लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ರಾಹ ರುದ್ರೇಶ್ವರ ಚಾಮುಂಡೇಶ್ವರಿ ಅಮ್ಮನವರ ‎ಪುನರ್ ಪ್ರತಿಷ್ಠಾಪನೆ ವಾರ್ಷಿಕ ಮಹೋತ್ಸವ…

1 min read

‎ಅವಿನ್ ಟಿವಿ ಸುದ್ದಿಜಾಲ ✍️:


‎ರಾಹ ರುದ್ರೇಶ್ವರ ಚಾಮುಂಡೇಶ್ವರಿ ಅಮ್ಮನವರ

‎ಪುನರ್ ಪ್ರತಿಷ್ಠಾಪನೆ ವಾರ್ಷಿಕ ಮಹೋತ್ಸವ

‎ಆಲ್ದೂರು: ಸಮೀಪದ ತೋಳೂರು ಗುಡ್ಡ ಗ್ರಾಮದಲ್ಲಿ

‎ಎರಡು ದಿನಗಳ ಕಾಲ ನಡೆದ ಶ್ರೀ ವರಾಹ ರುದ್ರೇಶ್ವರ ಚಾಮುಂಡೇಶ್ವರಿ ಅಮ್ಮನವರ

‎ಪುನರ್ ಪ್ರತಿಷ್ಠಾಪನೆ ಮತ್ತು ದ್ವಿತೀಯ ವರ್ಷದ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು.

‎ಸೋಮವಾರ ಶೃಂಗೇರಿ ಮೂಲದ ಅರ್ಚಕರಾದ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಭಗವಾನ್ ಶಿವ ರುದ್ರೇಶ್ವರ ರವರ ಪುನರ್ ಪ್ರತಿಷ್ಠಾಪನೆ,ವಿಶೇಷ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮಹಾಮಂಗಳಾರತಿ ಅನ್ನ ಸಂತರ್ಪಣೆ ನಡೆಯಿತು.

‎ಮಂಗಳವಾರ ಅನಾಥ ಆಶ್ರಮದ ಮಕ್ಕಳಿಗೆ ವಿಶೇಷವಾಗಿ ಅನ್ನದಾನ ಸೇವೆಯನ್ನು ಏರ್ಪಡಿಸಲಾಗಿತ್ತು.

‎ವಿಗ್ರಹ ದಾನಿಗಳಾದ ಕಾಫಿ ಬೆಳೆಗಾರರು ಜ್ಯೋತಿ, ಯು ಹೆಚ್ ಹೇಮಶೇಖರ್ ಮೂಡಿಗೆರೆ, ವಿಶ್ವನಾಥ ಹಾರ್ಲ್ ಗದ್ದೆ, ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಸತ್ತಿಹಳ್ಳಿ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರುವಪ್ಪ, ಸತೀಶ್ ಆರ್ ತೋಳೂರು ಗುಡ್ಡ, ಗೌತಮ್ ಸಂಜಯ್, ಕಗ್ಗನಲ್ಲ ಕ್ಷೇತ್ರದ ಅಧ್ಯಕ್ಷ ಮಹಾಬಲ, ಇತರರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

‎ದೇವಿ ಆರಾಧಕ ಬಿಜಾರು ಶ್ರೀನಿವಾಸ್, ಬಸ್ಕಲ್ ಶ್ರೀಧರ್ ಪೂಜಾರಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ರವಿ, ನಿತಿನ್, ಸುಜನ್, ಚೇತನ್, ಜೀವನ್, ಶರಣು, ಜೀವಂತ್, ಉಪಸ್ಥಿತರಿದ್ದರು.

‎ವಾರ್ಷಿಕೋತ್ಸವ ಕಾರ್ಯಕ್ರಮದ ನೇತೃತ್ವವನ್ನು

‎ಪ್ರಧಾನ ಅರ್ಚಕ ಅಘೋರ್ ನಾಥ ಪಂಥದ ಚಂದ್ರನಾಥ ವಹಿಸಿದ್ದರು.

ಕಾರ್ಯಕ್ರಮಕ್ಕೆ ಆಲ್ದೂರು, ಮೂಡಿಗೆರೆ, ಚಿಕ್ಕಮಗಳೂರು, ಬಾಳೆಹೊನ್ನೂರು, ಮಂಗಳೂರು ಮಿಜಾರ್,ಪಡೀಲ್,ಕಾಗನಲ್ಲ, ಬಸ್ಕಲ್ ,ಹಾಸನ, ಮುಂತಾದ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಿದ್ದರು.

About Author

More Stories

Leave a Reply

Your email address will not be published. Required fields are marked *

You may have missed