ಟೈಲರ್ ಡೇ ಕಾರ್ಯಕ್ರಮ.ಮೂಡಿಗೆರೆ..
1 min read
ಟೈಲರ್ ಡೇ ಕಾರ್ಯಕ್ರಮ.ಮೂಡಿಗೆರೆ..
*ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ತಾಲೂಕು ನಗರ ಸಮಿತಿ ವತಿಯಿಂದ ಅದ್ದೂರಿ ಟೈಲರ್ ಡೇ ಕಾರ್ಯಕ್ರಮವನ್ನು ಬಳೆಗಾರರ ಸಂಘದ ಕಾಫ಼ಿ ಭವನ







ಸಭಾಂಗಣದಲ್ಲಿ ಮಾಡಲಾಯಿತು*
ಆಧುನಿಕ ದಿನಮಾನಗಳಲ್ಲಿ ಟೈಲರ್ ವೃತ್ತಿ ಬಾಂಧವರ ಬದುಕು ಬಹಳ ಸಂಕಷ್ಟದಲ್ಲಿದೆ ಹೊಲಿಗೆಯ ಕಡೆ ಆಸಕ್ತಿ ಕಡಿಮೆಯಾಗಿದೆ ರೆಡಿಮೇಡ್ ಬಟ್ಟೆಗಳ ಆಕರ್ಷಣೆಯಿಂದ ವೃತ್ತಿ ಬದುಕಿಗೆ ಸಂಕಷ್ಟ ಎದುರಾಗಿದೆ. ಎಲ್ಲರೂ ಒಗ್ಗಟ್ಟಾಗಿ ಮುಂದುವರೆದು ವೃತ್ತಿಯನ್ನು ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಎಂ ಕೆ ಪ್ರಾಣೇಶ್ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ. ಉದ್ಘಾಟನೆಯನ್ನು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣಬಾಳೂರು ನೆರವೇರಿಸಿ ಮಾತನಾಡಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಉಪ ಸಭಾಪತಿಗಳು ಎಂ ಕೆ ಪ್ರಾಣೇಶ್ ಅವರು ವೃತ್ತಿಬಾಂಧವರಿಗೆ ಸನ್ಮಾನಿಸಿ ಮಾತನಾಡಿದರು ಈ ಕಾರ್ಯಕ್ರಮದ ಅಧ್ಯಕ್ಷತೆ ನಗರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾಶಂಕರ ವಹಿಸಿದ್ದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ, ಪೂರ್ಣೇಶ್ ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಿವಗೌಡ. ಸತೀಶ್. ಗಿರೀಶ್. ಗೋಪಾಲ ಶೆಟ್ಟಿ, ಷಣ್ಮುಖ ನಂದ.ಪ್ರಕಾಶ್. ಮಂಜುಳಾ.ಮಂಜು. ಎಂಎಸ್ ನಾಗರಾಜ್. ಸುರೇಶ್ ಉಪಸ್ಥಿತರಿದ್ದರು ಮತ್ತು ಟೈಲರ್ ವೃತ್ತಿ ಬಾಂಧವರು ಎಲ್ಲರೂ ಆಗಮಿಸಿದ್ದರು.

