day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಮಹಾಮಳೆಗೆ ಮಲೆನಾಡು ತತ್ತರ* – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಮಹಾಮಳೆಗೆ ಮಲೆನಾಡು ತತ್ತರ*

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮಹಾಮಳೆಗೆ ಮಲೆನಾಡು ತತ್ತರ*

ಅಕಾಲಿಕಮಳೆಗಳವರ್ಷ.
#ಗ್ಲೋಬಲ್ಜಿಯೋಗ್ರಾಫಿಕಲ್ಇಂಪ್ಯಾಕ್ಟ್?

ಅದೊಂದು ಕಾಲವಿತ್ತು.
ಮಲೆನಾಡಲ್ಲಿ ಋತುಮಾನಗಳು ಬಹುತೇಕ ಟೈಮ್ ಟೇಬಲ್ಲಿನ‌ ಹಾಗೆ ಇರುತ್ತಿದ್ದ ಕಾಲ.
ಬೇಸಿಗೆ ಕಾಲವೆಂದರೆ ಮಾರ್ಚ್ ಇಂದ ಮೇ ಎಂಡು.
ಮಳೆಗಾಲವೆಂದರೆ ಜೂನ್ ಜುಲೈ ಆಗಸ್ಟಿನಲ್ಲಿ ಬೊಬ್ಬಿರಿತ,ಹಿಂಗಾರಿನ ಸೆಪ್ಟೆಂಬರ್‌,ಅಕ್ಟೋಬರ್ ನಲ್ಲಿ ಅಲ್ಲಲ್ಲಿ ಒಂದೊಂದು ದಿನ.
ಚಳಿಗಾಲವೆಂದರೆ ನವೆಂಬರಿಂದ ಫೆಬ್ರವರಿಯ ಶಿವರಾತ್ರಿವರೆಗೆ.
ವರ್ಷಕ್ಕೆ ಒಂದೋ‌ ಎರಡೋ ಋತುಮಾನಗಳಿಗೆದುರಾಗಿ ಸೈಕ್ಲೋನು,ಅಕಾಲಿಕ‌ ಮಳೆ‌.ಅಸ್ಟೆ.

ದಸರಾ ಎಂದರೆ‌ ಮಳೆ‌ ಆಲ್ಮೋಸ್ಟು ಇರುತ್ತಿರಲಿಲ್ಲ.
ಆಯುಧ ಪೂಜೆ ದಿನ ವೆಹಿಕಲ್ಲೆಲ್ಲ‌ ಡೆಕೋರೇಟ್ ಮಾಡ್ಕೊಂಡು ಒಂದೆರಡು ರೌಂಡ್ ಹಾಕ್ಬೋದಿತ್ತು.
ದೀಪಾವಳಿಲಿ ಸಿಟಿ ಸೇರಿದ್ದ ಹುಡುಗ್ರೆಲ್ಲ ಪಟಾಕಿ‌ ಅಂಗ್ಡಿ‌ ಹತ್ರ ಮತ್ತೆ ಸೇರಿ ಒಂದಷ್ಟು ಓಲ್ಡ್ ಮೆಮೋರೀಸ್,ಫ್ಲಾಷ್ ಬ್ಯಾಕು,ಹರಟೆ,ಔಟ್ ಡೋರ್ ದೀಪಗಳು,ಪಟಾಕಿ ಹೊಡ್ಯೋದು ಕಾಮನ್ನು.
ಏಪ್ರಿಲ್ ಮೇನಲ್ಲಿ ಬಿಸಿಲು ಸಕತ್ತಾಗೆ ಹೊಡ್ಯೋದು.ಅದ್ಕೆ‌ ಸ್ಕೂಲ್ ಮಕ್ಳಿಗೆಲ್ಲ ಬೇಸ್ಗೆ ರಜಾ ಕೊಡ್ತಿದ್ರು.

