लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
29/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ರಸ್ತೆ ಬ್ರಹತ್‌ ಗುಂಡಿಯಲ್ಲಿ ಮೀನು ಹಿಡಿದು ಬಿಜೆಪಿ ವಿನೂತನ ಪ್ರತಿಭಟನೆ……

1 min read

‎ರಸ್ತೆ ಬ್ರಹತ್‌ ಗುಂಡಿಯಲ್ಲಿ ಮೀನು ಹಿಡಿದು ಬಿಜೆಪಿ ವಿನೂತನ ಪ್ರತಿಭಟನೆ

‎ಮೂಡಿಗೆರೆ : ಗೋಣಿಬೀಡಿನ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು

‎ಇದು ರಸ್ತೆನಾ ?? ಅಥವಾ ಕೆರೆಯಾ??ರಸ್ತೆ ಮೇಲೆ ವಾಹನ ಓಡಬೇಕಿತ್ತು. ಆದರೆ ಇಲ್ಲಿ ರಸ್ತೆ ಗುಂಡಿಯಲ್ಲೇ ಮೀನು ಹಿಡಿಯುವ ಪರಿಸ್ಥಿತಿ!

‎ಗೋಣಿಬೀಡು ಹೋಬಳಿಯ ಗ್ರಾಮೀಣ ರಸ್ತೆಗಳ ದುಸ್ಥಿತಿಯನ್ನು ಖಂಡಿಸಿ ಗೋಣಿಬೀಡು ಬಿಜೆಪಿ ಅಧ್ಯಕ್ಷರಾದ ಭರತ್ ವಾಲೆಕರೆಟಿ ಅವರ ನೇತೃತ್ವದಲ್ಲಿ ಇಂದು ವಿನೂತನ ಪ್ರತಿಭಟನೆ ನಡೆಸಲಾಯಿತು.

‎ರಸ್ತೆಯ ಬೃಹತ್ ಗುಂಡಿಗಳಲ್ಲಿ ನೀರು ತುಂಬಿದ್ದನ್ನು ಕಂಡ ಪ್ರತಿಭಟನಾಕಾರರು, ಗಾಳ ಹಾಕಿ ಮೀನು ಹಿಡಿಯುವ ಮೂಲಕ ಸರ್ಕಾರದ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಸ್ತೆಗಳ ದುಸ್ಥಿತಿಯನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಿದರು.

‎ರಸ್ತೆ ಗುಂಡಿಗಳಿಂದ ವಾಹನ ಸವಾರರು, ಶಾಲಾ ಮಕ್ಕಳು, ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯೋ? ಕೆರೆಯೋ? ಎನ್ನುವುದೇ ತಿಳಿಯದಂತಾಗಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

‎ಸ್ಥಳದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು, “ಮೊದಲು ಗುಂಡಿ ಮುಚ್ಚಿ. ನಂತರ ಅಭಿವೃದ್ಧಿಯ ಮಾತಾಡಿ” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

‎ಜನರ ಓಡಾಟಕ್ಕೆ ನಿರ್ಮಿಸಿರುವ ರಸ್ತೆಗಳು ಈ ಸ್ಥಿತಿಗೆ ತಲುಪಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದ ಬಿಜೆಪಿ ಮುಖಂ ಡರು, ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಗುಣಮಟ್ಟದ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನೊಂದು ವಾರದ ಒಳಗೆ ರಸ್ತೆ
‎ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರ ಮನೆಯವರಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಎಚ್ಚರಿಸಿದರು.

‎ರಸ್ತೆಯಲ್ಲಿ ಮೀನು ಹಿಡಿದ ಈ ಪ್ರತಿಭಟನೆ ಇದೀಗ ಗೋಣಿಬೀಡಿನಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣ ದಲ್ಲೂ ಹರಿದಾಡಿ ಸುದ್ದಿ ಮಾಡುತ್ತಿದೆ.

‎ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜೆ ಎಸ್ ರಘು, ಮುಖಂಡರಾದ ದೀಪಕ್ ದೊಡ್ಡಯ್ಯ, ಮಂಡಲ ಉಪಾಧ್ಯಕ್ಷ ಸುನಿಲ್ ನೀಡುಗೂಡು, ಜೆಡಿಎಸ್ ಹೋಬಳಿ ಅಧ್ಯಕ್ಷ ಪ್ರಹ್ಲಾದ್ ಜನ್ನಾಪುರ,
‎ಕಾರ್ಯದರ್ಶಿ ಆದರ್ಶ್ ಕನ್ನೇಹಳ್ಳಿ, ಲ್ಯಾಪ್ಸ್ ಮಾಜಿ ಅಧ್ಯಕ್ಷ ಮುತ್ತಪ್ಪ ಕಿರುಗುಂದ ಪ್ರಶಾಂತ್ ಬಿಳುಗುಳ, ಅವಿನಾಶ್, ಸುನಿಲ್ ಮಣ್ಣಿಕೆರೆ, ಪ್ರಕಾಶ್ ಕಿರುಗುಂದ, ವೆಂಕಟೇಶ್, ಗಜೇಂದ್ರ.. ಸಚ್ಚಿನ್ ಉದುಸೆ, ಸುರೇಶ್ ಯು ಎಸ್.‎ಸಂದೀಪ್ ಕೇಲ್ಲೂರ್, ವಿಭಾಸುಷ್ಮಾ, ಚಿರಾಗ್, ರಂಜಿತ್ ಕುಮಾರ್, ನಯನ ಏನ್ ಕೆ, ಸಂತೋಷ್, ಒಬಿಸಿ ಮೋರ್ಚಾ ಪ್ರದಾನ ಕಾರ್ಯದರ್ಶಿ ಗಿರೀಶ್, ಭರತ್, ರಾಜು ಮತ್ತು ಎಲ್ಲ ಬಿಜೆಪಿ ಬೂತ್ ಅಧ್ಯಕ್ಷರು, ಮುಖಂಡರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *