day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮನಸ್ಸೆಂಬುದು Re chargeable battery ಇದ್ದಂತೆ. …….. – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಮನಸ್ಸೆಂಬುದು Re chargeable battery ಇದ್ದಂತೆ. ……..

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮನಸ್ಸೆಂಬುದು Re chargeable battery ಇದ್ದಂತೆ. ……..

Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವನವೇ ಬೇಸರವಾಗುತ್ತದೆ.
ಅದನ್ನು ಮತ್ತೆ ಮತ್ತೆ Charge ಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ……

ಎಷ್ಟೋ ಜನರಿಗೆ ಬದುಕಿನ ಅನಿವಾರ್ಯತೆಯಿಂದಾಗಿ ಅಥವಾ ಆಕಸ್ಮಿಕಗಳಿಂದಾಗಿ ಅಥವಾ ದುರಾದೃಷ್ಟದಿಂದಾಗಿ ಜೀವನ ಪ್ರಪಾತಕ್ಕೆ ಕುಸಿಯುತ್ತದೆ. ಕೆಲವೊಮ್ಮೆ ನಿಧಾನವಾಗಿ ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಸಂಭವಿಸುತ್ತದೆ…….

ಒಮ್ಮೊಮ್ಮೆ ಅದರ ತೀವ್ರತೆ ಎಷ್ಟಿರುತ್ತದೆ ಎಂದರೆ ನಾಳೆ ನನಗೆ ಬದುಕಿನ ಕೊನೆ ದಿನವಾಗಿರುತ್ತದೆ ಎಂದೇ ಭಾಸವಾಗುತ್ತದೆ…….

ದೇವರೋ – ರಕ್ತ ಸಂಬಂಧಿಗಳೋ – ಆತ್ಮೀಯರೋ ಅಥವಾ ಇನ್ಯಾರೋ ಬಂದು ನಮ್ಮನ್ನು ಕಾಪಾಡಬಹುದು ಎಂಬ ನಿರೀಕ್ಷೆ ಹುಸಿಯಾದಾಗ ನಮ್ಮ ಮನಸ್ಸಿನ ಬ್ಯಾಟರಿ All most dead level ಗೆ ಬಂದಿರುತ್ತದೆ……

ಇಂತಹ ಕಠಿಣ ಸಂದರ್ಭದಲ್ಲಿಯೇ ನಾವು ಯಾರಿಗೂ ಕಾಯದೆ ಆ ಸಂಕಷ್ಟದಿಂದ ಹೊರಬರುವವರೆಗೂ ಪ್ರತಿ ರಾತ್ರಿ ಮಲಗುವಾಗ ಮತ್ತು ಪ್ರತಿದಿನ ಬೆಳಗ್ಗೆ ಏಳುವಾಗ ನಮ್ಮೊಳಗಿನ ಆತ್ಮಶಕ್ತಿಯಿಂದಲೇ ಮನಸ್ಸೆಂಬ ಬ್ಯಾಟರಿಯನ್ನು ಸ್ವತಃ Charge ಮಾಡಿಕೊಳ್ಳಬೇಕು.
ಇಲ್ಲದಿದ್ದರೆ ನಮ್ಮ ಅವಸಾನ ಬಹುತೇಕ ನಿಶ್ಚಿತವಾಗುತ್ತದೆ…..

ಅದರಲ್ಲೂ ಭಾರತೀಯ ಮಧ್ಯಮ ವರ್ಗದವರ ಜೀವನದಲ್ಲಿ ಇದು ಒಂದಲ್ಲ ಒಂದು ಸಮಯದಲ್ಲಿ ಎದುರಾಗತ್ತಲೇ ಇರುತ್ತದೆ. ಅವರ ಮನಸ್ಸಿನ ಬ್ಯಾಟರಿಯ ಏರಿಳಿತ ತುಂಬಾ ಇರುತ್ತದೆ…..