ಆದ್ರೆ ಕೆಲ ವರ್ಷಗಳಿಂದ ಏನಾಗಿದೆ ಮಲೆನಾಡಿಗೆ?
ಕೃಷಿ ಬಿಡಿ,ಬೆಳೆಗಾರ ಯಾವಾಗ್ಲೋ ಮಕಾಡೆ ಮಲ್ಗಾಗಿದೆ.
ಅಟ್ಲೀಸ್ಟು ಬೇಸಿಕ್ಕು ಬದುಕನ್ನೂ ಮಾಡೋದು ಕ್ಲಿಷ್ಟಕರವಾಗಿಸಿದೆ ಋತುಮಾನಗಳು.
ಹೌದು,ನೀವು ಸೂಕ್ಷ್ಮವಾಗಿ ಗಮನಿಸಿ.
ನಮ್ಮ ಋತುಮಾನಗಳು ಮುಂದಕ್ಕೆ ಹೋಗುತ್ತಿವೆ.
ಅಷ್ಟೇ ಅಲ್ಲ ಊಹೆ ಮತ್ತು ತರ್ಕಕ್ಕೂ ಎಟುಕದಂತಾಗಿವೆ.
ಜೂನ್ ಮುಗಿದರೂ ಮಳೆಗಾಲ ಆರಂಭವಾಗುತ್ತಿಲ್ಲ.
ಒಮ್ಮೆ ಮಳೆ‌ ಹಿಡೀತು ಅಂದರೆ ನವೆಂಬರ್ ಆದರೂ ಮುಗಿಯೋಲ್ಲ.
ಡಿಸೆಂಬರಿನ ಭತ್ತ ಮತ್ತು ಕಾಫಿ‌ ಕೊಯಿಲನ್ನು ಅದ್ವಾನ ಮಾಡಿ ಹಾಕುತ್ತೆ.
ದೀಪಾವಳಿ ಪಟಾಕಿ ಹೊಡೆಯೋದಿರಲಿ ತಗೋಂಡು ಬರೋದೇ ಕಸ್ಟ.
ಕೆಸರಿನ‌ ಮೇಲೆ ನಾಜೂಕಾಗಿ ಹೆಜ್ಜೆ ಹಾಕಿ ತಂದ ಪಟಾಕಿ ಹೊಡೆಯೋಕೆ ಮಳೆರಾಯ ಚಾನ್ಸು ಕೊಡೋದೆ ಡೌಟು.
ಬಿಟ್ಟ ರಾಕೇಟು ನೆನೆಯುತ್ತಾ ಚಳಿ ಅಂತ ಸ್ವಲ್ಪ ದೂರಕ್ಕೆ ಸೊಯ್ ಪಟಕ್ ಅನ್ನೋ ಎಫೆಕ್ಠು ಮಳೇದು.
ವರ್ಷಕ್ಕೊಮ್ಮೆ ಬರ್ತಿದ್ದ ಸೈಕ್ಲೋನು,ಡಿಪ್ರೆಷನ್ಸು ಇವಾಗ ವರ್ಷವಿಡೀ ಬಂದು ಮಜಾ ತಗೊತಿದಾವೆ.
ಅದೂನೂ ಅವ್ಗಳೆಸ್ರೆಲ್ಲ ಕರಾಬಾಗೇ ಇದಾವೆ.
ತೌಕ್ತೆ ಅಂತೆ,ಗುಲಾಬ್ ಅಂತೆ,
ಯಾಸ್,ಅಂಫಾನ್,ಕ್ಯಾರ್,ಹಿಕ್ಕಾ,ಬಾಬ್,
ಬುಲ್ ಬುಲ್ ‌ತರ ಹತ್ತಾರು ಸೈಕ್ಲೋನುಗಳು ಈ‌ ಸಲ ಬಂದು ಭಾರತವನ್ನು ಹಿಪ್ಪೆ ಮಾಡಿವೆ.
ರೈಟ್ ನೌ ಬಂಗಾಲ‌ ಕೊಲ್ಲಿಯಲ್ಲಿ ಡಿಪ್ರೆಷನ್ ಅಂತೆ.
ಎಲ್ಲಾ ಸೇರಿ ಮಲೆನಾಡ ಮನುಷ್ಯರನ್ನಂತು ಪರ್ಮನೆಂಟ್ ಡಿಪ್ರೆಷನ್ನಿಗೆ ತಳ್ಳಿ ಹಾಕಿವೆ.

