ಮೂಡಿಗೆರೆ ತಾಲೂಕಿನ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಸುಗ್ರಾಮ ಮತ್ತು ವಿಕಸನ ಸಂಸ್ಥೆ ತರೀಕೆರೆ (ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ)ದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
1 min read
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ದಿ:11.3.2022 ರಂದು ಮೂಡಿಗೆರೆ ತಾಲೂಕಿನ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಸುಗ್ರಾಮ ಮತ್ತು ವಿಕಸನ ಸಂಸ್ಥೆ ತರೀಕೆರೆ (ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ) ದ ವತಿಯಿಂದ *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮವನ್ನು ಅತಿತಿಗಳಾದ, ಮಾಜಿ ಮುಖ್ಯಮಂತ್ರಿಗಳಾದ ಶ್ರೀಮತಿ ಮೋಟಮ್ಮರವರು ಹಾಗೂ ಶ್ರೀಮತಿ ಸೀತಮ್ಮ ಸಮಾಜ ಕಲ್ಯಾಣ ಇಲಾಖೆ,ಶ್ರೀಮತಿ ಕಮಲಾಕ್ಷಮ್ಮ ಸಂಚಿ ಹೊನ್ನಮ್ಮ ಸಾಂತ್ವನ ಕೇಂದ್ರ ಮೂಡಿಗೆರೆ,ಗಂಗಮ್ಮ ಜಿ ಗೌರವಾದ್ಯಕ್ಷರು ಸುಗ್ರಾಮ ಮೂಡಿಗೆರೆ, ನಿರೂಪಕಿ ವಿಜಯಲಕ್ಷ್ಮಿ ಮೂಡಿಗೆರೆ,ವರ್ಗಿಸ್ ಕ್ಲೀಟಸ್ ವಿಕಸನ ಸಂಸ್ಥೆ ಅದ್ಯಕ್ಷರು,ಶ್ರೀಮತಿ ಸುಧಾ ಜಿಲ್ಲಾ ಅಧ್ಯಕ್ಷರು ಸುಗ್ರಾಮ, ಶ್ರೀಮತಿ ದಿಲ್ ದಾರ್ ಬೇಗಂ ಗೌರವ ಉಪಾಧ್ಯಕ್ಷರು ಸುಗ್ರಾಮ ಮೂಡಿಗೆರೆ, ಶ್ರೀಮತಿಸರಿತಾ ಉಪಾಧ್ಯಕ್ಷರು ಸುಗ್ರಾಮ ಮೂಡಿಗೆರೆ,ಶ್ರೀಯುತ ನವೀನ್ ಕುಮಾರ್ ಸಯೊಂಜಕರು ಸುಗ್ರಾಮ ಮೂಡಿಗೆರೆ ,ಶ್ರೀಮತಿ ರೂಪ ಸಂಯೋಜಕರು ಕಡೂರು , ಶ್ರೀಮತಿ ಶಾಲಿನಿ ಸಯೊಂಜಕರು ಭದ್ರಾವತಿ , ಶ್ರೀಮತಿ ಶಭಾನ ಬೇಗಂ ಸಂಯೋಜಕರು ಶಿಕಾರಿಪುರ,ಆಶಾ,ಶ್ರೀಮತಿ ಡೀನಾ ರೊಡ್ರಿಗ್ರಾಸ್ ಬಣಕಲ್,ಶ್ರೀಮತಿ ಸಫಿಯ ಹಳೆ ಮೂಡಿಗೆರೆ ಇವರುಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ಕಾರ್ಯಕ್ರಮದ ಅದ್ಯಕ್ಷರ ನುಡಿಗಳನ್ನು ಮೋಟಮ್ಮರವರು ಮಹಿಳಾ ದಿನಾಚರಣೆಯ ಕುರಿತು ಉತ್ತಮವಾಗಿ ನುಡಿದರು , ಎಲ್ಲಾ ಗಣ್ಯರು ಅತಿತಿ ಭಾಷಣದಲ್ಲಿ ಮಹಿಳೆಯರ ಸಾಧನೆ,1975 ರ ಈ ದಿನವನ್ನು ವಿಶ್ವ ಸಂಸ್ಥೆಯು ವಿಶ್ವ ಮಹಿಳಾ ದಿನ ವಾಗಿ ಆಚರಣೆ ಮಾಡುತ್ತಿರುವ ಮಾಹಿತಿ ಹಾಗೂ ಮಹಿಳೆಯ ಶಕ್ತಿ ಯುಕ್ತಿ ಗಳ ಬಗ್ಗೆ ಮಾತನಾಡಿದರು ನಂತರ ಆಶಾ ಕ್ಯಾಂಟೀನ್ ಮಾಲಿಕರು,ಶ್ರೀಮತಿ ಡೀನಾ ರೊಡ್ರಿಗ್ರಾಸ್ ಬಣಕಲ್,ಶ್ರೀಮತಿ ಸಫಿಯ ಹಳೆ ಮೂಡಿಗೆರೆ, ಕುಮಾರಿ ಎಮ್.ಬಿ ವಿಜಯಲಕ್ಷ್ಮಿ ಮೂಡಿಗೆರೆ ,ಶ್ರೀಯುತ ಸತೀಶ್ ಇಂಚರ ಒಕ್ಕೂಟ ಮೂಡಿಗೆರೆ ಈ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು..ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿದರೀತಿಯ ಆಟೋಟ ಸ್ಪರ್ದೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು ..ಕಾರ್ಯಕ್ರದಲ್ಲಿ ಮೂಡಿಗೆರೆ ಗ್ರಾಮ ಪಂಚಾಯಿತಿ ಎಲ್ಲಾ ಮಹಿಳಾ ಸದಸ್ಯರು ಹಾಗೂ ಇಂಚರ ಒಕ್ಕೂಟ ಮೂಡಿಗೆರೆ ,ಮೂಡಿಗೆರೆ ತಾಲೂಕು ಸ್ವಸಹಾಯ ಮತ್ತು ಶ್ರೀ ಶಕ್ತಿ ಸಂಘದ ಸದಸ್ಯರು ಉಪಸ್ತಿತರಿದ್ದರು .
ವರದಿ: ಮಗ್ಗಲಮಕ್ಕಿ ಗಣೇಶ್