लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇವರ ಕುಟುಂಬ ವರ್ಗದವರಿಗೆ ಸರ್ಕಾರಿ ನೌಕರರ ಸಮಗ್ರ ವೇತನ ಖಾತೆಯಿಂದ ಒಂದು ಕೋಟಿ ವಿಮಾ ಮೊತ್ತವನ್ನು ಕೆನರಾ ಬ್ಯಾಂಕ್ ಮೂಡಿಗೆರೆ ವತಿಯಿಂದ ನೀಡಲಾಗಿದೆ…..

1 min read

‎ಇಂದು ಮೂಡಿಗೆರೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಸೇರಿ ಕೆನರಾ ಬ್ಯಾಂಕ್ ಮೂಡಿಗೆರೆ ಇಲ್ಲಿಗೆ ಭೇಟಿ ನೀಡಲಾಯಿತು. ಮೂಡಿಗೆರೆ ತಾಲ್ಲೂಕಿನ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ನೌಕರರಾದ ಶ್ರೀ ಹೆಚ್ ಜಿ ರಾಜಪ್ಪ, ಹಾಲೂರು ಶಾಲೆ ಇವರು ಆಕಸ್ಮಿಕ ಅಪಘಾತದಿಂದ ನಿಧನ ಹೊಂದಿದ್ದರು. ಇವರ ಕುಟುಂಬ ವರ್ಗದವರಿಗೆ ಸರ್ಕಾರಿ ನೌಕರರ ಸಮಗ್ರ ವೇತನ ಖಾತೆಯಿಂದ ಒಂದು ಕೋಟಿ ವಿಮಾ ಮೊತ್ತವನ್ನು ಕೆನರಾ ಬ್ಯಾಂಕ್ ಮೂಡಿಗೆರೆ ವತಿಯಿಂದ ನೀಡಲಾಗಿದೆ. ಈ ವಿಷಯವನ್ನು ತಿಳಿದು ಮೂಡಿಗೆರೆ ಸರ್ಕಾರಿ ನೌಕರರ ಸಂಘದ ಆಗಿನ ಅಧ್ಯಕ್ಷರಾಗಿದ್ದಂತಹ ಶ್ರೀಯುತ ನವೀನ್ ಬಿ ಆರ್ ಇವರ ನೇತೃತ್ವದಲ್ಲಿ ಮೂಡಿಗೆರೆ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ನಿರ್ದೇಶಕರು ಸೇರಿ ಇಂದು ಮೂಡಿಗೆರೆ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಯುತ ಜಗನ್ನಾಥ್ ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗದವರನ್ನು ಈ ಯುವ ಮತ ಮಂಜೂರು ಮಾಡಲು ಸಹಕರಿಸಿದ ಇವರ ಕಾರ್ಯವನ್ನು ಶ್ಲಾಘಿಸಿ,ಅಭಿನಂದಿಸಿ ಸನ್ಮಾನಿಸಲಾಯಿತು.

ಹಾಗೆಯೇ ಮೂಡಿಗೆರೆ ತಾಲೂಕಿನ ಹಾಗೂ ಇತರೆ ಯಾವುದೇ ತಾಲೂಕಿನಲ್ಲಿನ ಎಲ್ಲಾ ಸರ್ಕಾರಿ ನೌಕರರು ತುರ್ತಾಗಿ ತಮ್ಮ ಬ್ಯಾಂಕ್ ಖಾತೆಗಳನ್ನು ಸಮಗ್ರ ವೇತನ ಪ್ಯಾಕೇಜ್ ಖಾತೆಗಳನ್ನಾಗಿ ಪರಿವರ್ತನೆ ಮಾಡಿಸಲು ಸಂಬಂಧಿಸಿದ ಬ್ಯಾಂಕುಗಳನ್ನು ಸಂಪರ್ಕಿಸಲು ನಿಕಟ ಪೂರ್ವ ಅಧ್ಯಕ್ಷರಾದ ನವೀನ್ ಬಿ.ಆರ್ ಇವರು ಎಲ್ಲಾ ಸರ್ಕಾರಿ ನೌಕರರಿಗೆ ಈ ಮೂಲಕ ಸಲಹೆ ನೀಡಿದರು. ನಂತರ ಹೆಚ್.ಜಿ ರಾಜಪ್ಪನವರನ್ನು ಸ್ಮರಿಸಿ, ಅವರ ಕುಟುಂಬಕ್ಕೆ ಶುಭ ಹಾರೈಸಲಾಯಿತು. ಹಾಗೆಯೇ ಈ ಕಾರ್ಯಕ್ಕೆ ಸಹಕರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು,ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರಕ್ಕೆ ಮತ್ತು ಕೆನರಾ ಬ್ಯಾಂಕಿಗೆ ಸರ್ಕಾರಿ ನೌಕರರ ಸಂಘ ಹಾಗೂ ಎಲ್ಲಾ ನೌಕರರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಮಯ್ಯ, ಮಲ್ಲಪ್ಪ, ದಿನೇಶ್, ಅಮೀನ್, ಮಂಜುನಾಥ, ನೂರ್ ಜಾನ್ ಪ್ರತಿಮಾ ಆನಂದ್ ಕುಮಾರ್, ಶಿಕ್ಷಕರಾದ ಮಂಜಪ್ಪ ಟಿ,  ಅನಿಲ್, ಕುಮಾರ್, ರುದ್ರಪ್ಪ , ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.‎

About Author

More Stories

Leave a Reply

Your email address will not be published. Required fields are marked *

You may have missed