लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಯಲ್ಲಿ ಕೇಬಲ್ ಕಾರ್ ರೋಪ್ ವೇ ಅವೈಜ್ಞಾನಿಕ ಯೋಜನೆಗೆ ಖಂಡನೆ:ಹಿಂಪಡೆಯಲು ವೀರೇಶ್ ಒತ್ತಾಯ.

1 min read

ಅವಿನ್ ಟಿವಿ ಸುದ್ದಿಜಾಲ ✍️: ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಯಲ್ಲಿ ಕೇಬಲ್ ಕಾರ್ ರೋಪ್ ವೇ ಅವೈಜ್ಞಾನಿಕ ಯೋಜನೆಗೆ ಖಂಡನೆ:ಹಿಂಪಡೆಯಲು ವೀರೇಶ್ ಒತ್ತಾಯ.

ಚಿಕ್ಕಮಗಳೂರು ಮಾ ೦೯: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ನೆಡೆದ ಬಜೆಟ್ ನಲ್ಲಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಿಂದ ಕೈ ಮರದವರೆಗೂ ಕೇಬಲ್ ಕಾರ್ ರೋಪ್ ವೇ ಯೋಜನೆ ಮಾಡಲು ಘೋಷಿಸುವುದು ಖಂಡನೀಯ.ಈ ಹಿಂದಿನ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ ಕೂಡ ಈ ಕೇಬಲ್ ಕಾರ್ ಯೋಜನೆ ಘೋಷಿಸಲಾಯಿತ್ತು. ಪರಿಸರ ಪರ ವಿರೋಧಕ್ಕೆ ಮಣಿದ ಅಂದಿನ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿತು,ಮತ್ತೆ ಇಂದಿನ ರಾಜ್ಯ ಸರ್ಕಾರ ಈ ಅವೈಜ್ಞಾನಿಕ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಎಷ್ಟು ಸರಿ ಎಂಬ ಹೋರಾಟದ ಧ್ವನಿ ಜಿಲ್ಲೆಯಲ್ಲಿ ಎದ್ದಿದೆ.

ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರದ ಪ್ರದೇಶ ಶೋಲಾ ಕಾಡು ಹುಲ್ಲುಗಾವಲು ಸೇರಿದಂತೆ ಹುಲಿ ಆವಾಸಸ್ಥಾನ ಇಲ್ಲಿದೆ.ಈ ಯೋಜನೆಯಿಂದ ಇಲ್ಲಿನ ವನ್ಯಜೀವಿ ಮತ್ತು ಕಾಡಿನ ಮೇಲೆ ದುಷ್ಪರಿಣಾಮ ಬೀರುತ್ತದೆ,
ಮುಳ್ಳಯ್ಯನಗಿರಿಯಲ್ಲಿ ಹುಟ್ಟುವ ಯಗಚಿ, ವೇದಾ ನದಿ ಸೇರಿದಂತೆ ಹಲವು ನೀರಿನ ಉಗಮ ಸ್ಥಾನಕ್ಕೆ ದಕ್ಕೆ ಉಂಟಾಗುತ್ತದೆ.

ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಅನುಕೂಲ ಮಾಡುವ ನಿಟ್ಟಿನಲ್ಲಿ ಕೇಬಲ್ ಕಾರ್ ರೋಪ್ ವೇ ಯೋಜನೆ ಜಾರಿಗೆ ತರುತ್ತಿರುವುದು ಅತ್ಯಂತ ವೈಜ್ಞಾನಿಕ ಮತ್ತು ಖಂಡನೀಯ.

ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮಾಡಬಾರದು, ಯೋಜನೆಯನ್ನು ಕೈ ಬಿಡದಿದ್ದರೆ ಈ ಸಂಭಂದ ಜನಾಂದೋಲನ ಮತ್ತು ಕಾನೂನು ಹೋರಾಟ ಮಾಡಲಾಗುತ್ತದೆ.

ಸ್ಥಳೀಯರಿಗೆ ಇಷ್ಟವಿಲ್ಲದ ಮತ್ತು ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಇಲ್ಲಿನ ಪರಿಸರ ಹಾಳುಮಾಡುವ ಯೋಜನೆ ಬೇಡ ,ಕೂಡಲೇ ಸರ್ಕಾರ ಇದನ್ನು ಹಿಂಪಡೆಯಬೇಕು ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ವೀರೇಶ್ ಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed