day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂಡಿಗೆರೆ ಜೆ ಸಿ ಐಗೆ 50 ರ ಸಂಭ್ರಮ – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಮೂಡಿಗೆರೆ ಜೆ ಸಿ ಐಗೆ 50 ರ ಸಂಭ್ರಮ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮೂಡಿಗೆರೆ ಜೆ ಸಿ ಐಗೆ 50 ರ ಸಂಭ್ರಮ

ಸಂಸ್ಥೆಯ 50 ನೇ ವರ್ಷದ ಮತ್ತು 2022ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ 19-12-2021 ರಂದು ಭಾನುವಾರ ಸಂಜೆ 6 ಗಂಟೆಗೆ ಮೂಡಿಗೆರೆ ಜೆಸಿ ಭವನದಲ್ಲಿ ನೆರೆವೇರಿತು ಸಮಾರಂಭದ ಅಧ್ಯಕ್ಷತೆಯನ್ನು ಮೂಡಿಗೆರೆ 2021ರ ಅಧ್ಯಕ್ಷರಾದ ಜೆಸಿ ಚಂದ್ರಶೇಖರ ಕುನ್ನಹಳ್ಳಿ ಅವರು ವಹಿಸಿದ್ದರು,
1) ಗೌರವನ್ವಿತ ಅತಿಥಿಗಳಾಗಿ ಜೆಸಿ ಸುಂದರೇಶ್ವರ್ ಎನ್.ಎಲ್ ಸ್ಥಾಪಕ ಅಧ್ಯಕ್ಷರು ಜೆ ಸಿ ಐ ಮೂಡಿಗೆರೆ 1973,
2) ಮುಖ್ಯ ಅತಿಥಿಗಳಾಗಿ ಜೇಸಿ ಜಯೇಶ್ ಎಂ .ಆರ್ ಮೂಡಿಗೆರೆ ಜೇಸಿ ಪೂರ್ವ ಅಧ್ಯಕ್ಷರು ಹಾಗೂ ವಲಯ-14 ರ ಸ್ಥಾಪಕ ಅಧ್ಯಕ್ಷರು,ಎಸ್.ಬಿ.ಐ ನಿವೃತ್ತ ಜನರಲ್ ಮ್ಯಾನೇಜರ್ ,
3) ಪದಗ್ರಹಣದ ಅಧಿಕಾರಿಗಳಾದ ಜೆಸಿ ಸೆನೆಟರ್ ಕುನಲ್ ಎಂ 2022 ರ ವಲಯ ಅಧ್ಯಕ್ಷರು ವಲಯ -14
4) ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಕರಾದ ಜೇಸಿ ಪ್ರಜ್ವಲ್ ಎಸ್ ಜೈನ್ 2022 ರ ವಲಯ – 14 ರ ಉಪಾಧ್ಯಾಕ್ಷರು, ಪ್ರಾಂತ್ಯ – ಬಿ 5)ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮೂಡಿಗೆರೆ ಸ್ಥಾಪಕ ಅಧ್ಯಕ್ಷರು ಜೇಸಿ ಸುಂದರೇಶ್ವರ್ ಮಾತನಾಡಿ ನಾವುಗಳೆಲ್ಲ ಸೇರಿ 19 73 ರಲ್ಲಿ ಜೇಸಿ ಸಂಸ್ಥೆಯನ್ನು ಸ್ಥಾಪನೆ ಮಾಡಿದೆವು ನಾನು 2 ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು ನಮ್ಮಗಳಿಗೆ ಮೀಟಿಂಗ್ ಮಾಡಲು ಯಾವುದೇ ಕಟ್ಟಡವಿರಲಿಲ್ಲ ಭಾನುವಾರ ರಜಾದಿನಗಳಲ್ಲಿ ಸ್ಕೂಲ್ ಇನ್ನಿತರ ಕಟ್ಟಡದ ಅನುಮತಿ ಪಡೆದುಕೊಂಡು ಮೀಟಿಂಗ್ ಮಾಡಿಕೊಂಡು ಬಂದೆವು ನಂತರ ನಾವುಗಳು ಎಲ್ಲಾ ಸೇರಿಕೊಂಡು ಮೂಡಿಗೆರೆಯಲ್ಲಿ ಒಂದು ಭವನವನ್ನು ಕಟ್ಟಬೇಕು ಅಂತ ಎಲ್ಲರ ಒತ್ತಾಸೆ ಮೇರೆಗೆ ಒಂದು ಭವನವನ್ನು ಕಟ್ಟಿದೆವು ಅಲ್ಲಿಂದ ಇಲ್ಲಿಯವರೆಗೆ ಎಲ್ಲ ಅಧ್ಯಕ್ಷರು ಒಳ್ಳೆಯ ರೀತಿಯಲ್ಲಿ ಭವನವನ್ನು ಉಪಯೋಗಿಸಿಕೊಂಡು ಹಾಗೂ ಉಳಿಸಿಕೊಂಡು ಬಂದಿದ್ದಿರ.ಸಕ್ರಿಯ ಉದ್ಯಮಶೀಲರು ಎಂಬ ಪದಕ್ಕೆ ವಿಶಾಲವಾದ ಹಾಗೂ ಗುಣಾತ್ಮಕವಾದ ಅರ್ಥಗಳಿವೆ. “ಒಂದು ವ್ಯವಹಾರವನ್ನು ಸಂಘಟಿಸುವುದೇ ಉದ್ಯಮಶೀಲತೆ “ಸಮುದಾಯ ವಾಗಿ ದಿಟ್ಟ ಕಾರ್ಯಗಳನ್ನು ಕೈಗೊಳ್ಳುವವರು ಸಮಾಜಿಕ ಉದ್ಯಮಶೀಲರು ಎನಿಸಿಕೊಳ್ಳುತ್ತಾರೆ ಅವರು ಸದಾ ಹೊಸದನ್ನು ಕ್ರಿಯಾತ್ಮಕವಾದುದನ್ನು ಚಿಂತಿಸುತ್ತಾ ತಮ್ಮ ಹರಿತವಾದ ಚಿಂತನೆ ಹಾಗೂ ಸಾಮರ್ಥ್ಯದಿಂದ ಸದಾ ಜವಾಬ್ದಾರಿ ಹೊರಲು ಸಿದ್ಧರಿರುತ್ತಾರೆ. ” ಸಕ್ರಿಯ “ಎಂಬ ಪದ ಜೆಸಿ ಸದಸ್ಯರು ಪ್ರಗತಿಪರರು ಹಾಗೂ ಬದಲಾವಣೆ ಬಯಸುವವರು ಎಂಬುದು ಸೂಚಿಸುತ್ತದೆ. ಕೋವಿಡ್ ಸಂಕಷ್ಟದಲ್ಲಿ ಸಹ ಆಧ್ಯಕ್ಷರು ಚೆನ್ನಾಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಮೂಡಿಗೆರೆ ಘಟಕವನ್ನು ಮುನ್ನಡೆಸಿಕೊಂಡು ಬಂದಿರುತ್ತಾರೆ ಅವರಿಗೆ ಅಭಿನಂದನೆಗಳು ತಿಳಿಸಿದರು.
2) ಮೂಡಿಗೆರೆ ಜೇಸಿರೇಟ್ ಅಧ್ಯಕ್ಷರು ಸುಧಾ ಚಂದ್ರಶೇಖರ್ ಮಾತನಾಡಿ,ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಮತ್ತು ಮಾನವ ಕುಲವ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂದು ತಿಳಿದಿರುವ ನಾವುಗಳು,
ನಮಗೆಲ್ಲ ತಿಳಿದಿರುವಂತೆ ಕಮಲ ಕೆಸರಿನಲ್ಲಿ ಮತ್ತು ಕೊಳ ದಾಳದಲ್ಲಿ ರೂಪುಗೊಂಡರು ಅದು ಅರಳುವುದು ನೀರಿನ ಮೇಲೆಯೇ . ನಮ್ಮ ಸುತ್ತಮುತ್ತ ಏನೇ ಸ್ಪರ್ಧಿಗಳಿದ್ದರು ನಾವು ಅರಳಲೇ ಬೇಕೆಂಬ ಪಣ ತೊಡುವುದು ಒಂದು ಸಂಸ್ಥೆಗೆ ಸೇರಿದಾಗ ಮಾತ್ರ ಸಾಧ್ಯ. 2014ರಲ್ಲಿ ಜೇಸಿರೆಟ್ ಕಾರ್ಯದರ್ಶಿಯಾಗಿ 2021ರಲ್ಲಿ ಜೇಸಿರೆಟ್ ಅಧ್ಯಕ್ಷರಾಗಿ ಕೆಲಸ ಮಾಡುವ ಯೋಗ ನನಗೆ ಒದಗಿಬಂದಿತ್ತು ಅಧ್ಯಕ್ಷರಾಗಿ ನನಗೆ ಹಲವಾರು ವಿಷಯಗಳಲ್ಲಿ ಅನುಭವಗಳು ಹಾಗೂ ನಮ್ಮಲ್ಲಿರುವ ಪ್ರತಿಭೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಅವಕಾಶವಾಗಿತ್ತು ನನಗೆ ವಿಶಿಷ್ಟ ರೀತಿಯ ಅನುಭವವಾಯಿತ್ತು.ಪ್ರತಿಯೊಂದು ವಿಷಯಗಳಲ್ಲಿ ನಮ್ಮ ಘಟಕದ ಎಲ್ಲಾ ಜೆಸಿ ಮತ್ತು ಜೇಸಿರೆಟ್ ಪೂರ್ವಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಿದ್ದಾರೆ. ವಿಶೇಷವಾಗಿ ನಮ್ಮ ಘಟಕದ ಅಧ್ಯಕ್ಷರು ಆದ ನನ್ನ ಪತಿ ಜೆಸಿ ಚಂದ್ರಶೇಖರ್ ಅವರು ನನಗೆ ತುಂಬಾ ಉತ್ತೇಜನ ಸಹಕಾರ ಸಲಹೆಯನ್ನು ನೀಡಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಲು ನನಗೆ ಪೋತ್ಸಾಹ ನೀಡಿದ್ದರೆ ಅವರ ಸಹಾಯ ನಾನು ಎಂದುಮರೆಯಲಾರೆ.ನನಗೆ ವರ್ಷಪೂರ್ತಿ ಕೆಲಸ ಮಾಡಲು ಜೇಸಿರೆಟ್ ಕಾರ್ಯದರ್ಶಿ ಕೃತಿ ಪ್ರದೀಪ್ ಸಹಕಾರ ನೀಡಿದ್ದಾರೆ.ಮಾರ್ಚ್ 1 ರಿಂದ 8 ತಾರೀಖಿನವರಿಗೆ ಎಂಟು ದಿನಗಳ ಕಾಲ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೂಡಿಗೆರೆ ಜೆಸಿರೆಟ್ ವಿಭಾಗದಿಂದ ಆಚರಿಸಲಾಯಿತು.
1) ಮಹಿಳಾ ಸಬಲೀಕರಣ ಹಾಗೂ ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರ, ಹದಿಹರೆಯದ ಬಗ್ಗೆ ತರಬೇತಿ ಕಾರ್ಯಕ್ರಮ ಹಾಗೂ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಯ ಬಗ್ಗೆ ತರಬೇತಿ , ಕುನ್ನಹಳ್ಳಿ ಗ್ರಾಮೀಣ ಪ್ರದೇಶದಲ್ಲಿ ಆಟೋಟ ಸ್ಪರ್ಧೆ,ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಂಘಗಳಿಗೆ ಬಿಸಿನೆಸ್ ಬಗ್ಗೆ ತರಬೇತಿ ಕಾರ್ಯಕ್ರಮ,ಮೂಡಿಗೆರೆ ಸರ್ಕಾರಿ ಬಾಲಕಿಯ ಜೂನಿಯರ್ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಮೂಡಿಗೆರೆ ವೈದ್ಯರಾದ ಡಾಕ್ಟರ್ ಶಾಂಭವಿಮೇಡಮ್ ಅವರಿಂದ ಹೆಣ್ಣುಮಕ್ಕಳಿಗೆ ಆರೋಗ್ಯ ಬಗ್ಗೆ ತರಬೇತಿ ನೀಡಲಾಯಿತು. ಹಾಗೂ ಹಾಗೂ ರಾಷ್ಟ್ರೀಯ
ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಸೆಪ್ಟೆಂಬರ್ ಒಂದರಿಂದ 7 ರವರೆಗೆ ಬಾಂಧವ್ಯ ಜೆಸಿ ಸಪ್ತಾಹವನ್ನು ಮಾಡಿದೆವು. 10 – 10- 2021 ರಂದು ಶೃಂಗೇರಿ ನಡೆದ ಜೇಸಿರೆಟ್ ಕಾನ್ಪರೆನ್ಸಿ ನಲ್ಲಿ ನಮ್ಮ ಮೂಡಿಗೆರೆ ಜೆಸಿರೆಟ್ಗೆ ಹಲವಾರು ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡೆವು.ನಮಗೆಲ್ಲ ವರ್ಷಪೂರ್ತಿ ಕಾರ್ಯಕ್ರಮ ಮಾಡಲು ಎಲ್ಲ ಮೂಡಿಗೆರೆ ಜೇಸಿಸಂಸ್ಥೆಯವರು ಸಹಕಾರ ನೀಡಿದ್ದಾರೆ .ನಾವು ಮಾಡಿದ ಸಮಾಜ ಸೇವೆಯನ್ನುಪ್ರಚಾರ ವಾಗಬೇಕಾದರೆ ನಾವುಗಳು ಪತ್ರಿಕೆಗಳ ಮುಖಾಂತರ ಮೊರೆ ಹೋಗಬೇಕಾಗುತ್ತದೆ.ಆದರೆ ನಮಗೆ ಅಷ್ಟರಮಟ್ಟಿಗೆ ನಮಗೆ ಕನಸು ನನಸಾಗಲಿಲ್ಲ,ಹೂವಿನ ಸುಗಂಧವು ಬರಿಗಾಳಿ ಇರುವ ದಿಕ್ಕಿನಲ್ಲಿ ಹೋಗುತ್ತಿದೆ. ಆದರೆ ಒಬ್ಬ ವ್ಯಕ್ತಿಯ ಒಳ್ಳೆಯ ಗುಣ ಮತ್ತು ನಡತೆ ಎಲ್ಲ ದಿಕ್ಕುಗಳಲ್ಲಿಯೂ ಪಸರಿಸುತ್ತದೆ (ಹೋಗುತ್ತದೆ) ಎಂಬುವ ಹಾಗೆ ನಮ್ಮೆಲ್ಲ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ಅವಿನ್ ಟೀವಿಯ ಮುಖಾಂತರ ಮೂಡಿಗೆರೆಯ ತಾಲ್ಲುಕಿನ ಆಧ್ಯಂತಹ , ಜಿಲ್ಲೆಯ ಹಾಗೂ ಕರ್ನಾಟಕದ ಮೂಲೆ ಮೂಲೆಯಲ್ಲು ಜನತೆಗೆ ತಲುಪಲು ಮಾಡಿದ್ದಂತಹ ನಮ್ಮ ಮೂಡಿಗೆರೆಯ ಹೆಮ್ಮೆಯ ಗೌರವಾನ್ವಿತ ಜೇಸಿ ಪೂರ್ವಅಧ್ಯಕ್ಷರಾದ, ಅವಿನ್ ಟಿ.ವಿ ಸಂಪಾದಕರಾದ ಜೇಸಿ ಮಗ್ಗಲಮಕ್ಕಿಗಣೇಶ್ ಅವರಿಗೆ ನನ್ನ ಮನದಾಳದ ತುಂಬು ಹೃದಯದ ಧನ್ಯವಾದಗಳು.🙏🙏ನಮ್ಮ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅವಿನ್ ಟಿ.ವಿ ಯಲ್ಲಿ ನಿರೂಪಣೆ ಮಾಡುವ ವಿಜಿಯಲಕ್ಷ್ಮಿ ಅವರಿಗೂ ನನ್ನ ಧನ್ಯವಾದಗಳು.
