ದಿನಾಂಕ 28/08/2026 ರಂದು ಶ್ರೀ ಸಿ.ಬಿ. ಶಂಕರ್ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ….
1 min read
ದಿನಾಂಕ 28/08/2026 ರಂದು ಶ್ರೀ ಸಿ.ಬಿ. ಶಂಕರ್ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.
ಉಪಸ್ಥಿತಿ:
1. ಶ್ರೀ ಸಿ.ಬಿ. ಶಂಕರ್ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
2. ಶ್ರೀ ಶಿವಾನಂದ ಸ್ವಾಮಿ ಮಾನ್ಯ ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
3. ಶ್ರೀ ಕೃಷ್ಣೇಗೌಡ ಮಾನ್ಯ ಉಪಾಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
4. ಶ್ರೀಮತಿ ಮೀನಾಕ್ಷಿ, ಸಹಾಯಕ ಲೆಕ್ಕಾಧಿಕಾರಿ ತಾಲ್ಲೂಕು ಪಂಚಾಯಿತಿ ಮೂಡಿಗೆರೆ
5. ಶ್ರೀ ಹರ್ಷ ಮೆಲ್ವಿನ್ ಲಾಸ್ರಾದೋ, ಮಾನ್ಯ ಸದಸ್ಯರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
6. ಶ್ರೀ ರಮೇಶ್ ಹೊಸಕೆರೆ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
7. ಶ್ರೀ ನಾರಾಯಣ ನಿಡಗೋಡು ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
8. ಶ್ರೀ ಗುರುವಪ್ಪ ಹಳ್ಳದಗಂಡಿ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
9. ಶ್ರೀ ಶ್ರೀನಿವಾಸ್ ಕುನ್ನಳ್ಳಿ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
10. ಶ್ರೀ ನವೀನ್ ಕೆಂಜಿಗೆ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
11. ಶ್ರೀ ಭರತ್ ಬಿಳಗುಳ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
12. ಶ್ರೀ ದೀಕ್ಷಿತ್ ಹಾಲೂರು ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
13. ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
14. ಶ್ರೀಮತಿ ಲೀಲಾವತಿ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
15. ಶ್ರೀಮತಿ ಜಯಶ್ರೀ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಚಿಕ್ಕಮಗಳೂರು
16. ಶ್ರೀ ಸುದೀಪ್, ಐ.ಟಿ.ಐ. ಕಾಲೇಜು ಮೂಡಿಗೆರೆ
17. ಶ್ರೀಮತಿ ಇಂಪಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
18. ಶ್ರೀ ಇಂದ್ರೇಶ್ ಶಿರಸ್ತೇದಾರ್ ಆಹಾರ ಇಲಾಖೆ
19. ಶ್ರೀ ಲೋಹಿತ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಮೆಸ್ಕಾಂ ಇಲಾಖೆ
20. ಶ್ರೀ ಮಂಜುನಾಥ್, ಸಂಚಾರ ನಿಯಂತ್ರಕರು ಕೆ.ಎಸ್.ಆರ್.ಟಿ.ಸಿ. ಮೂಡಿಗೆರೆ
ಸ್ವಾಗತ: ಶ್ರೀಮತಿ ಮೀನಾಕ್ಷಿ, ಸಹಾಯಕ ಲೆಕ್ಕಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರುತ್ತಾ, ಸಭೆಯನ್ನು ನಡೆಸಿಕೊಡುವಂತೆ ಮಾನ್ಯ ಅಧ್ಯಕ್ಷರನ್ನು ಕೋರಿದರು.
ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29191 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 26749 ಅರ್ಹ ಫಲಾನುಭವಿಗಳಾಗಿರುತ್ತಾರೆ. ಜೂನ್-2026 ಮಾಹೆಯಲ್ಲಿರೂ.53498000/- ಗೃಹಲಕ್ಷ್ಮೀ ಯೋಜನೆಯ ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ವಿವಿಧ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆಯಿಂದ ಹೊರಗೆ ಉಳಿದ NPCI-114, IT/GST-557, ತಿದ್ದುಪಡಿ/ಮರಣ-525, ಇ-ಕೆ.ವೈ.ಸಿ. ಬಾಕಿ 14, ಹೊಸ ಫಲಾನುಭವಿಗಳು 11, ಪಾವತಿಯಾಗದಿರುವ ಫಲಾನುಭವಿಗಳ ಸಂಖ್ಯೆ 1221 ಇರುತ್ತದೆ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ನಡೆಯಲಿದ್ದು, ಎಲ್ಲಾ ಗೃಹಲಕ್ಷ್ಮೀ ಫಲಾನುಭವಿಗಳು ಪರಿಷ್ಕರಣೆಗೆ ಸಹಕರಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.