ಇನ್ನು 2021 ಬಗ್ಗೆ ಹೇಳೋದಾದ್ರೆ ಪ್ರತೀ ತಿಂಗಳು ಮಳೆ ಬಂದಿದೆ.
ಜನವರಿ ಫೆಬ್ರವರಿ ಮಾರ್ಚ್ ನಲ್ಲಿ
ಕಾಫಿ‌ ಮೆಣಸು ಒಣಗಿಸೋದೋ,
ಸ್ಪ್ರಿಂಕ್ಲರ್ ಮಾಡೋದೋ,
ಸ್ಪ್ರಿಂಕ್ಲರ್ ಮಾಡಿ ಬೆಳೆ ಕುಯ್ಯೋದೋ ಅನ್ನೋ ಕನ್ಫ್ಯೂಷನ್ನಲ್ಲಿ ಮಲೆನಾಡ ದೇಶದ ಬೆನ್ನೆಲುಬು(ರೈತ) ಬಳಲಿ ಬೆಂಡಾಗಿ ಹೋಗಿದ್ದ.
ಹೋದ ವರ್ಷ ಅಂತೂ ಹೊಗೆ ಹಾಕ್ತು ಈ ವರ್ಷನಾದ್ರೂ ಬದ್ಕೋಣ ಅನ್ಕೊಂಡ್ರೆ ಹಾಳು ಮಳೆ ಎರೆಡೆರಡು ಬಾರಿ ಕರ್ನಾಟಕದ ಡ್ಯಾಮುಗಳೆಲ್ಲ ತುಂಬಿ ಹೋಗುವಂತೆ ಸುರಿದು ಇಲ್ಲಿನ‌ ಬದುಕನ್ನೇ ಹಳಿ ತಪ್ಪಿಸಿದೆ.

ಕೋವಿಡ್ಡು,ಬೆಲೆಯೇರಿಕೆ,
ಮಳೆಯೊಳಗಿನ ಬದುಕುಗಳ ನಡುವೆ ಮಲೆನಾಡಿಗೆ ಈ ಬಾರಿ ವಸ್ತುನಿಷ್ಟ ವಿಶೇಷ ಪ್ಯಾಕೇಜಿನ ಜರೂರು ಇದೆ.
ಅಧಿಕಾರ ಇರೋರು ಎಲೆಕ್ಸನ್ ಅಷ್ಟೆ ಉತ್ಸಾಹ ಇಲ್ಲೂ ತೋರದಿರೋದು ಮಾಸಿಹೋದ ಬದುಕುಗಳ ಕನಸುಗಳು ಕನಸಾಗೇ ಉಳಿಯುವಂತೆ ಮಾಡಿವೆ.
ಇಡೀ ವರ್ಷಕ್ಕೆ ಏಪ್ರಿಲ್ ಮೇ ಮಾತ್ರ ಬಿಸಿಲು‌ ಕಂಡಿತ್ತು.
ಜಾಗಿಂಗ್ ಹೋಗುವಂತಿಲ್ಲ,ಶಾಲೆ ಇಲ್ಲ,
ಅವಾಗವಾಗ ಕರೆಂಟೂ ಇಲ್ಲ,ನೆಟ್ವರ್ಕು ಇಲ್ಲ,
ಬೆಳೆಯೂ ಇಲ್ಲ, ಬೆಲೆಯೂ ಇಲ್ಲ,
ಕೆಲಸಕ್ಕೆ ಜನವೂ ಇಲ್ಲ,ಇದ್ದರೂ ಈ ಊರೋರು ಆ ಊರಿಗೆ ಆ ಊರೋರು ಈ ಊರಿಗೆ ದಿನ ಪಿಕ್ನಿಕ್ ಮಾಡ್ಕೊಂಡ್ ಮಾಡೋ ಕಳ್ ಕೆಲ್ಸ,
ಬೆಳೆ ಒಣಗ್ಸೋಕೆ ಬಿಸಲೇ ಇಲ್ಲ.
ಮನೆ ಕಟ್ಟೋಕೆ ಮರಳೂ ಕೊಡೋಲ್ಲ,
ಕಲ್ಲು ಕ್ವಾರಿಗಳೆಲ್ಲ ರಾಜಕೀದೋರ ಪಾಲಾದ್ಮೇಲೆ ಎಮ್ ಸ್ಯಾಂಡ್ ಲಾಭಿ.
ಇವಾಗ ಈ ವರ್ಷದ ಕಾಫಿ‌ ಎಲ್ಲ ಮಳೆಗೆ ನೆಲದಲ್ಲಿದೆ.
ಒಟ್ನಲ್ಲಿ ರೈತಂದು ಅದೆಂತದೋ ಹೇಳ್ತಾರಲ ಆ ಪಾಡು ಅಸ್ಟೆ.
ಹಿಂಗಾದ್ರೆ ಇಲ್ಲಿಯ ರೈತ ಬದುಕೋದು‌ ಹೆಂಗೆ?