3)ಪದಗ್ರಹಣದ ಅಧ್ಯಕ್ಷತೆಯನ್ನು ವಹಿಸಿದ ಜೇಸಿ ಅಧ್ಯಕ್ಷರಾದ ಚಂದ್ರಶೇಖರ ಕುನ್ನಹಳ್ಳಿ ಮಾತನಾಡಿ ನಮ್ಮೆಲ್ಲ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಮಾಡಲು ಸಹಕರಿಸಿದ ನಮ್ಮ ಎಲ್ಲ ಮೂಡಿಗೆರೆ ಜೇಸಿ ಘಟಕದ ಜೇಸಿ ಜೇಸಿರೇಟ್ ಪೂರ್ವಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಜೇಸಿ ಜೇಸಿರೆಟ್ ಸದಸ್ಯರು ಸಲಹೆ ಸೂಚನೆ ನೀಡಿ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗಿರುತ್ತೀರಿ.ಎಲ್ಲರೂ ಸಮಾನರು ,ಪ್ರತಿಯೊಬ್ಬರು ಪರಸ್ಪರ ಅವಲಂಬಿತರು ಮಾನವ ವಿಶ್ವಕ್ಕೆ ಸೇರಿದವನೇ ಹೊರತು ವಿಶ್ವ ಮಾನವನಿಗೆ ಸೇರಿದ್ದಲ್ಲ, ಹಾಗೂ ಪ್ರತಿಯೊಬ್ಬ ಮಾನವನು ವಿಶ್ವದ ಪ್ರಜೆ ಎಂದು ತಿಳಿಸುವುದೇ ಜೂನಿಯರ್ ವೆಂಬರ್ ನ ಉದ್ದೇಶವಾಗಿದೆ. ನನಗೆ ವರ್ಷಪೂರ್ತಿ ಸಹಕಾರ ನೀಡಿದಂತಹ ನಮ್ಮ ಜೆಸಿ ಕಾರ್ಯದರ್ಶಿ ಶ್ರೇಷ್ಠಿ ಹಾಗೂ ನನ್ನ ಪತ್ನಿ ಚಂದ್ರಶೇಖರ್ ನನ್ನ ಮಗಳಾದ ರಾಣಿಚಂದ್ರಶೇಖರ್ ನನ್ನ ಮಗನಾದ ರೋಹನ್ ನನಗೆ ವರ್ಷವಿಡೀ ಮಾರ್ಗದರ್ಶನ ನೀಡಿದಂತಹ ನಿಕಟಪೂರ್ವ ಅಧ್ಯಕ್ಷರಾದ ರವಿಕುಮಾರ್, ಜೇಸಿರೇಟ್ ಕೃತಿ ಪ್ರದೀಪ್, ಸೆಪ್ಟಂಬರ್ ತಿಂಗಳಲ್ಲಿ ನಡೆದ ಬಾಂಧವ್ಯ ಜೇಸಿ ಸಪ್ತಾಹದಲ್ಲಿ ಜೇಸಿ ಸಪ್ತಾಹದ ನಿರ್ದೇಶಕರಾದ ಜೇಸಿ ಹಮೀದ್ ರವರು ನನಗೆ ಅವರಿಗೆ ಕೊಟ್ಟ ಜವಾಬ್ದಾರಿಯನನ್ನುವರ್ಷಪೂರ್ತಿ ಸಹಕಾರ ನೀಡುತ್ತ ಬಂದಿರುತ್ತಾರೆ ಹಾಗೂ ಒಂದು ದಿನದ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದಂತಹ ಜೇಸಿ ಸುದೀಪ್ ರವರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ನನ್ನ ಎಲ್ಲ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಎ
ಕರ್ನಾಟಕದ ಜನತೆಯ ಮನದಲ್ಲಿ ಮೂಲೆಮೂಲೆಗೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ನಮ್ಮ ಮೂಡಿಗೆರೆ ಗೌರವನ್ವಿತ ಜೇಸಿ ಪೂರ್ವ ಅಧ್ಯಕ್ಷರಾದ ಹಾಗೂ ಅವಿನ್ ಟಿವಿ ಸಾನಿಕ್ ಸಂಪಾದಕರಾದ ಮಗ್ಗಲಮಕ್ಕಿಗಣೇಶ್ ಅವರಿಗೆ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಎಲ್ಲ ಕಾರ್ಯಕ್ರಮದಲ್ಲಿ ಸಹಕರಿಸಿದ ಜೇಸಿ ಕುಟುಂಬದವರಿಗೆ ಹಾಗೂ ನನ್ನ ಕುನ್ನಹಳ್ಳಿ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದರು.
4) ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೇಸಿ ಜಯೇಶ್ ಸರ್ ಮಾತಾನಾಡಿ ಯುವಜನರಲ್ಲಿ ಗುಣಾತ್ಮಕ ಬದಲಾವಣೆ ತರಬಲ್ಲ ನಾಯಕತ್ವ , ಸಾಮಾಜಿಕ ಜವಾಬ್ದಾರಿ,ವ್ಯವಹಾರಿಕತೆ ಹಾಗೂ ಸ್ನೇಹತ್ವ ಗುಣಗಳನ್ನು ಬೆಳೆಸುವುದು ಜೂನಿಯರ್ ಛೇಂಬರ್ ಇಂಟರ್ ನ ಉದೇಶವಾಗಿದೆ. ವ್ಯಕ್ತಿಯ ಬೆಳವಣಿಗೆಯು ಸಮಾಜದ ಬೆಳವಣಿಗೆಗೆ ಕಾರಣವಾಗುತ್ತದೆ. ತನ್ಮೂಲಕ ವಿಶ್ವಶಾಂತಿಯಡೆಗೆ ಹೊರಳುತ್ತದೆ.ಬಹುತೇಕ ಎಲ್ಲಾ ಶಿಕ್ಷಣಗಳು ವಿದ್ಯಾರ್ಥಿಯನ್ನು ಕೇವಲ ಉತ್ತೀರ್ಣ ಗೊಳಿಸುತ್ತವೆಯೇ ಹೊರತು ವ್ಯಕ್ತಿತ್ವ ನಿರ್ಮಿಸುವುದಿಲ್ಲ. ವಿದ್ಯಾರ್ಥಿಯನ್ನು ಬದುಕಿಗೆ ಸಿದ್ಧಪಡಿಸಿರುವ ಶಿಕ್ಷಣ ಶಿಕ್ಷಣವೇ ಅಲ್ಲ ಕೇವಲ ವ್ಯಕ್ತಿ ವೃತ್ತಿಯನ್ನು ನಿರ್ಮಿಸುವುದು ಬದುಕಲ್ಲ. ಬದುಕೆಂದರೆ ಕಾಳಜಿ ತೋರುವುದು ಹಂಚಿಕೊಳ್ಳುವುದು ಪ್ರೀತಿಸುವುದು ಅರ್ಥಮಾಡಿಕೊಳ್ಳುವುದು ಹಾಗೂ ಸಂವಹಿಸುವುದು .ಬದಲಾಯಿಸಿಕೊಳ್ಳುವುದು ಪ್ರೀತಿಸುವುದು ಅರ್ಥಮಾಡಿಕೊಳ್ಳುವುದು ಹಾಗೂ ಸಂವಹಿಸುವುದು.ಎಂಬ ತನ್ನ ಸದಸ್ಯರಲ್ಲಿ ಎಲ್ಲಾ ಗುಣಗಳನ್ನು ತುಂಬುತ್ತದೆ ಎಂದು ಹೇಳಿದರು.
ಮೂಡಿಗೆರೆ ಘಟಕವು ಕೋವಿಡ್ ಸಂಕಷ್ಟದಲ್ಲೂ ಸಹ ಈ ಸಂಸ್ಥೆಯನ್ನು ಅಧ್ಯಕ್ಷರು ಮುನ್ನೆಡಿಸಿ ಕೊಂಡು ಬಂದಿರುವರು. ಹಲವಾರು ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿರುವರು. ನನಗೆ ಹಾಗೂ ಮಾತೃ ಸಂಸ್ಥೆಯಾದ ಮೂಡಿಗೆರೆ ಜೇಸಿ ಘಟಕದ ಬಗ್ಗೆ ಹಾಗೂ ಅಧ್ಯಕ್ಷರಾದ ಚಂದ್ರಶೇಖರ ಅವರ ಕುಟುಂಬದ ಬಗ್ಗೆ ಹೆಮ್ಮೆ ಆಗುವುದು ಎಂದು ತಿಳಿಸಿದರು.