ಗೃಹಲಕ್ಷ್ಮೀ MIS ವರದಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಮಾಹಿತಿ ಒಟ್ಟಾಗಿ ಬರುತ್ತಿದ್ದು, ಕಳಸ ಪ್ರತ್ಯೇಕ ತಾಲ್ಲೂಕು ಆಗಿರುವುದರಿಂದ MIS ನಲ್ಲಿ ಮೂಡಿಗೆರೆ ತಾಲ್ಲೂಕಿನ ವರದಿ ಪ್ರತ್ಯೇಕವಾಗಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 25957 ಗೃಹಜ್ಯೋತಿ ಫಲಾನುಭವಿಗಳು ಇದ್ದು, 22337 ಫಲಾನುಭವಿಗಳಿಗೆ ಸರ್ಕಾರದಿಂದ ರೂ. 9685968/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾದ ಮೊತ್ತ ರೂ.35440/- ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಗಿಂತ ಅಧಿಕ ವಿದ್ಯುತ್ ಬಳಸಿರುವ ಫಲಾನುಭವಿಗಳ ಸಂಖ್ಯೆ 2514 ಇದ್ದು, ರೂ.4103501/- ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಹಿಂದೆ ನಡೆದ ಗೃಹಜ್ಯೋತಿ ಪರಿಷ್ಕರಣೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ 20981 ಕುಟುಂಬಗಳ ಸರ್ವೆ ನಡೆಸಲಾಗಿ 18547 ಕುಟುಂಬಗಳು ಅರ್ಹರಿರುವುದು ಕಂಡುಬಂದಿರುತ್ತದೆ. ಸರ್ವೆಯಿಂದ ಹೊರಗೆ ಉಳಿದ ಕುಟುಂಬಗಳು ಸರಿಯಾದ ದಾಖಲೆಗಳನ್ನು ನೀಡುವಂತೆ ಸಭೆಯಲ್ಲಿ ತಿಳಿಸಲಾಯಿತು.
ಅನ್ನಭಾಗ್ಯ ಯೋಜನೆ:

ಆಹಾರ ಶಿರಸ್ತೇದಾರರು ಸಭೆಗೆ ಅನ್ನ ಭಾಗ್ಯ ಯೋಜನೆಯ ಪ್ರಗತಿ ವರದಿ ಮಂಡಿಸಿದರು. ಸದ್ಯ ಅನ್ನಭಾಗ್ಯ ಯೋಜನೆಯಡಿ ಎನ್.ಎಫ್.ಐ. ಅಕ್ಕಿ ವಿತರಿಸಲಾಗುತ್ತಿದೆ. ಪಡಿತರ ವಿತರಣೆಗೆ, ಬಯೋಮೆಟ್ರಿಕ್ ಎರಡು ಬಾರಿ ಮಾಡಿರುತ್ತಾರೆ. ಸೆಪ್ಟೆಂಬರ್ 1 ರಿಂದ EKYC ಮಾಡುತ್ತಿದ್ದು, ಬಿ.ಪಿ.ಎಲ್. ಮತ್ತು ಅಂತ್ಯೋದಯ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ EKYC ಮಾಡಲು ಅವಕಾಶ ಕಲ್ಪಿಸಿದ್ದು ಬಿ.ಪಿ.ಎಲ್. ಮತ್ತು ಅಂತ್ಯೋದಯ ಪಡಿತರ ಚೀಟಿದಾರರು ಕಡ್ಡಾಯವಾಗಿ EKYC ಮಾಡಿಸಿಕೊಳ್ಳುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಯುವನಿಧಿ ಯೋಜನೆ:
