day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಪ್ರಕೃತಿ ವಿಸ್ಮಯ*ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ#avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

*ಪ್ರಕೃತಿ ವಿಸ್ಮಯ*ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪ್ರಕೃತಿ ವಿಸ್ಮಯ

ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ,
ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ. ಮನುಷ್ಯ ತಿನ್ನುವ ಮೂರನೇ ಒಂದರಷ್ಟು ಅಂದರೆ ಶೇ. 70ರಷ್ಟು ಆಹಾರ ಜೇನುನೊಣಗಳನ್ನು ಅವಲಂಬಿಸಿದೆ. ಬಾಕಿ ಉಳಿದ ಶೇ. 30 ಚಿಟ್ಟೆ , ದುಂಬಿ ಸೇರಿದಂತೆ ಇತರ ಕೀಟ ಸಂತತಿಯನ್ನು ಅವಲಂಬಿಸಿದೆ. ಹೀಗಾಗಿ, ಜೇನುನೊಣಗಳು ಇಲ್ಲದೇ ಇದ್ದರೆ ನಾವು ತಿನ್ನುವ ಯಾವ ವಸ್ತುವೂ ನಮ್ಮ ಕೈಸೇರದು..

ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೇ ಈಗ ಸಂಚಕಾರ ಬಂದಿದೆ. ಇತ್ತೀಚಿಗೆ ಹತ್ತದಿನೈದು ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ.

ಮೇ ಕೊನೆಯಲ್ಲಿ ಬಹುತೇಕ ಜೇನು ತೆಗೆಯುವ ಕೆಲಸ ನಡೆಯುತ್ತದೆ. ಆದರೆ, ಹೀಗೆ ಜೇನು ತೆಗೆಯುವವರು ಕಾಡಿನಲ್ಲಿ ಹೊಗೆ ಹಾಕಿ ಗೂಡನ್ನು ತೆಗೆಯುತ್ತಾರೆ. ಹೀಗಾಗಿ, ಗೂಡನ್ನು ಬಿಟ್ಟು ನೊಣಗಳು ಓಡುತ್ತವೆ. ಕೆಲವು ಅಲ್ಲೇ ಸಾಯುತ್ತವೆ. ಹೀಗೆ ಗೂಡು ಕಳೆದುಕೊಂಡ ಜೇನುಗಳು ನಂತರ ಆಹಾರವಿಲ್ಲದೆ ಸಾಯುತ್ತವೆ. ಯಾಕೆಂದರೆೆ, ಜೂನ್‌ ನಂತರ ಮಳೆ ಶುರುವಾಗುವುದರಿಂದ ಆ ಸಮಯದಲ್ಲಿ ಹೂಗಳು ಅರಳುವುದಿಲ್ಲ. ಪರಿಣಾಮ, ನೊಣಗಳಿಗೆ ಬೇಕಾದ ಪ್ರಮುಖ ಆಹಾರವಾದ ಮಕರಂದ‌ ಮತ್ತು ಪರಾಗ ಸಿಗುವುದಿಲ್ಲ. ಹೀಗಾಗಿ, ಹೊಟ್ಟೆಗಿಲ್ಲದೆ ಅಮಾಯಕ ಜೀವಗಳು ಸಾಯುತ್ತವೆ.

ಅಮೇರಿಕದಲ್ಲಿ ಕಾಲೋನಿ ಕೊಲ್ಯಾಪ್ಸ್‌ ಡಿಸಾರ್ಡರ್‌ ಎಂಬುದೊಂದು ಶುರುವಾಗಿದೆ. ಆರೋಗ್ಯವಂತ ಜೇನು ಸಂಸಾರ ಇದ್ದಕ್ಕಿದ್ದಂತೆ ಸಾಯುವುದೇ ಈ ರೋಗ. ಇದರಿಂದ ಕೆಲವೊಂದು ಪ್ರದೇಶದಲ್ಲಿ ಶೇ. 99ರಷ್ಟು ಜೇನುನೊಣಗಳು ಕಣ್ಮರೆಯಾಗಿವೆ. ಇದು ತುಂಬಾ ಆಘಾತಕಾರಿ ಬೆಳವಣಿಗೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಭವಿಷ್ಯದಲ್ಲಿ ಈ ಸಮಸ್ಯೆ ಭಾರತಕ್ಕೂ ಬಂದರೂ ಅಚ್ಚರಿಯಿಲ್ಲ. ಅದಕ್ಕಿಂತ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಷ್ಟೆ.