ಹಿಂಗೇ‌ ಆದ್ರೆ ಮಲೆನಾಡು ಒಂದೆರಡು‌ ದಿನಕ್ಕೆ‌ ಬಂದು‌ ಹೋಗೋ”ವೆದರ್‌ ಸಕತ್ತಾಗಿದೆ ಮಚ್ಚಾ”ಅನ್ನೋ ಹೊರ ಊರಿನೋರಿಗೆ ಅಡಿಗೆ ಮಾಡಿ ಬೇಯ್ಸಿ‌ ಹಾಕುತ್ತ ಟೀ ಅಂಗ್ಡಿ,ಕೆಫೇ,ಹೋಮ್ಸ್ಟೇ,ಅಂತ ಬದುಕು ಮಾಡ್ಬೇಕೇನೋ?
ನೆಟ್ಟುಗೆ ಅಪ್ಪ‌ ಅಮ್ಮುಂಗೆ,ಅತ್ತೆ ಮಾವುಂಗೆ ಒಂದಿನ‌ ಅಡ್ಗೆ ಮಾಡ್ಕೊಡ್ದವೆಲ್ಲ ಹೋಮ್ ಸ್ಟೇಲಿ ಕಾಸ್ ಕೊಟ್ಟ ‌ಅಂತ ಒರ್ಸಿ‌ ಗುಡ್ಸಿ ಲೋಟಾನೂ ತೊಳ್ದು ಸೇವೆ ಮಾಡೋರನ್ನ ಸೃಷ್ಟಿ ಮಾಡ್ಬಿಡುತ್ತಾ ಅನ್ನೋ ಆತಂಕಾನೂ ಆಗ್ತಿದೆ.
ಬದುಕು‌ ದುಸ್ತರ ಆದ್ರೆ‌ ಇರೋ ಬರೋ ಜಮೀನೆಲ್ಲ ಹಣವಿರುವ ಪರಕೀಯರ ಪಾಲಾಗಿ‌ ಇಲ್ಲಿನ‌ ಮೂಲ‌ ಸಂಸ್ಕೃತಿಗೂ ಧಕ್ಕೆಯಾಗ್ಬೋದೇನೋ.
ಮೂಲ‌ ಮಲೆನಾಡಿಗ ಅಲ್ಲೇ‌ ಏನಾದ್ರು ಸಣ್ಣ ಪುಟ್ಟ ಕೆಲ್ಸ ಹುಡ್ಕೊಂಡು‌ ಬದುಕ್ಬೇಕೇನೋ?
ಗೊತ್ತಿಲ್ಲ.
ಹಾಗಾಗದಿರಲಿ ಅನ್ನೋ ಬಯಕೆ ಅಸ್ಟೆ.

