day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವೈರಲ್ ಸ್ಟಾರ್, ಹಾಡುಗಾರ ಅರಳುತ್ತಿರುವ ಪ್ರತಿಭೆ ರವಿ ಮುಕ್ರಿ ಬೋರೋಳ್ಳಿ. – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ವೈರಲ್ ಸ್ಟಾರ್, ಹಾಡುಗಾರ ಅರಳುತ್ತಿರುವ ಪ್ರತಿಭೆ ರವಿ ಮುಕ್ರಿ ಬೋರೋಳ್ಳಿ.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ವೈರಲ್ ಸ್ಟಾರ್, ಹಾಡುಗಾರ ಅರಳುತ್ತಿರುವ ಪ್ರತಿಭೆ ರವಿ ಮುಕ್ರಿ ಬೋರೋಳ್ಳಿ.
ಸಂತೋಷ ಮತ್ತು ಸಂಗೀತ ಎರಡೂ ಒಂದನ್ನು ಬಿಟ್ಟು ಮತ್ತೊಂದು ಇರಲಾರದೇನೋ ಅನ್ನುವಷ್ಟು ಜೋಡಿಯಾಗಿದೆ ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾಧಿಸುತ್ತೇವೆ ಆದರೆ ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ ಎಂಬ ಮಾತಿದೆ ಸಂತೋಷದ ಹಾಡುಗಳು ಹಾಗೆಯೇ ಸ್ವಲ್ಪ ವೇಗದ ಉತ್ಸಾಹದ ದಾಟಿರುತ್ತದೆ ದುಃಖದ ಹಾಡುಗಳು ನಿಧಾನವಾಗಿ ಸಾಗುತ್ತದೆ ಬದುಕೇ ಒಂದು ಸಂಗೀತ ಎಂದುಕೊಂಡರೆ ಖುಷಿಯಲ್ಲಿರುವಾಗ ಕ್ಷಣಗಳು ಬೇಗಬೇಗನೆ ಸರಿದು ಹೋಗುತ್ತದೆ ದುಃಖದ ಸನ್ನಿವೇಶಗಳು ಬೇಗನೆ ಕರಗುವುದೇ ಇಲ್ಲ ಕಷ್ಟಗಳು ಹಾಗೂ ದುಃಖ ನಮ್ಮ ಮನಸ್ಸನ್ನು ಕರಗಿಸಿ ಬದುಕಿನ ಸಾಹಿತ್ಯವನ್ನು ಅರ್ಥವಾಗಿರುತ್ತದೆ ಸಂತೋಷದ ಬದುಕಿಗೆ ಉತ್ತೇಜನ ಅದೊಂದು ಸುಮಧುರ ಸಂಗೀತದಂತೆ
ಎಲ್ಲಾ ಕಲೆಗಳ ಗಿಂತಲೂ ಎಲ್ಲರನ್ನೂ ಅರಳಿಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ ಕೆರಳಿದವರನ್ನು ಅರ ಳಿಸಬಹುದು ಜೀವನವೇ ಬೇಡ ಎಂದುಕೊಂಡವರನ್ನು ಸಂಗೀತ ಬದುಕಿನ ಆಶಾವಾದ ಪಥದತ್ತ ಕೊಂಡೊಯ್ಯಬಹುದು ಜೀವನಪ್ರೀತಿ ಹುಟ್ಟಿಸುವ ಅನನ್ಯ ಸಾಧನ ಸಂಗೀತ ಎಂದರೆ ಯಾರು ತಪ್ಪು ಅನ್ನ ಲಾರರು.
ಸುಪ್ತ ಮತ್ತು ಗುಪ್ತ ಪ್ರತಿಭೆಗಳು ಯಾರಲ್ಲಿ ಎಲ್ಲಿ ಹೇಗೆ ಅಡಕವಾಗಿರುತ್ತದೆ ಎಂದು ಯಾರಿಗೂ ಗೊತ್ತಿಲ್ಲ ಇಂದು ವೈರಲ್ ಸ್ಟಾರ್ ಹಾಡುಗಾರ “ರವಿ ಮುಕ್ರಿ” ಬೋರೋಳ್ಳಿ. ಪರಿಚಯ ಮತ್ತು ಆತನ ಕನಸು-ಮನಸು ಆಲೋಚನೆ ಮತ್ತು ಯೋಜನೆ ಗಳ ಪುಟಗಳನ್ನು ತಮ್ಮ ಮುಂದೆ ಓದಲು ತೆರೆದಿಡುತ್ತಿದ್ದೇನೆ.
ನಾಗಪ್ಪ ಮತ್ತು ಗಿರಿಜಾ ದಂಪತಿಗಳಿಗೆ ಐದು ಜನ ಮಕ್ಕಳು ರವಿ ಎಲ್ಲಿರಿಗೂ ದೊಡ್ಡವನು ತಮ್ಮ ಗುರು ಮತ್ತು ಚರಣ್ ತಂಗಿ ಮಂಜುಳಾ ಮತ್ತು ಅರ್ಚನಾಳ ಮುದ್ದಿನ ಒಡನಾಡಿ ಅಣ್ಣಾ, ತಂದೆ -ತಾಯಿ ಕೂಲಿ ಕೆಲಸ ಮಾಡಿಕೊಂಡು ರವಿ ಕುಮಟಾದ ಒಂದು ಹೋಟೆಲ್ ನಲ್ಲಿ 7ಸಾವಿರ ತಿಂಗಳ ಸಂಬಳ ದುಡುಯುವ ಕೆಲಸಗಾರ, ಇವರಿಗೆ ಅಂಕೋಲದ ಬೋರೋಳ್ಳಿ ಎಂಬ ಊರಿನಲ್ಲಿ ಚಿಕ್ಕದೊಂದು ಗುಡಿಸಲು.
