ಹೊನ್ನ ಬಿತ್ತೇವು ಹೊಲಕೆಲ್ಲ ತಂಡ ಮತ್ತು ನ್ಯೂಸ್ ಕಿಂಗ್ ಸುದ್ದಿ ವಾಹಿನಿ ವತಿಯಿಂದ,ಸಾಮಾಜಿಕ ಮಾಧ್ಯಮಗಳ ಅರಿವು ಓರೆ ಕೋರೆ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕುರಿತು ಚಿಕ್ಕಮಗಳೂರಿನಲ್ಲಿ ಎರಡು ದಿನದ ಕಾರ್ಯಗಾರ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಹೊನ್ನ ಬಿತ್ತೇವು ಹೊಲಕೆಲ್ಲ ತಂಡ ಮತ್ತು ನ್ಯೂಸ್ ಕಿಂಗ್ ಸುದ್ದಿ ವಾಹಿನಿ ವತಿಯಿಂದ,ಸಾಮಾಜಿಕ ಮಾಧ್ಯಮಗಳ ಅರಿವು ಓರೆ ಕೋರೆ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕುರಿತು ಚಿಕ್ಕಮಗಳೂರಿನಲ್ಲಿ ಎರಡು ದಿನದ ಕಾರ್ಯಗಾರ.
~~~~~~~~~~
ಚಿಕ್ಕಮಗಳೂರು ಮಾ ೦೯: ಮಾಹಿತಿ ತಂತ್ರಜ್ಞಾನದ ಮಾರುಕಟ್ಟೆಯ ಯಜಮಾನಿಕೆಯ ಈ ಯುಗದಲ್ಲಿ ಈ ನೆಲದ ಜನನುಡಿಗಳು ಅವು ನಿಂತು ಬೆಳೆದ ನೆಲದಲ್ಲಿಯೇ ಪರಕಿಯಗೊಂಡು ಅನಾಥ ಬಾವ ಅನುಭವಿಸುತ್ತಿವೆ.
ಆಟದ ನಿಯಮಗಳನ್ನೇ ಹೇಳಿಕೊಡದೆ ಎಲ್ಲವನ್ನು ಎಲ್ಲರನ್ನು ಈ ಮಾಹಿತಿ ತಂತ್ರಜ್ಞಾನವು ಸ್ಪರ್ಧೆಗೆ ಇಳಿಸುವಲ್ಲಿ ತನ್ನ ಜಾಣತನವನ್ನು ಮೆರೆಯುತ್ತಿದೆ.
20 ವರ್ಷಗಳ ಮುಂದೆ ಹೋಗಿ , ಈ ಸಮಾಜವನ್ನು ಒಮ್ಮೆ ನಿಂತು ಹಿಂತಿರುಗಿ ನೋಡಿ, ಇಂದಿನ ಈ ಸಮಾಜದ ಬಹುದೊಡ್ಡ ದುಸ್ಥಿತಿಗೆ ಯಾರು ಹೊಣೆ ?ಎಂದು ಪ್ರಶ್ನೆ ಹಾಕಿದರೆ ಅದಕ್ಕೆ ಬಹುಪಾಲು ಜನ ಮಾಧ್ಯಮ ಮಾಧ್ಯಮ ಮಾಧ್ಯಮ ಸಾಮಾಜಿಕ ದೃಶ್ಯ ಮಾಧ್ಯಮವೇ ಕಾರಣ ಎಂದು ಬೆಟ್ಟು ಮಾಡಿ ನಿಖರವಾಗಿ ತೋರಿಸುವ ಪರಿಸ್ಥಿತಿ ಎದುರಾಗಬಹುದು, ಇಂಥಹ ಪರಿಸ್ಥಿತಿ ಎದುರಾಗುವ ಮುಂಚೆ ಸಾಮಾಜಿಕ ಮಾಧ್ಯಮಗಳು ಮಾಧ್ಯಮದ ಮಹತ್ವ ಮತ್ತು ಮೌಲ್ಯವನ್ನು ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ.
ಈ ಎಲ್ಲ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮಗಳ ಸಾಧಕ ಬಾಧಕಗಳನ್ನು ಕುರಿತು ಅದರ ಒಳಿತು ಕೆಡುಕುಗಳ ಚಿಂತನ ಮಂಥನವಾಗಬೇಕಿದೆ. ಅದರಲ್ಲೂ ಈ ವಿಚಾರಗಳನ್ನು ಬಹುಮುಖ್ಯವಾಗಿ ಯುವ ಸಮುದಾಯದ ಮಧ್ಯೆ ವರ್ಗಾಯಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆಗೆ ಸಂಬಂಧಪಟ್ಟಂತೆ ಸಾಂಸ್ಕೃತಿಕವಾದ ಒಂದು ಮುನ್ನೋಟವನ್ನು ಚರ್ಚಿಸಿ ನಿರ್ಧರಿಸಲು ಹೊನ್ನ ಬಿತ್ತೇವು ಹೊಲಕೆಲ್ಲ ತಂಡ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿ ವತಿಯಿಂದ ಇದೇ 2026ರ ಮಾರ್ಚ್ 14 ಮತ್ತು 15 ರಂದು ಎರಡು ದಿನಗಳ ಕಾಲ ಚಿಕ್ಕಮಗಳೂರಿನ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.
ಮೊದಲು ನೊಂದಾವಣೆ ಮಾಡಿಕೊಂಡ 70ರಿಂದ 80 ಜನರಿಗೆ ಈ ತರಬೇತಿ ಶಿಬಿರದಲ್ಲಿ ಅವಕಾಶವಿರುತ್ತದೆ, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಶಿಬಿರದಲ್ಲಿ ಭಾಗಿಯಾದವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಉಚಿತವಾಗಿದ್ದು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕಾರ್ಯಕ್ರಮದ ಆಯೋಜಕರು ಈ ಮೂಲಕ ವಿನಂತಿಸಿದ್ದಾರೆ.
ನೊಂದಾವಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಲು ವಿನಂತಿಸಿದೆ.
7619521477
9980772410
8861518868
9019697655
••••••••••••
ಡಿ. ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