ಸುಖವಾದ ಜೇನು ಸಂಸಾರಕ್ಕೆ ಕಲ್ಲೆಸೆಯದಿರುವುದು ನಮ್ಮ ಕರ್ತವ್ಯ. ಒಂದೊಮ್ಮೆ ಜೇನು ತೆಗೆದರೂ ಅರ್ಧದಷ್ಟು ತುಪ್ಪವನ್ನು ಅಲ್ಲೇ ಬಿಡಬೇಕು. ಹೀಗಾದರೆ, ಇವನ್ನೇ ತಿಂದು ನೊಣಗಳು ಬದುಕುತ್ತವೆ. ಮತ್ತೆ ಹೊಸ ಜೀವನ ಆರಂಭಿಸುತ್ತವೆ. ಆದರೆ, ಗೂಡು ಸುಟ್ಟು ಜೇನು ತಿಂದು ಸಂಭ್ರಮಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗಿದ್ದು ನಾವೇ. ಜೊತೆಗೆ ಆಧುನಿಕ ವಿಧಾನದಲ್ಲಿ ಗೂಡಿನಲ್ಲಿ ಜೇನನ್ನು ಸಾಕುವುದು ಕೂಡ ಉತ್ತಮ ವಿಧಾನವೇ.

ಜೇನು ಸಮಾಜ ವ್ಯವಸ್ಥೆ….
🐝🐝🐝🐝🐝🐝🐝🐝🐝
ಇವುಗಳು ಸಮೂಹ ಜೀವಿಗಳು. ಇವುಗಳಲ್ಲಿ ಮೂರು ಸ್ತರಗಳಿವೆ. ಒಂದು ಜೇನುಗೂಡಿನಲ್ಲಿ ಇಲ್ಲಿ ಒಂದು ರಾಣಿ, ನೂರಾರು ಡ್ರೋಣ್‌ ಮತ್ತು ಸಾವಿರಾರು ಕೆಲಸಗಾರ ನೊಣಗಳಿರುತ್ತವೆ. ಇವುಗಳ ಸಮನ್ವಯದ ಕೆಲಸದ ಫ‌ಲವೇ ನಮ್ಮ ಬಾಯಿ ತಣಿಸೊ ಮಧು. ಇದು ನಾಲಗೆಗೂ ಸಿಹಿ, ಆರೋಗ್ಯಕ್ಕೂ ಒಳ್ಳೆಯ ಔಷಧಿ.