ಮನಸ್ಸು ಕೂಡ ಸದಾ ದ್ವಂದ್ವ ಮತ್ತು ಚಂಚಲತೆಯಿಂದಲೇ ಕೂಡಿರುತ್ತದೆ.
ವಿದ್ಯಾಭ್ಯಾಸದ ಸಮಯದಲ್ಲಿ ಒಂದು ಮನಸ್ಸು ಓದುವ ಇನ್ನೊಂದು ಮನಸ್ಸು ಆಟವಾಡಲು ಪ್ರೇರೇಪಿಸುತ್ತದೆ. ಯೌವನದಲ್ಲಿ ಒಂದು ಪ್ರೀತಿಸುವ ಇನ್ನೊಂದು ದ್ವೇಷಿಸುವ ಒತ್ತಡ ಹೇರುತ್ತದೆ…..

ಕೆಲವೊಮ್ಮೆ ನಮಗೆ ಅನ್ಯಾಯ ಅಥವಾ ವಂಚನೆ ಅಥವಾ ನೋವಾದಾಗ ಉದ್ವೇಗಕ್ಕೆ ಒಳಗಾಗುವ ನಾವು ಅದಕ್ಕೆ ಕಾರಣವಾದವರನ್ನು ಕೊಲ್ಲಲು ಒಂದು ಮನಸ್ಸು ಸೂಚಿಸುತ್ತದೆ. ಅದೇ ಸಂಧರ್ಭದಲ್ಲಿ ನಮ್ಮೊಳಗೇ ಅಡಗಿರುವ ಇನ್ನೊಂದು ಮನಸ್ಸು, ಛೆ , ಬೇಡ ಕೊಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ಬದಲಾಗಿ ಇರಬಹುದಾದ ಇತರ ಪರ್ಯಾಯಗಳನ್ನು ಸೂಚಿಸುತ್ತದೆ……

ಇಂತಹ ಪರಿಸ್ಥಿತಿಯಲ್ಲಿ ನಾವು ಕೈಗೊಳ್ಳುವ ನಿರ್ಧಾರ ಅಥವಾ ಯಾವ ಮನಸ್ಸಿನ ಮಾತನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂಬುದು ಬಹುತೇಕ ನಮ್ಮ ಭವಿಷ್ಯವನ್ನು ಮತ್ತು ಜೀವನದ ವಿಧಾನವನ್ನು ನಿರ್ಧರಿಸುತ್ತದೆ….

ನಮ್ಮ ಮನಸ್ಸೇ ನಮಗೆ ಗುರು,
ನಮ್ಮ ಮನಸ್ಸೇ ನಮಗೆ ಮಿತ್ರ,
ನಮ್ಮ ಮನಸ್ಸೇ ನಮಗೆ ಶತ್ರು,
ನಮ್ಮ ಮನಸ್ಸೇ ನಮಗೆ ಮಾರ್ಗದರ್ಶಕ,
ಅದರ ಆಯ್ಕೆಯ ಅವಕಾಶವೂ ನಮಗಿರುತ್ತದೆ. ಯಾವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅಪ್ಪಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನಶೈಲಿ ನಿರ್ಧಾರವಾಗುತ್ತದೆ……

ಅರಿವೆಂಬ ಜ್ಞಾನದ ಮತ್ತು ಅಂತರಾತ್ಮದ ವಿದ್ಯುತ್ತಿನಿಂದ ನಮ್ಮ ಮನಸ್ಸೆಂಬ Re chargeable battery ಯನ್ನು ಸದಾ ಚಾರ್ಜ್ ಮಾಡಿಕೊಳ್ಳುತ್ತಾ ನೂರು ವರ್ಷಗಳ ವಾರಂಟಿ ಮತ್ತು ಗ್ಯಾರಂಟಿ ಮುಗಿಯುವವರೆಗೂ ಉತ್ತಮ ರೀತಿಯಲ್ಲಿ ಕಾಪಾಡೋಣ…….