5) ಜೋನ್ ವಲಯ-14 ರ ಅಧ್ಯಕ್ಷರಾದ ಕುಲಾಲ್ ಎಂ ಅವರು 2022 ರ ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಮೂಡಿಗೆರೆ ಜೆಸಿ ಸಂಸ್ಥೆಯು 50ನೇ ವರ್ಷದ ಸಂಭ್ರಮದಲ್ಲಿದೆ 1973 ರಿಂದ ಆರಂಭಗೊಂಡು ಅಲ್ಲಿಂದ ಇಲ್ಲಿಯವರೆಗೆ ಎಲ್ಲ ಅಧ್ಯಕ್ಷರು ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದು ಈ 50ನೇ ವರ್ಷದ ಸಂಭ್ರಮದಲ್ಲಿ ಇದೆ ಈ ವರ್ಷ ಮೂಡಿಗೆರೆ ಜೇಸಿ ಘಟಕವು ಅತಿ ಹೆಚ್ಚಿನ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿ . ವಲಯದಲ್ಲಿ ರಾಷ್ಟ ಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಇರುವಂತೆ ಮಾಡಬೇಕೆಂದು ಎ೦ದು ಹೇಳಿದ್ದರು ಮೂಡಿಗೆರೆ ಜೇಸಿಐ ಘಟಕವು 50 ನೇ ವರ್ಷದಲ್ಲಿ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಿರುವಿರುದು ಒಂದು ಹೆಮ್ಮೆಯ ವಿಷಯ ಎರಡು ತಿಳಿಸಿದರು
. 6) ಜೇಸಿ ಪ್ರಜ್ವಲ್ ಜೈನ್ ಜೋನ್ ವಲಯ-14 ರ ಉಪಾಧ್ಯಕ್ಷರು ಪ್ರಾಂತ್ಯ ಬಿ ಇವರು ಮಾತನಾಡಿ ಜೆಸಿ ಎಂಬುದು ಒಂದು ಮಹಾಸಾಗರ. ಯುವಜನರಿಗೆ ಅವಕಾಶಗಳನ್ನು ನೀಡುವುದರೊಂದಿಗೆ ಉತ್ತಮ ನಾಗರಿಕನಾಗಿ ನಿರ್ಮಾಣ ಮಾಡುವ ಒಂದು ವಿಶ್ವವಿದ್ಯಾಲಯವಿದ್ದಂತೆ. ಇಂತಹ ವಿಶ್ವವಿದ್ಯಾಲಯದ ಸದಸ್ಯರಾದ ನಾವುಗಳು ನಿಜ ಅರ್ಥದಲ್ಲಿ ಅತ್ಯಂತ ಹೆಮ್ಮೆಯಿಂದ ಸಂಭ್ರಮಿಸಬೇಕು. ಮೂಡಿಗೆರೆ ಜೆಸಿ ಅಧ್ಯಕ್ಷರು ಈ ವರ್ಷ ಅತ್ಯುತ್ತಮವಾಗಿ ಕೆಲಸ ಮಾಡಿ ಕಾರ್ಯಕ್ರಮಗಳನ್ನು ಚೆನ್ನಾಗಿ ಮಾಡಿಕೊಂಡು ಬಂದು ಮೂಡಿಗೆರೆ ಜೇಸಿ ಘಟಕವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಅದೇ ರೀತಿ 50ನೇ ವರ್ಷದ ಈ ವರ್ಷ ಅಧ್ಯಕ್ಷರು ಸಹ ಉತ್ತಮವಾಗಿ ಕೆಲಸ ಮಾಡಿ ಮೂಡಿಗೆರೆ ಘಟಕಕ್ಕೆ ಹೆಸರು ಮಾಡಲಿ ಎಂದು ಶುಭಹಾರೈಸಿದರು.ನಂತರ 2021 ನ ಸಾಲಿನ ಅಧ್ಯಕ್ಷರಾದ ಜೇಸಿ ಚಂದ್ರಶೇಖರ್ 2022ನೇ ಸಾಲಿನ ನೂತನ ಅಧ್ಯಕ್ಷರಾದ ಜೇಸಿ ವಿದ್ಯಾರಾಜು ರವರಿಗೆ ಅಧಿಕಾರ ಹಸ್ತಾಂತರಿಸಲಾಯಿತ್ತು.

Navachaitanya Old Age Home

Career | job

About Author