ಯಾರ್ರೀ ಇದು ವಿಶ್ವನಾಥ್ ಗದ್ದೆ ಮನೆ!
1 min read
ಅವಿನ್ ಟಿವಿ ಸುದ್ದಿಜಾಲ ✍️:
ವಿಶ್ವನಾಥ್ ಗದ್ದೆಮನೆ:- ಯಾರ್ರೀ ಇದು ವಿಶ್ವನಾಥ್ ಗದ್ದೆ ಮನೆ! ಎಲ್ಲಿ ನೋಡಿದ್ರು ಅವರದ್ದೇ ಬ್ಯಾನರ್ ಎಲ್ಲಿ ಕೇಳಿದ್ರೂ ಅವರದೇ ಹೆಸರು ಚುನಾವಣೆ ಸಮಯದಲ್ಲಿ ಇಂತಹ ಹೆಸರುಗಳು ಕೇಳಿಬರುವುದು ಸರ್ವಸಾಮಾನ್ಯವೇ !ಆದರೆ ಈ ಸಮಯದಲ್ಲಿ ಆಶ್ಚರ್ಯವೇ ನನಗೆ ಅವರು ಯಾರೆಂದು ನಿಜವಾಗಿ ಗೊತ್ತಿಲ್ಲ, ಸೋಶಿಯಲ್ ಮೀಡಿಯಾ ಹಾಗೂ ಶೃಂಗೇರಿ ಕ್ಷೇತ್ರದ ಕಡೆ ಪ್ರಯಾಣಿಸಿದರೆ ಪಕ್ಷಾತೀತವಾಗಿ ಅವರನ್ನು ಸ್ಮರಿಸುತ್ತಿದ್ದಾರೆ ಜನ ಕ್ರೀಡಾಕೂಟಗಳಲ್ಲೂ ಅವರ ಹೆಸರು .ನೂತನ ದೇವಸ್ಥಾನ ನಿರ್ಮಾಣದಲ್ಲೂ ಅವರ ಹೆಸರು .ಊರಿನ ಅಭಿವೃದ್ಧಿ ವಿಚಾರದಲ್ಲೂ ಅವರ ಹೆಸರು. ಕಷ್ಟದ ಮನೆಗಳಲ್ಲಿ ವೈಯಕ್ತಿಕವಾಗಿ ಸಹಾಯ ಮಾಡಿದ ಮಾತುಗಳು. ಅದು ಯಾವುದೋ ಒಂದು ಊರಿಗೆ ತನ್ನ ವೈಯಕ್ತಿಕ ದುಡ್ಡಿನಲ್ಲಿ ರಸ್ತೆ ಡಾಂಬರ್ ರಸ್ತೆ ಮಾಡಿಕೊಟ್ಟ ಮಾತುಗಳು .ಮಲೆನಾಡಿನ ರೈತರ ಪರವಾಗಿ ಹೋರಾಟದಲ್ಲಿ ಮುಂಚೂಣಿ ವಹಿಸಿದ ಮಾತುಗಳು .ಗೋ ಶಾಲೆಗಳಿಗೆ ಸಹಾಯಧನ .ಸರ್ಕಾರಿ ಶಾಲೆಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಸಹಾಯ. ಬಾಳೆಹೊನ್ನೂರು ಹಿಂದೂ ರುದ್ರ ಭೂಮಿಯನ್ನು ಸ್ವಚ್ಛಗೊಳಿಸಿದ ಬ್ಯಾನರ್ ಸಮೇತ ನೋಡಿದೆ ಆ ರಸ್ತೆಯಲ್ಲಿ ತಿರುಗಾಡುವಾಗ ಆ ರುದ್ರ ಭೂಮಿ ಎಷ್ಟು ಸ್ವಚ್ಛವಾಗಿತ್ತೆಂದು ನಮಗೆಲ್ಲ ಗೊತ್ತಿದೆ. ನನಗೆ ಗೊತ್ತಿರುವ ಹಾಗೆ ಅವರು ಯಾವುದೇ ರಾಜಕೀಯ ಅಧಿಕಾರವಿಲ್ಲ ಎಂಬ ಮಾತು ಸ್ಪಷ್ಟ ಅಧಿಕಾರ ಇದ್ದವರು ಇಷ್ಟು ಕೆಲಸ ಮಾಡುತ್ತಿಲ್ಲವೇನು k ಇವರ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ತುಂಬಾ ಇದೆ. ಈ ಸಮಾಜದಲ್ಲಿ ನಮ್ಮನ್ನು ಆಳ್ವಿಕೆ ಮಾಡುವ ಭ್ರಷ್ಟ ರಾಜಕೀಯ ನಾಯಕರುಗಳ ಮಧ್ಯೆ ಯಾವುದೇ ಅಧಿಕಾರವಿಲ್ಲದೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ ಎಂದರೆ ನಾವುಗಳೆಲ್ಲ ಸೇರಿ ಮುಂದೆ ಒಂದು ದಿನ ಇಂತಹ ವ್ಯಕ್ತಿಗಳನ್ನು ಸಮಾಜದಲ್ಲಿ ಗುರುತಿಸಿ ರಾಜಕೀಯವಾಗಿ ಒಂದು ಜವಾಬ್ದಾರಿಯನ್ನು ನೀಡಬೇಕು. ಇವರು ಒಬ್ಬ ಒಳ್ಳೆಯ ಜನನಾಯಕ ಆಗಬಹುದು ಎಂದು ನನ್ನ ವಯಕ್ತಿಕ ಅಭಿಪ್ರಾಯ ಅದೇನೆ ಇರಲಿ ಎಲ್ಲಾ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವನಾಥ್ ಗದ್ದೆಮನೆ ಎಂಬ ಯುವಜನನಾಯಕರು ಇರಬೇಕು ಇದ್ದರೆ ಹಳ್ಳಿಯಿಂದ ಡೆಲ್ಲಿವರೆಗೂ ಅಭಿವೃದ್ಧಿ ಆಗಬಹುದು ಇದು ನನ್ನ ಅಭಿಪ್ರಾಯ ಇವರು ಎಲ್ಲರಿಗೂ ಒಳ್ಳೆಯವರೇ ಆಗಿರಬೆಕೆಂದೇನಿಲ್ಲ ನನಗೆ ಇವರ ಬಗ್ಗೆ ವಯಕ್ತಿಕ ಹೆಮ್ಮೆ ಇದೆ❤️🤝
ನವೀನ್ ಹಾವಳಿ✍️

