ಇಂದು ಮತ್ತು ನಾಳೆ ಕೊಪ್ಪ ಮತ್ತು ನರಸಿಂಹರಾಜಪುರದಲ್ಲಿ ನನ್ನ ತೇಜಸ್ವಿ ನಾಟಕ ಪ್ರದರ್ಶನ…
1 min read
ಅವಿನ್ ಟಿವಿ ಸುದ್ದಿಜಾಲ ✒️: ಇಂದು ಮತ್ತು ನಾಳೆ ಕೊಪ್ಪ ಮತ್ತು ನರಸಿಂಹರಾಜಪುರದಲ್ಲಿ ನನ್ನ ತೇಜಸ್ವಿ ನಾಟಕ ಪ್ರದರ್ಶನ.
ಪೂರ್ಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ದಂಪತಿಗಳ ಪ್ರೇಮ ಕಥನದ ಒಳನೋಟವನ್ನು ಪ್ರಮುಖ ಕಥಾ ವಸ್ತುವಾಗಿ ಇಟ್ಟುಕೊಂಡು ರಚಿಸಿರುವ ನನ್ನ ತೇಜಸ್ವಿ ನಾಟಕ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲೂ ಯಶಸ್ವಿಯಾಗಿ ಪ್ರಯೋಗ ಗೊಂಡಿದೆ.
ಈಗ ಚಿಕ್ಕಮಗಳೂರು ಜಿಲ್ಲೆ, ಕೊಪ್ಪದ ನಿತ್ಯಧಾರ ಸಮುದಾಯ ಭವನ ಮತ್ತು ನರಸಿಂಹರಾಜಪುರದ ರೋಟರಿ ಹಾಲಿನಲ್ಲಿ ಇದೇ ಫೆಬ್ರವರಿ 14 ಮತ್ತು 15 ರಂದು ನನ್ನ ತೇಜಸ್ವಿ ನಾಟಕದ 18 ಮತ್ತು 19ನೇ ಪ್ರಯೋಗ ನಡೆಯಲಿದೆ.
ನಾಟಕಕ್ಕೆ ಉಚಿತ ಪ್ರವೇಶ ಇದ್ದು ಪ್ರತಿ ದಿನ ಸಂಜೆ ಸಂಜೆ ಘಂಟೆ ೬:00 ಕ್ಕೆ ಆರಂಭವಾಗಲಿರುವ ಈ ನಾಟಕವನ್ನು ಬೆಂಗಳೂರಿನ ಕಲಾ ಮಾಧ್ಯಮ ಬಳಗ ಅಭಿನಯಿಸಲಿದ್ದು, ಕೊಪ್ಪದ
ರಂಗ ಸಿಂಗಾರ ಮತ್ತು ಎನ್ ಆರ್ ಪುರದ
ರೋಟರಿ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ನಾಟಕವನ್ನು ಆಯೋಜನೆ ಮಾಡಲಾಗಿದೆ.
ರಂಗಾಸಕ್ತರು ಆಗಮಿಸಿ ಯಶಸ್ವಿ ಮಾಡಿಕೊಡಲು ಕಲಾ ಮಾಧ್ಯಮದ ಪರಮೇಶ್ ಮತ್ತು ನಾಟಕದ ಆಯೋಜಕರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
•••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

