಗುವ ಸಲಹೆ ನೀಡಿದರು. ಪ್ರಗತಿಪರಆದರ್ಶರೈತ ರಾದ ಶ್ರೀ ಹೆಚ್. ಕೆ. ಪೂರ್ಣೇಶ್ ಮಾತನಾಡುತ್ತಾ ಹೊಸ ವರ್ಷ ಶುಭ ಸಂಕಲ್ಪ ಮಾಡಲು ಪ್ರೇರಣೆ ನೀಡುತ್ತದೆ. ಬಾಳಿನಲ್ಲಿ ಹೊಸತನ ಪಡೆಯಲು ಇದೊಂದು ಸುವರ್ಣ ಅವಕಾಶ ವಾಗಿದೆ ಹೊಸ ಪ್ರಯತ್ನದ ಅನ್ವೇಷಣೆಯೇ ಪ್ರತಿಯೊಬ್ಬರ ಗುರಿಯಾಗಬೇಕುಎಂದರು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಸ್ತ್ರೀಶಕ್ತಿ ಸಂಘ ದ ಸದಸ್ಯ ರಾದ ಶ್ರೀಮತಿ ಸುಗುಣ ರವಿ ನೆರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯ ರಾದ ಚಂದ್ರಶೇಖರ . ಕಾರ್ಯದರ್ಶಿ.ಹೆಚ್. ಆರ್. ಯೋಗೇಶ್ ಕುಮಾರ್. ಬಾಲಕೃಷ್ಣ. ರಂಜಿತ್ ಮಾತನಾಡಿದರು . ಮದು. ರಾಜೇಗೌಡ.ಹಾಗೂ ಮುಂತಾ ದವರುಉಪಸ್ಥಿತರಿದ್ದರು . ಬೇವು ಬೆಲ್ಲ ವಿತರಿಸಿದರು ಸಾಂಸ್ಕೃತಿಕ ಕಾರ್ಯಕ್ರಮ *ನೆಡೆಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author

You may have missed