ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಲು ಜಾಗ ಕಾಯ್ದಿರಿಸಿ……
1 min read
ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ, ಮೂಡಿಗೆರೆ
ಮೂಡಿಗೆರೆ ತಾಲ್ಲೂಕು, ಪಟ್ಟಣ ಪಂಚಾಯಿತಿ ಎದುರು ಎಡಬಾಗದ ಜಾಗದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಲು ಜಾಗ ಕಾಯ್ದಿರಿಸಿ, ಪ್ರತಿಮೆ ನಿರ್ಮಾಣಕ್ಕಾಗಿ ಮನವಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಭಿನ್ನ ಜಾತಿ, ಮತ, ಧರ್ಮ, ಪಂಥ ಹಾಗೂ ವಿಭಿನ್ನ ವರ್ಗದ ಸಾವಿರಾರು ಕುಟುಂಬಗಳು ಸಂವಿಧಾನದಡಿ ಮೂಲಭೂತ ಹಕ್ಕುಗಳ ಪಡೆದಿರುತ್ತಾರೆ ಅಂತೆಯೇ ಪಂಚಾಯತ್ ರಾಜ್ ಅಧಿನಿಯಮದಂತೆ ಪಟ್ಟಣ ಪಂಚಾಯಿತಿ ಕೂಡ ಭಾರತದ ಸಾಂವಿಧಾನಿಕ ಅಧಿಕಾರ ಪಡೆದು ಜನಸಾಮಾನ್ಯರ ಹಕ್ಕು, ಕರ್ತವ್ಯ ಮತ್ತು ಹೊಣೆಗಾರಿಕೆ ಕಾಪಾಡುತ್ತಿದೆ ಆದರೆ ಇದಕ್ಕೆಲ್ಲಾ ಕಾರಣಕರ್ತರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೂ ಇಲ್ಲದೇ ಇರುವುದು ಬೇಸರದ ಸಂಗತಿಯಾಗಿದೆ. ಈ ಎಲ್ಲಾ ಅಂಶಗಳ ಗಮನಿಸಿ ಹಾಗೂ ಶಿಕ್ಷಣ, ಮೌಲ್ಯಾಧಾರಿತ ಸಮಾಜ ನಿರ್ಮಾಣ ಮತ್ತು ಮುಂದಿನ ಪೀಳಿಗೆಗೆ ಸಂವಿಧಾನದ ಆಶಯಗಳ ಈಡೇರಿಸಲು ಸ್ವಾಸ್ಥ್ಯ ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ಅವಕಾಶವಂಚಿತ, ಧೀನ ದಲಿತ, ನೊಂದವರ ಹಕ್ಕುಗಳ ಕಾಪಾಡಲು ಮತ್ತು ಭರವಸೆಯ ಸ್ಪೂರ್ತಿ ಹಾಗು ದಿಕ್ಸೂಚಿಯವರಾದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಮೂಡಿಗೆರೆ ಪಟ್ಟಣ ಪಂಚಾಯಿತಿ ಕಟ್ಟಡದ ಮುಂಬಾಗದಲ್ಲಿನ ಎಡಬಾಗದ ಸಾರ್ವಜನಿಕ ಲೈಬ್ರರಿ ಪಕ್ಕಕ್ಕೆ ಹೊಂದಿಕೊಂಡಿರುವ ಖಾಲಿ ಜಾಗವನ್ನು ಕಾಯ್ದಿರಿಸಬೇಕೆಂದು ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ, ಮೂಡಿಗೆರೆ ವತಿಯಿಂದ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಆಡಳಿತಾಧಿಕಾರಿಗಳು ಮತ್ತು ತಹಶಿಲ್ದಾರ್, ಮೂಡಿಗೆರೆಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದಭ ದಲ್ಲಿ ಶಿವಪ್ರಸಾದ್ ಬಿ.ಇ, ಹರೀಶ್ ನಲ್ಕೆ, ಅಭಿಜಿತ್ ಹೆಡದಾಳ್, ಗಣೇಶ್, ಲಕ್ಷ್ಮಣ್, ಶರೀಫ್ ತಾಲ್ಲೂಕು ಅಧ್ಯಕ್ಷರು, ಎಸ್.ಡಿ.ಪಿ.ಐ, ಖಾಲಿದ್, ಸದಸ್ಯರು ಮತ್ತು ಹಲವರಿದ್ದರು.
ದಿನಾಂಕ: 28.01.2026
ಸ್ಥಳ: ಮೂಡಿಗೆರೆ

