** ಡಾ.ಸಿದ್ದಲಿಂಗಯ್ಯ ಕಾವ್ಯ ಲೋಕದ ನಿಧಿ ಕಣ್ಮರೆಯಾಯಿತು** #avintvcom
1 min read
*ಕಾವ್ಯ ಲೋಕದ ನಿಧಿ ಕಣ್ಮರೆಯಾಯಿತು*
ಬಹುಜನ ಸಮಾಜ ಪಕ್ಷ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ವತಿಯಿಂದ ಬಂಡಾಯ ಸಾಹಿತ್ಯ ದ ರಾಯಭಾರಿ ಡಾ.ಸಿದ್ದಲಿಂಗಯ್ಯ ರವರಿಗೆ ನುಡಿ ನಮನ ಸಲ್ಲಿಸಿತು, ಪಕ್ಷದ ಕಚೇರಿಯಲ್ಲಿ ಅಗಲಿದ ಸಾಹಿತಿ ಗೆ ಪುಷ್ಪ ನಮನ ಸಲ್ಲಿಸಿ ಬಿ ಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಹುಸೇನ್ ಮಾತನಾಡಿ-ಬಡ ಕುಟುಂಬದಲ್ಲಿ ಜನಿಸಿ ಬಹು ದೊಡ್ಡ ಸಾಹಿತಿಯಾಗಿ ಹೊರಹೊಮ್ಮಿದ ಡಾ.ಸಿದ್ದಲಿಂಗಯ್ಯರವರು ಈ ನಾಡಿನ ದಲಿತ ಚಳುವಳಿಯ ಗಟ್ಟಿಗೊಳಿಸಿ ತನ್ನ ಸಾಹಿತ್ಯದ ಬರಹಗಳ ಮೂಲಕ ಅಸಂಖ್ಯಾತ ಯುವಕರನ್ನು ಚಳುವಳಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡಿದ ಏಕೈಕ ಬಂಡಾಯದ ಕವಿಯಾಗಿದ್ದು ಕಾವ್ಯ ಲೋಕದ ನಿಧಿ ಕಣ್ಮರೆಯಾದಂತೆ ಆಗಿದೆ ಎಂದರು.
ಕಸಾಪ ಅಧ್ಯಕ್ಷರು ಮಗ್ಗಲಮಕ್ಕಿ ಗಣೇಶ್ ಮಾತನಾಡಿ-ನಮ್ಮ ನಾಡಿನಲ್ಲಿ ಅನೇಕ ದಾರ್ಶನಿಕರು,ಚಿಂತಕರು,ಮೇರು ಸಾಹಿತಿಗಳು,ಬಾಳಿ ಬದುಕಿ ಹೋಗಿದ್ದಾರೆ ಅವರು ಇನ್ನೆಂದೂ ಹುಟ್ಟಲ್ಲ ಆದರೆ ಅವರು ಬದುಕಿಗೆ ಕೊಟ್ಟಂತ ವಿಚಾರಗಳನ್ನು ನಮ್ಮ ನಮ್ಮ ಬದುಕಿನಲ್ಲಿ ರೂಢಿಸಿಕೊಂಡು ಸಾಮರಸ್ಯದಿಂದ ಒಂದೆಂಬಂತೆ ಬದುಕಬೇಕು ಎಂದರು.
ಬಿ ಎಸ್ ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್ ಮಾತನಾಡಿ-ದಲಿತರ ಸ್ವಾಭಿಮಾನ ದ ಸಂಕೇತವಾಗಿ ಕರುನಾಡಿನಲ್ಲಿ ತನ್ನ ಬರಹಗಳ ಮೂಲಕ ದಲಿತ ಚಳುವಳಿಗೆ ಮುನ್ನುಡಿ ಬರೆದ ನಮ್ಮೆಲ್ಲರ ನಾಯಕರಾಗಿದ್ದರು ಅಂತಹ ವ್ಯಕ್ತಿಯನ್ನು ಕಳೆದುಕೊಂಡು ಹೋರಾಟದ ಶಕ್ತಿಯೇ ನಂದಿ ಹೋದಂತಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್ ಮಾತನಾಡಿ-ನಮ್ಮಲ್ಲಿ ಸಾಹಿತ್ಯದ ಹಲವಾರು ಪ್ರಕಾರಗಳನ್ನು ಗಮನಿಸಬಹುದು ಶಿಷ್ಟ ಸಾಹಿತ್ಯ,ಜನಪದ ಸಾಹಿತ್ಯ,ವಚನ ಸಾಹಿತ್ಯ, ಬಂಡಾಯ ಸಾಹಿತ್ಯ ಆದರೆ ಬಂಡಾಯ ಸಾಹಿತ್ಯ ಮನುಷ್ಯನ ಧೈನಂದಿನ ಬದುಕಿನ ಅನಾವರಣಗೊಳಿಸುತ್ತದೆ. ಅಂದಿನ ಅಸಮಾನತೆ,ದೌರ್ಜನ್ಯ ಎಲ್ಲವನ್ನು ತನ್ನ ಬರವಣೆಯ ಮೂಲಕ ಮೆಟ್ಟಿ ನಿಂತ ಧೀಮಂತ ಹೋರಾಟಗಾರ ಎಂದರು.
ಕಾರ್ಯಕ್ರಮದಲ್ಲಿ ಬಿ ಎಸ್ ಪಿ ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ, ಮಹೇಶ್,ನಾಗೇಶ್,
ಅಯುಬ್,ಅಬ್ರಾಹರ್, ನಾಗರಾಜ್, ಹಮೀದ್ ಮುಂತಾದವರು ಭಾಗವಹಿಸಿದ್ದರು..
ಇದೆ ಸಂದರ್ಭದಲ್ಲಿ ಪಕ್ಷದ ಯುವ ಮುಖಂಡ ಮಾಣಿಮಕ್ಕಿ ಲೋಕೇಶ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.