ಚೆಕ್ ಕೇಸ್ ವಿಚಾರದಲ್ಲಿ ತನಗೆ ಮೋಸವಾಗಿದೆ: ಎಂ.ಪಿ.ಕುಮಾರಸ್ವಾಮಿ….
1 min read
ಚೆಕ್ ಕೇಸ್ ವಿಚಾರದಲ್ಲಿ ತನಗೆ
ಮೋಸವಾಗಿದೆ: ಎಂ.ಪಿ.ಕುಮಾರಸ್ವಾಮಿ.
ಮೂಡಿಗೆರೆ: ಚೆಕ್ ಕೇಸ್ ವಿಚಾರದಲ್ಲಿ ತನಗೆ ಮೋಸ ಮಾಡಲಾಗಿದೆ. 2018 ರಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತನ್ನ ಒಡನಾಡಿಯಾಗಿದ್ದ ಮಿತ್ರನೋರ್ವ ತನ್ನಿಂದ ಹಣ ಪಡೆಯುವ ದೃಷ್ಟಿಯಿಂದ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಆಕ್ಸಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಆ ಖಾತೆಯಲ್ಲಿ ಯಾವುದೇ ವ್ಯವಹಾರ ಮಾಡುತ್ತಿರಲಿಲ್ಲ. ತಾನು ಸಹಿ ಹಾಕಿದ್ದ 8 ಚಿಕ್ಕನ್ನು ತನಗೆ ತಿಳಿಯದೇ 2018 ರಲ್ಲಿ ಆ ವ್ಯಕ್ತಿ ಕೊಂಡೊಯ್ದಿದ್ದಾರೆ. ಬಳಿಕ ಆ ವೃಕ್ತಿಯ ಆಕೌಂಟ್ ನಿಂದ ತನಗೆ ಹಣ ಕೊಟ್ಟಂತೆ ಮಾಡಲು ಹಾಗೂ ಸಾಕ್ಷಿ ಹೊಂದಿಸಿಕೊಳ್ಳಲು ತನ್ನ ಖಾತೆಗೆ 68 ಲಕ್ಷ ರೂ ಜಮಾ ಮಾಡಿದ್ದಾರೆ. ನಂತರ ಅವರ ಬಳಿಯಿದ್ದ ನನ್ನ 8.ಚೆಕ್ಕಲ್ಲಿ ಕೆಲ ಚೆಕ್ ಬಳಸಿಕೊಂಡು ಅವರ ಸಂಬಂಧಿಕರಿಂದ ಹಣ ಡ್ರಾ ಮಾಡಿದ್ದಾರೆ.
ತನ್ನಿಂದ ಹಣ ಪಡೆಯಲು ಬಾಕಿ ಚೆಕ್ ಬಳಸಿ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆಂದು ಹೇಳಿದರು.
ಈ ವಿಚಾರ ತನಗೆ ಕೋರ್ಟ್ನಿಂದ ನೋಟೀಸು ಬರುವವರೆಗೂ ತಿಳಿದಿರಲಿಲ್ಲ. ನಂತರ ಕಾನೂನು ಹೋರಾಟ ನಡೆಸಲು ಮುಂದಾದೆ. ಇದಕ್ಕೆ ಕಾರಣರಾದ ಆ ವ್ಯಕ್ತಿಯು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರು ಬೇರೆಯವರ ವಿರುದ್ಧವೂ ಅನೇಕ ಚೆಕ್ ಕೇಸ್ ಪ್ರಕರಣ ಹಾಕಿರುವ ಬಗ್ಗೆ ಮಾಹಿತಿ ದೊರಕಿದೆ. ಮುಖ್ಯವಾಗಿ ತನ್ನ ಖಾತೆಯಿಂದ 5 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡುವಾಗ ಬ್ಯಾಂಕ್ ನವರು ತನ್ನ ಒಪ್ಪಿಗೆ ಪಡೆಯದೇ ನೀಡಿದ್ದಾರೆ. ಅಲ್ಲದೇ ತನ್ನ ಖಾತೆಯಿಂದ ಹಣ ಪಡೆದವರು ಅವರ ಸಂಬಂಧಿಕರೆಂದು ತಿಳಿದಿರಲಿಲ್ಲ. ಈ ಎಲ್ಲದರ ಬಗ್ಗೆ ಪೊಲೀಸ್ ತನಿಖೆ ನಡೆಸಲು ದೂರು ನೀಡಿದ್ದೇನೆ. ಜತೆಗೆ ತನ್ನ ಖಾತೆಯಿಂದ ಹಣ ಪಡೆದವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆಂದು ಹೇಳಿದರು.