ಯುವನಿಧಿ ಯೋಜನೆಯಡಿ 517 ವಿಧ್ಯಾರ್ಥಿಗಳು ನೊಂದಣಿಯಾಗಿದ್ದು, ಈವರೆಗೂ ಪದವಿ ವಿಭಾಗದಲ್ಲಿ 4822 ಹಾಗೂ ಡಿಪ್ಲೊಮೋ ವಿಭಾಗದಲ್ಲಿ 57 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಜುಲೈ-2026 ರ ಮಾಹೆಯವರೆಗೆ ಸರ್ಕಾರದಿಂದ ಒಟ್ಟು ರೂ.14551500/- ಅನುದಾನ ಬಿಡುಗಡೆಯಾಗಿರುತ್ತದೆ. ತಾಲ್ಲೂಕಿನಲ್ಲಿ 13 ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. 13 ವಿದ್ಯಾರ್ಥಿಗಳಿಗೆ ತರಭೇತಿ ನೀಡಲಾಗಿದ್ದು, ಪರೀಕ್ಷೆ ಬರೆದಿರುವುದಾಗಿ ಪ್ರಾಂಶುಪಾಲರು ಎ.ಐ.ಟಿ. ಕಾಲೇಜು ಮೂಡಿಗೆರೆರವರು ಸಭೆಯಲ್ಲಿ ಮಾಹಿತಿ ನೀಡಿದರು.
ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಜುಲೈ-2026ರ ಮಾಹೆಯಲ್ಲಿ ಪ್ರಸ್ತುತ 362519 ಬಸ್‌ನಲ್ಲಿ ಪ್ರಯಾಣಿಸಿದ್ದು, ರೂ.18363884/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು. ಹಾಗೂ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಶಕ್ತಿ ಯೋಜನೆಯಡಿ ಪ್ರಯಾಣ ದರ ರೂ. 647608828/- ಆಗಿರುತ್ತದೆ.
ತಾಲ್ಲೂಕಿನಲ್ಲಿ ಹಾಲಿ 67 ಬಸ್ ಗಳು ಓಡಾಡುತ್ತಿದ್ದು, ಇನ್ನೆರಡು ತಿಂಗಳಲ್ಲಿ 5 ಬಸ್‌ಗಳ FC ಮುಗಿಯುವುದರಿಂದ ನಿಲುಗಡೆ ಮಾಡಲಾಗುವುದು ಹಾಗೂ ಸರ್ಕಾರದಿಂದ 4 ಹೊಸ ಬಸ್ ಬರುತ್ತಿರುವುದಾಗಿ ಸಭೆಯಲ್ಲಿ ಮಾಹಿತಿ ನೀಡಿದರು.
ಹೆಚ್ಚಿನ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಮಂಗಳೂರಿಗೆ ಹೋಗುತ್ತಿದ್ದು, ಚಿಕ್ಕಮಗಳೂರು, ಮೂಡಿಗೆರೆ, ಕಡೂರು ಘಟಕದ ಬಸ್‌ಗಳು ಫರಂಗಿಪೇಟೆಯಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆಗೆ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇತರೆ ವಿಷಯಗಳು:
ಗೃಹಲಕ್ಷ್ಮೀ ಪರಿಷ್ಕರಣೆಗೆ ಸರ್ವೆ ನಡೆಸಲು ಉದ್ದೇಶಿಸಿದ್ದು, ಮೂಡಿಗೆರೆ ಪಟ್ಟಣದ 11 ವಾರ್ಡ್ ಮತ್ತು ಮೂಡಿಗೆರೆ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳನ್ನು ಮೇಲ್ವಿಚಾರಕರಾಗಿ ನೇಮಿಸಲಾಗಿದ್ದು, ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆಯಲ್ಲಿ ಭಾಗವಹಿಸುವಂತೆ ಶ್ರೀ ಸಿ.ಬಿ. ಶಂಕರ್ ಚಿಕ್ಕಹಳ್ಳ ಮಾನ್ಯ ಅಧ್ಯಕ್ಷರು ಕೋರಿದರು.
ಅಧ್ಯಕ್ಷರು ಸದಸ್ಯ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ
ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

