ಕೇರಳ ಚುನಾವಣೆ: ಉಸ್ತುವಾರಿಯಾಗಿ ಮೂಡಿಗೆರೆಯ ಸಂದೀಪ್ ಬೆಟ್ಟಗೆರೆ ನೇಮಕ….
1 min read
ಕೇರಳ ಚುನಾವಣೆ: ಉಸ್ತುವಾರಿಯಾಗಿ ಮೂಡಿಗೆರೆಯ ಸಂದೀಪ್ ಬೆಟ್ಟಗೆರೆ ನೇಮಕ
ಚಿಕ್ಕಮಗಳೂರು:- ಕೇರಳ ರಾಜ್ಯ ಚುನಾವಣೆಯ ಉಸ್ತುವಾರಿಯಾಗಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಅವರನ್ನು ನೇಮಕ ಮಾಡಲಾಗಿದ್ದು, ಈ ನೇಮಕವು ಕಾಂಗ್ರೆಸ್ ಪಕ್ಷದ ವಿಶ್ವಾಸ, |ನಾಯಕತ್ವದ ಸಾಮರ್ಥ ಮತ್ತು ಸಂಘಟನೆಗೆ ಸಲ್ಲಿಸಿದ್ದ ಸೇವೆಗೆ ದೊರೆತ ಗೌರವವಾಗಿದೆ.
ಕೇರಳ ರಾಜ್ಯವು ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯವಾಗಿದ್ದು, ಅಲ್ಲಿ ನಡೆಯುವ ಚುನಾವಣೆಗಳು ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಭಾವ ಬೀರುತ್ತವೆ. ಉಸ್ತುವಾರಿಯಾಗಿ ನೇಮಕಗೊಂಡಿರುವ ಬಿ.ಎಂ.ಸಂದೀಪ್ ಅವರು ಈಗಾಗಲೇ 20 ರಾಜ್ಯಗಳಲ್ಲಿ ಪಕ್ಷದ ವಿವಿಧ ಸಂಘಟನಾತ್ಮಕ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಮುಂದಿನ ದಿನಗಳಲ್ಲಿ ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಗಮನಿಸಿ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

