ಬಿಜೆಪಿ ಮಂಡಲ ವತಿಯಿಂದ ಬೇರುಗಂಡಿ ಮಠದಲ್ಲಿ ಪಂ.ದೀನದಯಾಳ್ ಪ್ರಶಿಕ್ಷಣ ಕಾರ್ಯಗಾರ….
1 min read
ಅವಿನ್ ಟಿವಿ ಸುದ್ದಿಜಾಲ ✍️:
ಬಿಜೆಪಿ ಮಂಡಲ ವತಿಯಿಂದ ಬೇರುಗಂಡಿ ಮಠದಲ್ಲಿ ಪಂ.ದೀನದಯಾಳ್ ಪ್ರಶಿಕ್ಷಣ ಕಾರ್ಯಗಾರ
ನರೇಂದ್ರ ಮೋದಿ ಶ್ರೀ ಕೃಷ್ಣನ ಅವತಾರ
ವಿಪ,
ಉಪ ಸಭಾಪತಿ ಎಂ ಕೆ ಪ್ರಾಣೇಶ್
ಆಲ್ದೂರು: ಸಮೀಪದ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದಲ್ಲಿ ಶನಿವಾರ ಮಂಡಲ ಬಿಜೆಪಿ ವತಿಯಿಂದ ಪಂಡಿತ್ ದೀನದಯಾಳ್ ಪ್ರಶಿಕ್ಷಣ ಕಾರ್ಯಾಗಾರ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ,1951 ರಲ್ಲಿ ಪ್ರಾರಂಭವಾದ ಜನ ಸಂಘ ಭಾರತೀಯ ಪ್ರಜಾಪ್ರಭುತ್ವದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಾಗಿ ಹೊರಹೊಮ್ಮಲು ಹಿಂದೆ ಪ್ರಶಿಕ್ಷಣ ಮೂಲಕ ಅಡಿಪಾಯ ಹಾಕಿದ ಪಂಡಿತ ದೀನದಯಾಳ್ ಉಪಾಧ್ಯಾಯ ಮತ್ತು ಹಲವಾರು ಹಿರಿಯರ ಪರಿಶ್ರಮ ಕಾರಣ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರನ್ನು ಸಮರ್ಥರಾಗಿಸಲು ಕಾರ್ಯಾಗಾರವನ್ನು ಏಳು ಅವಧಿಗಳಲ್ಲಿ ಹಮ್ಮಿಕೊಂಡಿದ್ದು ಆದರೆ ಯಶಸ್ವಿಗೆ ಸಹಕರಿಸಬೇಕೆಂದು ಮಾತನಾಡಿದರು.
ಉದ್ಘಾಟಕರ ನುಡಿಯನ್ನು ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ
ಎಂ.ಕೆ ಪ್ರಾಣೇಶ್, ಜನ ಸಂಘ ಆರಂಭವಾದಾಗ ಬೆರಳಣಿಕೆಯಷ್ಟೇ ಸದಸ್ಯರು ಇದ್ದು, ಇವರಿಂದ ಏನು ಸಾಧ್ಯ ಎಂದು ಹೀಯಾಳಿಸಿದವರು ಯೋಚಿಸುವಂತೆ ಪ್ರಪಂಚದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲು ಪಂಡಿತ್ ದೀನದಯಾಳ್ ಉಪಾಧ್ಯಾಯರ ಕೊಡುಗೆಗಳ ಅಪಾರ ದೇಶ ಮೊದಲು, ಪಕ್ಷ ಬಳಿಕ ನಾನು, ಎಂಬ ಸಿದ್ಧಾಂತಗಳನ್ನು ಬಿತ್ತಿ ತ್ಯಾಗ ಮನೋಭಾವದಿಂದ ನಿಸ್ವಾರ್ಥವಾಗಿ ಕಟ್ಟಿದ ಫಲವೇ ಇಂದಿನ ಪಕ್ಷ ಸಂಘಟನೆಗೆ ಮೂಲ ಕಾರಣ.
ದೇಶವನ್ನು ಆಳ್ವಿಕೆ ಮಾಡಿ ಯಾವುದೇ ಪಕ್ಷಗಳನ್ನು ಬೆಳೆಯಲು ಬಿಡದೆ ಕುಟುಂಬ ರಾಜಕಾರಣವನ್ನು ಮುಂದುವರಿಸಿಕೊಂಡು ಬಂದ ಕಾಂಗ್ರೆಸ್ ಇಂದು ಯಾವ ಹಂತ ತಲುಪಿದೆ ಎಂಬುದು ಎಲ್ಲರಿಗೂ ಸ್ಪಷ್ಟ ಉದಾಹರಣೆ. ದೇಶದ ಭದ್ರತೆ ಅಭಿವೃದ್ಧಿಯ ಸಿದ್ಧಾಂತದ ಅಡಿಯಲ್ಲಿ ರೂಪಿತವಾದ ಬಿಜೆಪಿ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದಲ್ಲಿ ಅಧಿಕಾರ ವಿಕೇಂದ್ರೀಕರಣ ತತ್ವವನ್ನು ಅನುಸರಿಸಿ ಮಾದರಿ ಆಡಳಿತ ನೀಡಿ ಇಂದು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ
ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ.
