लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮ ವಿಷ್ಣು ದಾದಾ ಕಾಲೇಜಿನಲ್ಲಿ ಓದುತ್ತಿದ್ದ ಸಮಯ.. ಗೆಳೆಯರೊಂದಿಗೆ ಬಸವನಗುಡಿಯ, ‘ವಿದ್ಯಾರ್ಥಿ ಭವನಕ್ಕೆ’ ಹೋಗಿ, ಮಸಾಲ ದೋಸೆ ತಿನ್ನೋದು ಅವರ ವಾಡಿಕೆಯಾಗಿತ್ತು….

1 min read

ನಮ್ಮ ವಿಷ್ಣು ದಾದಾ ಕಾಲೇಜಿನಲ್ಲಿ ಓದುತ್ತಿದ್ದ ಸಮಯ.. ಗೆಳೆಯರೊಂದಿಗೆ ಬಸವನಗುಡಿಯ, ‘ವಿದ್ಯಾರ್ಥಿ ಭವನಕ್ಕೆ’ ಹೋಗಿ, ಮಸಾಲ ದೋಸೆ ತಿನ್ನೋದು ಅವರ ವಾಡಿಕೆಯಾಗಿತ್ತು..
ಹಾಗೆ ದೋಸೆ ತಿಂದು ವಾಪಸ್ಸು ನಡೆದು ಬರಬೇಕಾದರೆ ಅಲ್ಲಿ ಒಂದು ಗೋಡೆಯ ಮೇಲೆ ಭಾರತೀಯಮ್ಮ ಹಾಗೂ ಗಂಗಾಧರ್ ಸರ್ ನಟಿಸಿದ ಒಂದು ಚಿತ್ರದ ಪೋಸ್ಟರ್ ಅಂಟಿಸಿದ್ದರು.. ಗೆಳೆಯರೆಲ್ಲ ಹಾಗೆ ನಡೆದು ಮುಂದೆ ಹೋದರೂ ಆದರೆ ನಮ್ಮ ದಾದಾ ಅಲ್ಲೇ ನಿಂತು ಆ ಪೋಸ್ಟರ್ ಅನ್ನು ನೋಡುತ್ತಿದ್ದರು.. ಸ್ನೇಹಿತರು ಮತ್ತೆ ಅವರ ನೆಚ್ಚಿನ ಸಂಪತ್ ಕುಮಾರ್ ಅವರ ಬಳಿ ಬಂದು “ಬಾರೋ ಕುಮಾರಾ, ಹೋಗೋಣ.. ಯಾಕೆ ಇಲ್ಲೇ ನಿಂತಿದ್ಯಾ??” ಅಂತ ಕೇಳಿದಾಗ, ನಮ್ಮ ವಿಷ್ಣು ದಾದಾ ಭಾರತೀಯಮ್ಮನ ಪೋಸ್ಟರ್ ನೋಡಿ ಹೇಳಿದ್ದು “ನಾನು ಮದುವೆಯಾದರೆ ಈ ತರಹ ಹುಡುಗಿಯನ್ನೇ ಮದುವೆ ಆಗ್ತೀನಿ ಇಲ್ಲ ಇವರನ್ನೇ ಮದುವೆ ಆಗ್ತೀನಿ!!” ಆ ಮುಗ್ಧ ಸಂಪತ್ ಕುಮಾರಣ್ಣ ಕೂಗು 10 ದೇವತೆಗಳಿಗೆ ಕೇಳಿಸಿತು. ಹಾಗಾಗಿ 1975 ಇದೇ ಫೆಬ್ರವರಿ 27ರಂದು ವಿಷ್ಣು ಭಾರತೀಯ ವಿವಾಹ ಅತ್ಯಂತ ವಿಜ್ರಂಬಣೆಯಿಂದ, ಆಕರ್ಷಣೆಯಿಂದ ಕೆಲವು ಕುತೂಹಲ ಹಾಗೂ ಕೆಲವು ಗಂಭೀರ ಘಟನೆಗಳಿಂದ ನಡೆಯಿತು..
ವಿಷ್ಣು ಸರ್ ದೈಹಿಕವಾಗಿ ನಮ್ಮೊಂದಿಗೆ ಇರುವ ವರೆಗೂ ಕೂಡ ಈ ಫೆಬ್ರವರಿ 27 ಅಂದರೆ ಅವರ ವಿವಾಹ ವಾರ್ಷಿಕೋತ್ಸವದಂದು ಅವರ ಕುಟುಂಬಸ್ಥರು, ಸ್ನೇಹಿತರು ಅವರ ಜೊತೆ ಇರುವ ನಿರ್ಮಾಪಕರು, ನಿರ್ದೇಶಕರು, ಕಲಾವಿದರನ್ನ ವಾಹನ ಮಾಡಿಕೊಂಡು ಎಲ್ಲರನ್ನು ತಿರುಪತಿಗೆ ಕರೆದುಕೊಂಡು ಹೋಗಿ ದರ್ಶನ ಮಾಡಿಸಿ ವೆಡ್ಡಿಂಗ್ ಆನಿವರ್ಸರಿ ಯನ್ನು ಆಚರಿಸುವುದು ಪದ್ಧತಿಯಾಗಿತ್ತು..

ರಾಮನು ಇಟ್ಟ ಬಾಣದ ಗುರಿ ಎಂದೂ ತಪ್ಪಲ್ಲ.. ಈ ರಾಮಾಚಾರಿ ಇಟ್ಟ ಹೆಜ್ಜೆ, ತೊಟ್ಟ ನಿರ್ಧಾರವನ್ನು ಎಂದು ಮುಗಿಸದೆ ಬಿಡೋಲ್ಲ.. 51ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐 ವಿಷ್ಣು ಸರ್ ಹಾಗೂ ಭಾರತಿ ಅಮ್ಮನಿಗೆ

❤️❤️. ರವಿಕುಮಾರ್. ❤️❤️🌹🌹🌹. ಬೆಂಗಳೂರು.

About Author

Leave a Reply

Your email address will not be published. Required fields are marked *

You may have missed