ಯಾಕಿಂಗೆ?ಹಿಂಗಾದ್ರೆ ಭವಿಷ್ಯ ಏನು?
ಜಾಗತಿಕ ಪರಿಸರದಲ್ಲಿ ಬಹುದೊಡ್ಡ ಬದಲಾಣೆಗಳಾಗಿವೆ.
ಅದನ್ನು ಇಂತಹುದೇ ಅಂತ ಎಕ್ಸಾಕ್ಟ್ ಆಗಿ‌ಕಂಡು ಹಿಡಿಯೋಕೆ‌ ಆಗ್ತಿಲ್ಲ.
ಕಂಡು ಹಿಡಿದು‌ ಎಕಾಲಜಿಸ್ಟುಗಳು ಹೇಳಿದ್ರೂ ಅದನ್ನ ಕೇಳೋಷ್ಟು ವ್ಯವಧಾನ ಮನುಷ್ಯನಿಗೆಲ್ಲಿದೆ?
ಅವ್ನಿಗೇನಿದ್ರು‌ ಪ್ರಸೆಂಟು ಅಸ್ಟೆ.
ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಜೀವರಾಶಿ ಹೊಂದಿರುವ ಏಕೈಕ ಸ್ಥಳ ಭೂಮಿ.
ಆಧುನೀಕತೇ,ಸ್ವಾರ್ಥ,ಅಭಿವೃದ್ಧಿ ಹೆಸರಲ್ಲಿ ಆಕೆಯ ಮೇಲೆಷ್ಟು ಅತ್ಯಾಚಾರಗಳಾಗಿಲ್ಲ.
ಅದೆಷ್ಟು ಯುದ್ಧಗಳು?ಅದೆಷ್ಟು ಮೈನಿಂಗುಗಳು?
ಡ್ರಗ್ಗು,ಮೆಡಿಕಲ್ಲು ಲಾಭಿ,ಪೊಲ್ಯೂಷನ್ನುಗಳು,ಇಂಡಸ್ಟ್ರಿಗಳು,
ಅದೆಷ್ಟು ಕೆಮಿಕಲ್ಲುಗಳು ಸಾಗರ ಸೇರಿಲ್ಲ?
ಅದೆಷ್ಟು ಅರಣ್ಯ ನಾಶ?
ಭೂಮಿಯ ಭೂಭಾಗದ ಎರಡರಷ್ಟಿರುವ ಸಾಗರಗಳು ಡಿಪ್ರೆಷನ್ ಮೂಲಕ‌ ನಮ್ಮ‌ ಪಾಪವನ್ನು ನಮಗೇ ಉಣ ಬಡಿಸುತ್ತಿವೆಯೇ?
ಮತ್ತೊಮ್ಮೆ ಜಿಯಾಗ್ರಫಿ,ಟೊಪೋಗ್ರಫಿಗಳ ಥಿಯರಿಗಳನ್ನು ಪುನರ್ ಅಧ್ಯಯಿಸಬೇಕೇ?

ಹಿಂದೊಮ್ಮೆ‌ ಡೈನೋಸಾರುಗಳೆಲ್ಲ ಸತ್ತು ಇದೆ ಭೂಮಿಯಲ್ಲಿ ಪಳೆಯುಳಿಕೆಯಾದಂತೆ ಮನುಕುಲವೂ ಅದೇ ಹಾದಿಯಲ್ಲಿದೆಯೇ?
ಇದಿನ್ನೂ ಆರಂಭವೇ?
ಗೊತ್ತಿಲ್ಲ……..

ಬರಹ ಕೃಪೆ.
ಮಗ್ಗಲಮಕ್ಕಿ_ದಿವಿನ್.

ವರದಿ.
ಮಗ್ಗಲಮಕ್ಕಿಗಣೇಶ್.

Career | job

Assisted living facilities in Bangalore India

About Author