ಒಂದು ಗೂಡಿನಲ್ಲಿ ಶೇ. 99ರಷ್ಟು ಕೆಲಸಗಾರ ನೊಣಗಳಿರುತ್ತವೆ. ಇವೆಲ್ಲ ಮೊಟ್ಟೆ ಇಡಲಾರದ ಹೆಣ್ಣು ನೊಣಗಳು. ಇವುಗಳು ಬದುಕಿನ ವಿವಿಧ ಸ್ತರಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತವೆ. ಲಾರ್ವಾಗೆ ಆಹಾರ ಕೊಡುವುದು, ರಾಣಿಯ ಆರೈಕೆ ಮಾಡಿ ಒಲವು ಗಿಟ್ಟಿಸಿಕೊಳ್ಳುವುದು, ಜೇನುಗೂಡನ್ನು ಸ್ವತ್ಛವಾಗಿರುವುದು, ಆಹಾರವನ್ನು ಸಂಗ್ರಹಿಸುವುದು, ಜೇನು ತಟ್ಟಿಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಜವಾಬ್ದಾರಿ ಈಕೆಯದ್ದೇ. ಗಂಡು ನೊಣಗಳನ್ನು ಡ್ರೋಣ್‌ ಎಂದು ಕರೆಯಲಾಗುತ್ತದೆ. ಇವುಗಳ ದೇಹ ದೊಡ್ಡ¨ªಾಗಿದ್ದು, ದೊಡ್ಡ ಕಣ್ಣುಗಳನ್ನೂ ಹೊಂದಿರುತ್ತವೆ. ರಾಣಿ ಜೊತೆಗೆ ಸಂಗಾತಿಯಾಗಿ ಇರುವುದು ಈ ಡ್ರೋಣ್‌ಗಳ ಕೆಲಸ. ಆದರೆ, ರಾಣಿ ಜೊತೆಗಿನ ಸಾಂಗತ್ಯದ ಅವಕಾಶ ಸಿಗುವುದು ಒಂದು ಡ್ರೋಣ್‌ಗೆ ಮಾತ್ರ! ಆದರೆ, ಹೀಗೆ ರಾಣಿ ಮತ್ತು ಡ್ರೋಣ್‌ ಒಂದುಗೂಡಿದ ತಕ್ಷಣ ಗಂಡು ನೊಣ ಸತ್ತುಹೋಗುತ್ತದೆ. ಇನ್ನು, ರಾಣಿಯೇ ಇಡೀ ಗೂಡಿಗೆ ನಾಯಕಿ. ಮೊಟ್ಟೆ ಇಡುವ ಸದಸ್ಯೆ ಈಕೆ ಮಾತ್ರ. ವಸಂತಕಾಲ ಮತ್ತು ಬೇಸಿಗೆಯಲ್ಲಿ ರಾಣಿ ದಿನಕ್ಕೆ 1,500ರಷ್ಟು ಮೊಟ್ಟೆ ಇಡುತ್ತಾಳೆ.

ಒಂದೊಮ್ಮೆ ರಾಣಿ ನೊಣ ಸತ್ತರೆ ಕೆಲಸಗಾರ ನೊಣಗಳು ಹೊಸ ಲಾರ್ವಾದ ಮೂಲಕ ಹೊಸ ರಾಣಿಯನ್ನು ಸೃಷ್ಟಿಸುತ್ತವೆ. ಅಂದರೆ ಸತ್ತ ನೊಣ ಅದಾಗಲೇ ಮೊಟ್ಟೆ ಇಟ್ಟಿದ್ದರೆ ಮಾತ್ರ ಹೊಸ ರಾಣಿಯ ಸೃಷ್ಟಿ ಸಾಧ್ಯ. ಇಲ್ಲದಿದ್ದರೆ ಇಡೀ ಸಂಸಾರವೇ ಕೊನೆಯಾಗುತ್ತದೆ. ಗಂಟೆಗೆ 25 ಕಿ.ಮೀ. ವೇಗದಲ್ಲಿ ಸಂಚರಿಸುವ ನೊಣಗಳ ರೆಕ್ಕೆಗಳು ಸೆಕೆಂಡಿಗೆ 200 ಸಲ ಬಡಿಯುತ್ತವೆ. ಕೆಲಸಗಾರ ನೊಣಗಳು ಐದರಿಂದ ಆರು ವಾರಗಳಷ್ಟು ಕಾಲ ಬದುಕುತ್ತವೆ. ರಾಣಿ ಜೇನಿನ ಜೀವತಾವಧಿ ಸುಮಾರು ಆರರಿಂದ ಏಳು ವರ್ಷ.

ಜೇನುನೊಣಗಳು ಅನ್ನದಾತರ ಮಿತ್ರ.
🐝🐝🐝🐝🐝
ಬೆಳೆ ಬೆಳೆಯು ವಾಗಲೂ ಈ ನೊಣಗಳ ಪಾತ್ರ ಬಲು ಮಹತ್ವವಾದುದು. ಇದು ಹಲವರಿಗೆ ಆದಾಯದ ಮೂಲವೂ ಹೌದು. ಬದುಕಿನುದ್ದಕ್ಕೂ ಬೇರೆಯವರಿಗೇ ಸಿಹಿ ಕೊಡಲು ಕಷ್ಟಪಡುವ ಈ ಪುಟ್ಟ ಜೀವಗಳು ಈಗ ಕಹಿ ನುಂಗುತ್ತಿವೆ. ಬದುಕನ್ನೇ ಕಳೆದುಕೊಳ್ಳುತ್ತಿವೆ.

ಜೇನುನೊಣಗಳನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಅದಕ್ಕೇನು ದೊಡ್ಡ ತ್ಯಾಗ ಮಾಡಬೇಕಾಗಿಲ್ಲ. ನಾವಿದ್ದ ಪರಿಸರ ಚೆನ್ನಾಗಿಟ್ಟರೆ ಅಷ್ಟೇ ಸಾಕು. ಆದಷ್ಟು ಸಾವಯವ ಕೃಷಿ ಪದ್ಧತಿ ಅನುಸರಿಸುವುದು, ಮರಗಿಡಗಳನ್ನು ಬೆಳೆಸಬೇಕಷ್ಟೇ. ನೆನಪಿರಲಿ… ಜೇನುನೊಣವಿದ್ದರೆ ನಾವಿರುತ್ತೇವೆ.

“ಮಧುರಾಣಿ’ಗೆ ಕಿರೀಟ…..
🐝
ಜೇನುನೊಣಗಳು ಶ್ರಮಜೀವಿಗಳು. ಇದೇ ಶ್ರಮ ಈ ಜೀವಗಳಿಗೆ ದೊಡ್ಡ ಪಟ್ಟದ ಸಿಹಿ ತರುತ್ತಿದೆ. ರಾಜ್ಯದಲ್ಲಿ ಜೇನುನೊಣಕ್ಕೊಂದು ದೊಡ್ಡ ಕಿರೀಟ ತೊಡಿಸಲು ರಾಜ್ಯ ಜೀವವೈವಿಧ್ಯ ಮಂಡಳಿ ಪಣತೊಟ್ಟಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜೇನುನೊಣಗಳಿಗೆ “ಕರ್ನಾಟಕ ರಾಜ್ಯದ ಕೀಟ’ದ ಸ್ಥಾನ ಸಿಗಲಿದೆ. ಈ ಬಗೆಗಿನ ಪ್ರಯತ್ನದಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿ ತೊಡಗಿದ್ದಾಗಿ ಮಂಡಳಿ ಅಧ್ಯಕ್ಷ ಎಸ್‌. ಪಿ. ಶೇಷಾದ್ರಿ ಹೇಳುತ್ತಾರೆ. ಈ ಪ್ರಯತ್ನ ಸಫ‌ಲವಾದರೆ “ರಾಜ್ಯ ಕೀಟ ಪಡೆದ ಮೊದಲ ರಾಜ್ಯ’ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಅದಕ್ಕಿಂತ ದೊಡ್ಡ ಸಿಹಿ ಮತ್ತೂಂದಿಲ್ಲ. ಮಂಡಳಿಯ ಕಾರ್ಯ ನಿಜಕ್ಕೂ ಸ್ತುತ್ಯರ್ಹ. ಆದರೆ, ಬರೀ ಜೇನಿಗೆ ಪಟ್ಟ ಕೊಟ್ಟು ನಾವು ಸುಮ್ಮನಾಗುವಂತಿಲ್ಲ. ಜೇನುನೊಣಗಳ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.

🐝
ಜೇನು ಹುಳ ಹಾಗೆಲ್ಲ ಸುಮ್ಮನೆ ಕಚ್ಚುವುದಿಲ್ಲ. ನಾವೇನಾದರೂ ಅವಕ್ಕೆ ಪೆಟ್ಟು ಮಾಡಿದರೆ ಮಾತ್ರ ಅವು ಸಿಟ್ಟಿಗೇಳುತ್ತದೆ. ಜೀನಿನ ಗುಂಪಿನಲ್ಲಿ ಯಾವುದೇ ಒಂದು ಹುಳಕ್ಕೆ ಪೆಟ್ಟಾದರೂ ಸಾಕು ಅವು ಗುಂಪಾಗಿ ಬಂದು ದಾಳಿ ಮಾಡುತ್ತವೆ. ಜೇನು ಹುಳ ಕಚ್ಚಿದರೆ ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದೆರಡು ಹುಳ ಕಚ್ಚಿದರೆ ವೈದ್ಯರ ಬಳಿ ಹೋಗಬೇಕು ಎಂದಿಲ್ಲ. ಆದರೆ ಬಹಳ ಕಚ್ಚಿದಾಗ ವೈದ್ಯರ ಬಳಿ ಹೋಗಲೇ ಬೇಕು.

