“ಭಾರೀ ಮಳೆಗೆ ಬಿದ್ದ ಮನೆ : ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಮನೆಯವರು; ಸೂಕ್ತ ಪರಿಹಾರಕ್ಕೆ ಆಗ್ರಹ.”
1 min read
ಚಿಕ್ಕಮಗಳೂರು (Chikkamagaluru )ಜಿಲ್ಲೆಯ,ಮೂಡಿಗೆರೆ (Mudigere )ತಾಲ್ಲೂಕಿನ,ಕುಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ,ಕಾರ್ಲಗದ್ದೆಯ ನಾಗರಾಜ್ ಎಂಬುವವರ ಮನೆ ದಿನಾಂಕ 23/07/2024ರ ಮಂಗಳವಾರದಂದು ಬೆಳಗಿನ ಜಾವ ಸುಮಾರು 1:00ಗಂಟೆ ಸಮಯದಲ್ಲಿ ಬಿದ್ದಿದ್ದು,ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಾನಿಗೊಳಗಾದ ಮನೆಯ ಮುಂದೆ ಮನೆಯೊಡತಿ ಯಶೋಧ.
ಈ ಘಟನೆಯ ವೇಳೆ ನಾಗರಾಜ್ ಮತ್ತು ಅವರ ಪತ್ನಿ ಯಶೋಧ ಮಗಳು ಹರಿಣಾಕ್ಷಿ ಮನೆಯ ಒಳಗೆ ಇದ್ದರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಆಗಮಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
✍️ಬರಹ ಕೃಪೆ.✍️
ಸಂಜೀವ್ ಕುಂದೂರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.