……ನಿಧನ…..
1 min read
ಶ್ರೀ ಜಿ. ಶೇಷಾದ್ರಿ ( ದಿ ಅನಂತಸುಬ್ಬರಾವ್ ರ ಮಗ) ರವರು ನೆನ್ನೆ ದಿನಾಂಕ: 10-02-2026 ರಂದು ಬೆಂಗಳೂರಿನಲ್ಲಿ ದೈವಾಧೀನರಾಗಿರುತ್ತಾರೆ. ಶೇಷಾದ್ರಿಯವರು ಪತ್ರ ಬರಹಗಾರರಾಗಿದ್ದರು. ಲಯನ್ಸ್, ಬ್ರಾಹ್ಮಣ ಸಭಾ ಮೊದಲಾದ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿರುವ ಎ.ಜೆ. ಕಾಂಪ್ಲೆಕ್ಸ್ ನ ಮಾಲೀಕರಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿರುತ್ತಾರೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ.