ಜೇನು ಹುಳ ಕಚ್ಚಿದ ತಕ್ಷಣ ಹೀಗೆ ಮಾಡಿ 🐝

ಜೇನಿನ ಮುಳ್ಳು(ಅಂಬು)…..🐝
ಜೇನು ಕಚ್ಚಿದ ಅದರ ಬಾಯಲ್ಲಿರು ಮುಳ್ಳನ್ನು ಕಚ್ಚಿದ ಜಾಗದಲ್ಲಿ ಇರುತ್ತದೆ. ಅದನ್ನು ತಕ್ಷಣ ತೆಗೆದುಕೊಳ್ಳಬೇಕು. ಆ ಮುಳ್ಳನ್ನು ತೆಗೆದುಕೊಳ್ಳದಿದ್ದರೆ ನಂಜು ಹೆಚ್ಚುತ್ತದೆ. ಕಚ್ಚಿದ ಜಾಗ ಬಹಳ ಊದಿಕೊಳ್ಳುತ್ತದೆ.

ಅರಿಶಿಣ, ನೀರು,ಉಪ್ಪು…..🐝
ಜೇನು ಹುಳ ಕಚ್ಚಿದ ಜಾಗಕ್ಕೆ ಅರಿಶಿಣ, ಉಪ್ಪು, ನೀರು ಈ ಮೂರನ್ನು ಬೆರೆಸಿಕೊಂಡು ಹಚ್ಚಿಕೊಳ್ಳಬೇಕು. ಉರಿ, ಊದುವಿಕೆ, ನಂಜು, ತುರಿಕೆ ಕಡಿಮೆ ಆಗುತ್ತದೆ.

ಹಾಲು….🐝
ಜೇನು ಹುಳ ಕಚ್ಚಿದ ತಕ್ಷಣ ತಣ್ಣಗಿನ ಹಾಲನ್ನು ಕುಡಿಯಬೇಕು. ಜೇನು ಕಚ್ಚಿದ ಉರಿಗೆ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹಾಲು ಕುಡಿದರೆ ಹೊಟ್ಟೆ ಉರಿ ಕಡಿಮೆ ಆಗುತ್ತದೆ.

ಅರಿಶಿಣ, ಬೆಲ್ಲ…..🐝
ಜೇನು ಹುಳ ಕಚ್ಚಿದ ತಕ್ಷಣ ಅರಿಶಿಣ ಮತ್ತು ಬೆಲ್ಲವನ್ನು ಸೇರಿಸಿಕೊಂಡು 2 ಚಮಚ ಆಗುವಷ್ಟು ತಿನ್ನಬೇಕು.

ಜೇನು ತುಪ್ಪ…..🐝
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಜೇನು ಹುಳ ಕಚ್ಚಿದ ಜಾಗಕ್ಕೆ ಜೇನು ತುಪ್ಪವನ್ನು ಹಚ್ಚ ಬೇಕು. ಜೇನು ತುಪ್ಪ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ತುರಿಕೆಯಾಗುವುದಿಲ್ಲ.

ಮಂಜುಗಡ್ಡೆ…..🐝
ಜೇನು ಹುಳ ಕಚ್ಚಿದ ಜಾಗವನ್ನು ಸ್ವಚ್ಛವಾಗಿ ತೊಳೆದುಕೊಂಡು ಆ ಭಾಗಕ್ಕೆ ಮಂಜುಗಡ್ಡೆಯನ್ನು ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದರೆ ವಿಷ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

ಬದನೆಕಾಯಿ…🐝
ಜೇನು ಹುಳ ಕಚ್ಚಿದ 1 ದಿನ ಬದನೆಕಾಯಿಯನ್ನು ಸೇವಿಸಬಾರದು. ಬದನೆ ಕಾಯಿ ಸೇವಿಸಿದರೆ ಜೇನು ಕಚ್ಚಿದ ಜಾಗ ನಂಜು ಆಗುವ ಸಾಧ್ಯತೆ ಇರುತ್ತದೆ.

( ಪ್ರಕೃತಿ ವಿಸ್ಮಯ 🐝🐝🐝)

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author