…..ನಿಧನ….
1 min read
*ಅಕಾಲಿಕ ಮರಣಕ್ಕಿಡಾದ ದಿಣ್ಣೇಕೆರೆಯ ಡಿ. ಡಿ.ಸುರೇಶ್*
ಅವಿನ್ ಟಿವಿ ಸುದ್ದಿಜಾಲ ✒️..
ಜ 09.ಅಲ್ದೂರು: ಸಮೀಪದ ದಿಣ್ಣೆಕೆರೆ ಗ್ರಾಮದ ಕಾಫಿ ಬೆಳೆಗಾರ ಡಿ. ಡಿ. ಸುರೇಶ್ ಅವರು ನೆನ್ನೆ ರಾತ್ರಿ 9:00 ಘಂಟೆ ಸಮಯದಲ್ಲಿ ಹಾಸನದ ಸ್ಪಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
46ರ ವಯೋಮಾನದ ಮೃತ ಸುರೇಶ್ ಅವರು ಸ್ನೇಹಜೀವಿಯಾಗಿ, ಮುಗುಳ್ನಗೆಯ ಗೆಳೆಯನಾಗಿ ಅನೇಕರಿಗೆ ಹತ್ತಿರವಾಗಿದ್ದರು, ಬದುಕು ಇನ್ನೂ ಸನ್ನದ್ಧಗೊಳ್ಳಬೇಕಾಗಿತ್ತು, ತನ್ನವರ ಜೊತೆ ತಾನು ಬಾಳಿ ಬದುಕುವ ದಿನಗಳು ಬಹಳಷ್ಟು ಇದ್ದವು, ಬದುಕಿನ ಅರ್ಧ ದಾರಿಯಲ್ಲಿಯೇ ಇಹ ಬದುಕಿಗೆ ವಿದಾಯ ಹೇಳಿ ಹೊರಟು ಹೋಗಿರುವ ಮೃತ ಸುರೇಶ್ ಅವರು ತಾಯಿ ಕಮಲಮ್ಮ,ಪತ್ನಿ ಕಾವ್ಯ, ಎರಡು ಗಂಡು ಮಕ್ಕಳು, ಸಹೋದರ ಸಹೋದರಿಯರು ಸೇರಿದಂತೆ, ಅಪಾರವಾದ ಸ್ನೇಹ ಬಳಗವನ್ನು ಬಿಟ್ಟು ಅಕಾಲಿಕವಾಗಿ ಅಗಲಿದ್ದಾರೆ. ಅನೇಕ ವರ್ಷಗಳಿಂದ ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದರು.
ಇಂದು ಸಂಜೆ 4:00 ಘಂಟೆಗೆ ಸ್ವಗ್ರಾಮ ದಿಣ್ಣೇಕೆರೆಯಲ್ಲಿ ಮೃತರ ಅಂತ್ಯಸಂಸ್ಕಾರಗಳು ನಡೆಯುತ್ತವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಕಾಲಿಕವಾಗಿ ಅಗಲಿದ ಗೆಳೆಯ ಸುರೇಶ್ ಅವರಿಗೆ ಅವರ ಸ್ನೇಹ ಬಳಗ ಅಪಾರವಾಗಿ ಕಂಬನಿ ಮಿಡಿದು ಸಂತಾಪ ಸೂಚಿಸಿದೆ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ.. ✒️
ಚಿಕ್ಕಮಗಳೂರು