ಆರ್ ಎಸ್ ಎಸ್ ಮತ್ತು ಬಿಜೆಪಿ ದೇಶ ವ್ಯಾಪಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ದೇಶಭಕ್ತಿಯನ್ನು ಕಲಿಸುವ ಕಾಯಕ ಮಾಡುತ್ತಿದೆ ಯಾವುದೇ ಜಾತಿ ಭೇದ ಧರ್ಮಗಳ ವಿರುದ್ಧ ದ್ವೇಷವನ್ನು ಬಿತ್ತುವ ಸಿದ್ಧಾಂತವನ್ನು ಸಂಘ ಪರಿವಾರ ಮತ್ತು ಬಿಜೆಪಿ ಅಳವಡಿಸಿಕೊಂಡಿಲ್ಲ ಎಲ್ಲರನ್ನೂ ಒಮ್ಮತದಿಂದ ನೋಡುವ ದೇಶಕ್ಕಾಗಿ ದೇಶಭಕ್ತಿಯನ್ನು ವೃದ್ಧಿಸುವ ಮನೋ ತತ್ವಗಳನ್ನು ಬೋಧಿಸುತ್ತದೆ ಜನ ಸಹಾಯಕ ಜನಪ್ರತಿನಿಧಿಗಳನ್ನು ರೂಪಿಸುತ್ತದೆ
ನರೇಂದ್ರ ಮೋದಿ ಬಿಜೆಪಿಯ ಶಕ್ತಿಯಾಗಿದ್ದು, ಕುರುಕ್ಷೇತ್ರದಲ್ಲಿ ಕೃಷ್ಣನು ಧರ್ಮವನ್ನು ಉಳಿಸಲು ಧರ್ಮವನ್ನು ಸಂಸ್ಥಾಪಿಸಲು ಶ್ರೀ ಕೃಷ್ಣನ ಅವತಾರ ತಲೆದಂತೆ ನರೇಂದ್ರ ಮೋದಿಯವರು ಈ ಯುಗದ ಕೃಷ್ಣನ ಅವತಾರವಾಗಿ ಉದ್ಭವಿಸಿ ದೇಶಕ್ಕೆ ರಕ್ಷಾ ಕವಚವಾಗಿದ್ದಾರೆ ಮತ್ತು ಕೃಷ್ಣನ ಅವತಾರವಾಗಿದ್ದಾರೆ ಎಂದು ತಿಳಿಸಿದರು.
ಮುಂದಿನ ಲೋಕಸಭೆ ಅಧಿವೇಶನದಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡುವ ಮಸೂದೆ ಅಂಗೀಕಾರವಾಗಲಿದ್ದು ಇದುವರೆಗೂ ಕೇವಲ ಮೂರು ಮಂದಿ ಮಾತ್ರ ಲೋಕಸಭೆಯಲ್ಲಿ ಮಹಿಳಾ ಸಂಸದರು ಇದ್ದಾರೆ ಮುಂದೆ 300 ಮಂದಿ ಸಂಸದರಲ್ಲಿ 103 ಮಂದಿ ಮಹಿಳಾ ಸಂಸದರು ಲೋಕಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಮಹಿಳೆಯರಿಗೆ ಸ್ಥಾನಮಾನವನ್ನು ಒದಗಿಸುವ ಮುಖ್ಯ ಗುರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ್ದು ಎಂದು ತಿಳಿಸಿದರು.
ಪ್ರಶಿಕ್ಷಣ ವರ್ಗದ ಸಂಚಾಲಕ ಹೆಡದಾಳು ಸಂಪತ್,ಸಹ ಸಂಚಾಲಕ ಜಿಲ್ಲಾ ಕಿಸಾನ್ ಕಾರ್ಯದರ್ಶಿ ದಿನೇಶ್ ಮುಗುಳುವಳ್ಳಿ, ಮುಖಂಡರುಗಳಾದ
ದೀಪಕ್ ದೊಡ್ಡಯ್ಯ, ರವೀಂದ್ರ ಬೆಳವಾಡಿ,ಡಾ. ನರೇಂದ್ರ, ಪುಣ್ಯಪಾಲ್, ವೀಣಾ ಶೆಟ್ಟಿ, ಸೀತಾರಾಮ್ ಭರಣ್ಯ,
ಚೈತ್ರ ಶ್ರೀ ಮಾಲತೇಶ್, ರಾಜೀವ್, ಸಂಗೀತ, ರಾಜು ಮಾಣೆನಹಳ್ಳಿ,ಮನು ರಾಮ್,
ಚಂಪಾ ಜಗದೀಶ್, ಕೃಷ್ಣಮೂರ್ತಿ ,ಜ್ಯೋತಿ ಸುರೇಶ್, ರವೀಂದ್ರ ಆನಿಗನಹಳ್ಳಿ,ಅರವಿಂದ ಕೂದುವಳ್ಳಿ,ಮಹೇಶ್ ಕೆರೆ ಮಕ್ಕಿ,ನಾಗೇಶ್ ಬೂತನ ಕಾಡು, ನಾಗೇಶ್ ಬೈಗೂರು, ನಾರಾಯಣ ಆಚಾರ್ಯ, ಪ್ರಸನ್ನ ಕೆಳಗಣೆ, ಯೋಗೇಶ್, ಸಿಂಧು ಕುಮಾರ್,ನಾಗೇಶ್ ಡಿಜೆ, ಕೃಷ್ಣ ಸಿರ್ಗಾಪುರ,
ಶಶಿ ಹಂಗರವಳ್ಳಿ
ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ
ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೇರುಗಂಡಿ ಮಠದ ಪೀಠಾಧ್ಯಕ್ಷ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕವೀಶ್, ಭಾಗವಹಿಸಿದ್ದರು.
ವರದಿ…
ಮಗ…


