….ನಿಧನ…
1 min read
ಅವಿನ್ ಟಿವಿ ಸುದ್ದಿಜಾಲ ✒️:
ಡಾ. ನಚಿಕೇತ ಇನ್ನಿಲ್ಲ…
ಅದೆಷ್ಟೊ ಹೊಂಗನಸುಗಳನ್ನು ಕಟ್ಟಿಕೊಂಡು ಮಗ ವೈದ್ಯನಾಗಲೆಬೇಕೆಂದು ಹಠ ಬಿದ್ದವರಂತೆ ಓದಿಸುತ್ತಿದ್ದರು, ಮುಂದೆ ಎಲ್ಲವೂ ಆಗಬೇಕಾಗಿದ್ದ ಈ ಮುದ್ದಿನ ಮಗ ಇದ್ದಕ್ಕಿದ್ದಂತೆ ಇಲ್ಲವಾಗಿ ಬಿಟ್ಟರೆ ಅಂಥಹ ಸಾವನ್ನು ಒಪ್ಪಿಕೊಳ್ಳುವುದಾದರೆ ಹೇಗೆ ?
ಮಗನನ್ನು ಕಳೆದುಕೊಂಡ ಅ ತಾಯಿಯ ಸಂಕಟವನ್ನು ನೋಡಿ, ಆಕೆಯ ಚಿಕ್ಕಪ್ಪ ತನ್ನ ಅಣ್ಣನ ಮಗಳಿಗೆ ಸಾಂತ್ವನ ಮಾಡಿದ್ದು ಹೀಗೆ,
*ಇನ್ನು ಮುಂದೆ ನಿನಗೆ ನಾನು ಮಗನಾಗ್ತೀನಿ ಮಗಳೇ ಎಂದು….*
ವಿಜಯ ಕರ್ನಾಟಕ ದಿನಪತ್ರಿಕೆಯ ಪತ್ರಕರ್ತರಾದ ಅಜ್ಜಂಪುರ ವೆಂಕಟೇಶ್ ಅವರ ಅಣ್ಣನ ಮಗಳ ಮಗ ಡಾ. ನಚಿಕೇತನನ ದುರ್ಘಟನೆಗೆ ಸಂಬಂಧಪಟ್ಟಂತೆ ಅತ್ಯಂತ ನೋವಿನಿಂದ ಹಂಚಿಕೊಂಡಿರುವ ಅಜ್ಜಂಪುರ ವೆಂಕಟೇಶ್ ಅವರ ಇಂದಿನ ಈ ಕೆಳಕಂಡ ಬರಹವನ್ನು ನ್ಯೂ ಕಿಂಗ್ ಸಂಗಾತಿಗಳೊಂದಿಗೆ ಹಂಚಿಕೊಳ್ಳಬೇಕು ಎನಿಸಿತು 👇
••••••••••••••••
ಈತ ನನ್ನ ಮೊಮ್ಮಗ (ಅಣ್ಣನ ಮಗಳು ಶೋಭಾ, ಶಿಕ್ಷಕ ಗರ್ಜೆ ರವಿ ಮಗ)
ಡಾ. ನಚಿಕೇತ
ಈತನನ್ನು ಎಂಬಿಬಿಎಸ್ ಮಾಡಬೇಕೆಂದು
ಆತನ ತಂದೆ ತಾಯಿ ಇನ್ನಿಲ್ಲದಂತೆ ಶ್ರಮವಹಿಸಿದರು
ಮಗನನ್ನು ಡಾಕ್ಟರ್ ಮಾಡಲೇಬೇಕೆಂಬ ಹಠಕ್ಕೆ ಬಿದ್ದ ಇವರು ಕೊನೆಗೆ ಬಿಎಎಂಎಸ್
ಪದವಿ ಕೊಡಿಸಿದರು.
ಓದು ಮುಗಿದು ಇನ್ನೆರಡು ತಿಂಗಳಲ್ಲಿ ಪದವಿ ಪತ್ರ ಸಿಗುವುದರಲ್ಲಿತ್ತು
ಅಪ್ಪ ಅಮ್ಮ ಪ್ರೀತಿಯಿಂದ ಕೊಡಿಸಿದ ಬುಲೆಟ್ ಬೈಕಿನಲ್ಲಿ ಊಟ ಮಾಡಿ ರೂಮಿಗೆ ಬರುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನೆಲಕಚ್ಚಿದ.
ಇಂತಹ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಅಜ್ಜ, ನನಗೆ ಆಸ್ಪತ್ರೆ ಕಟ್ಟಿಸಿಕೊಡಿ
ಅಜ್ಜಂಪುರದಲ್ಲಿ ಸರ್ವಿಸ್ ಮಾಡ್ತಿನಿ
ಅಂತ ಹೇಳಿದ್ದ.
ಈತನ ಸಾವಿನ ಸುದ್ದಿಯನ್ನು ಮಗಳು ಮಧ್ಯರಾತ್ರಿ ಅಂಜಿಕೆಯಿಂದ ಹೇಳಿದಳು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಕೈಗೆ ಬಂದ ಮಗ ಕೊನೆಗಾಲದಲ್ಲಿ ಮಗಳ ಜೊತೆ ಇರಬೇಕೆಂಬ ನಿರೀಕ್ಷೆಯನ್ನು ಸುಳ್ಳು ಮಾಡಿದ.
ತಂದೆ ಇಲ್ಲದ ಮಗಳಿಗೆ ಪ್ರೀತಿಯ ಅಯ್ಯ ನಾನಾಗಿದ್ದೆ
ಅವಳ ಗೋಳು ಹೇಳತೀರದು
ಅವಳನ್ನು ತಬ್ಬಿಕೊಂಡು ಹೇಳಿದೆ
*”ನಿನಗೆ ನಾನು ಮಗನಾಗ್ತಿನಿ”*
•••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