ಮನಸ್ಸೆಂಬುದು ಅಕ್ಷಯ ಪಾತ್ರೆ
ನನ್ನೊಳಗು, ನಿನ್ನೊಳಗು, ಎಲ್ಲರೊಳಗೂ,….

ಏನಿದೆಯೆಂದು ಕೇಳದಿರು, ಏನಿಲ್ಲ, ಅದರ
ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ,…..

ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು,
ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ,
ಕೋಪ ದ್ವೇಷ ಅಸೂಯೆಗಳು ತುಂಬಿವೆ,…..

ಅದ್ಭುತ ಆಶ್ಚರ್ಯವೆಂದರೆ,
ಅದರ ಆಯ್ಕೆಗಳೂ ನಿನ್ನವೇ,
ಯಾರಿಗುಂಟು ಯಾರಿಗಿಲ್ಲ,…

ಸಾವನ್ನು ಸಂಭ್ರಮಿಸುವ ಸ್ವಾತಂತ್ರ್ಯವೂ ನಿನ್ನದೇ,
ಬದುಕನ್ನು ದ್ವೇಷಿಸುವ ಸ್ವಾತಂತ್ರ್ಯವೂ ನಿನ್ನದೇ,….

ಕೊರಗೇಕೆ ಓ ಮನುಜ
ನೀ ಅಲ್ಪನಲ್ಲ,
ಈ ಸೃಷ್ಟಿಯೂ ನಿನ್ನ ಮನಸ್ಸಿಗಿಂತ ದೊಡ್ಡದಲ್ಲ,
ಸೃಷ್ಟಿಯಾಚೆಗೂ ವಿಸ್ತರಿಸಬಲ್ಲದು ನಿನ್ನೀ ಮನಸು,…..

ನೀನೇನು ಸಾಮಾನ್ಯನಲ್ಲ ಅಸಾಮಾನ್ಯ,
ಹೃದಯ ಚಿಕ್ಕದೇ ಇರಬಹುದು,
ಮನಸ್ಸಿನ ಅಗಾಧತೆ ನಿನಗೇ ಅರಿವಿಲ್ಲ,……

ಹಾಡಬಲ್ಲೇ, ಬರೆಯಬಲ್ಲೇ, ಓದಬಲ್ಲೇ, ಓಡಬಲ್ಲೇ, ಚಿತ್ರಿಸಬಲ್ಲೇ,
ನೆಗೆಯಬಲ್ಲೇ, ಈಜಬಲ್ಲೇ, ಹಾರಾಡಬಲ್ಲೇ,
ಇನ್ನೇಕೆ ತಡ, ಕಿತ್ತೊಗೆ ನಿನ್ನ ನಿರಾಸೆ,…..

ಈ ಕ್ಷಣದಿಂದ ಈ ಮನಸ್ಸು ನಿನ್ನದೇ,
ಅದಕ್ಕೆ ನೀನೇ ಅಧಿಪತಿ,….

ಎದ್ದು ಕುಳಿತುಕೋ ನಿನ್ನ ಮನದ ಸಿಂಹಾಸನದ ಮೇಲೆ,
ಆಳು ನಿನ್ನ ಮನಸ್ಸಿನ ಸಾಮ್ರಾಜ್ಯವನ್ನು,
ನಿನಗಿಷ್ಟಬಂದಂತೆ,….

ಈಗ ನೀನು ರಕ್ತ ಮೂಳೆ ಮಾಂಸಗಳ ಮುದ್ದೆಯಲ್ಲ,
ನೀನು ನಿನ್ನ ವಿಶಾಲ ಮನಸ್ಸಿನ ಚಕ್ರವರ್ತಿ,….

ಎಲ್ಲವೂ ಶರಣಾಗಿದೆ ನಿನ್ನ ಕಾಲ ಬಳಿ,
ಆತ್ಮವಿಶ್ವಾಸದ ಮುಂದೆ ಸೃಷ್ಟಿಯೂ ನಿನ್ನ ಮುಷ್ಟಿಯಲ್ಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……..

About Author

Leave a Reply

Your email address will not be published. Required fields are marked *