ಈತನ ಸಂಗೀತ ಪ್ರೀತಿ ಮತ್ತು ಹಳ್ಳಿಯ ಮುಗ್ಧತೆ ಆತನ ಮಾತಿನಲ್ಲಿ ಅರ್ಥವಾಗುತ್ತದೆ ರವಿಯೇ ಟ್ರೋಲ್ ನಿಂದ ಮತ್ತು ಹಾಸ್ಯಾಸ್ಪದ ಕಾಮೆಂಟ್ಸ್ ಮತ್ತು ಅಪಹಾಸ್ಯಕ್ಕೆ ಮನನೊಂದಿರುವುದು ಅಂತೂ ಸತ್ಯ ಆತ ಯಾರ ಫೋನಿಗೂ ಹೆಚ್ಚು ಸ್ಪಂದಿಸುವುದಿಲ್ಲ ಕೆಲವೇ ಜನಗಳ ಕರೆ ಮಾತ್ರ ಸ್ವೀಕರಿಸಿ ಉತ್ತರಿಸುತ್ತಾನೆ ಈ ವಿದ್ಯಮಾನ ತಪ್ಪೋ ಸರಿಯೋ ನನಗೂ ಗೊತ್ತಿಲ್ಲ ಆದರೆ ನಾನೊಂದು ಸಲಹೆ ಕೊಟ್ಟಿದ್ದೇನೆ ಯಾರದೇ ಕರೆ ಬರಲಿ ನಿನಗೆ ತೋಚಿದ್ದು ಹೇಳಿಬಿಡು ಕರೆ ಸ್ವೀಕರಿಸದಿದ್ದರೆ ಎದುರಿನವರು ತಪ್ಪು ತಿಳಿದುಕೊಳ್ಳುತ್ತಾರೆ ಎಂದಾಗ ನನ್ನ ಈ ಮಾತಿಗೆ ಸ್ಪಂದಿಸಿ ಅಣ್ಣಾ ಆಯಿತು ಅಂದಿದ್ದಾನೆ
ಕೆಲವು ದಿನಗಳ ಹಿಂದೆ ಈತನ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟ್ರೋಲ್ ಪೇಜುಗಳಿಗೆ ಆಹಾರವಾಗಿದ್ದು ತಮಗೆ ಎಲ್ಲಿರಿಗೂ ಗೊತ್ತಿರುವ ವಿಷಯ ರವಿಯ ನೋಟದಲ್ಲಿ ಗೊತ್ತಾಗಿಬಿಡುತ್ತದೆ ಆತನ ಮುಗ್ಧತೆ , ವಿಭಿನ್ನತೆ ಹಾಡುಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದು ನಿಜ ಟ್ರೊಲ್ ಗೆ ಮನ ನೊಂದಿದ್ದು ಸತ್ಯ ಅಸಂಖ್ಯಾತ ಜನತೆಯ ಹೃದಯದಲ್ಲಿ ಸ್ಥಾನ ಪಡೆದಿದ್ದು ಕೂಡ ಟ್ರೋಲ್ ನಿಂದಲೇ….!!! ರವಿ ಹೆಸರುವಾಸಿಯಾಗಿದ್ದು ವಿಭಿನ್ನ ಶೈಲಿಯ ಹಾಡು ಮತ್ತು ವರ್ತನೆ,ನೋಟದಿಂದಲೇ ಈಗಲೂ ಆತ ಮನಬಿಚ್ಚಿ ಹೇಳುವುದಿಷ್ಟೇ ನನ್ನ ಸಂಗೀತ ಕೇಳಿ ಟ್ರೋಲ್ ಮಾಡಿ ಖುಷಿಪಡಿ ನಾನು ನಾನು ನನ್ನ ಶೈಲಿಯಲ್ಲಿಯೇ ಸುಧಾರಿಸಿಕೊಂಡು ಹಾಡುತ್ತೇನೆ ನೀವು ಮೆಚ್ಚಿ ಕೊಳ್ಳಿ ಅಪಹಾಸ್ಯ ಮಾಡಬೇಡಿ ಚಿಗುರುವ ಪ್ರತಿಭೆಗೆ ಅನ್ಯಾಯ ಮಾಡಬೇಡಿ ಸಂಗೀತದ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಹಾಡುವ ಬಯಕೆಯಿದೆ ಈ ಹಿಂದೆ ಕೂಡ ನಾನು ಸಂಗೀತ ರಿಯಾಲಿಟಿ ಶೋ ಸ್ಪರ್ಧೆಗಾಗಿ ಸಂದರ್ಶನಕ್ಕೆ ಹೋಗಿದ್ದೆ ಆದರೆ ನನಗೆ ಅಲ್ಲಿ ಮಣೆ ಹಾಕಲಿಲ್ಲ ತುಂಬಾ ಬೇಸರ ಗೊಂಡಿದ್ದೇನೆ
ನನ್ನ ಈ ಸಂಗೀತದ ಆಸಕ್ತಿ ನೋಡಿ ಕೆಲವು ಸಾಹಿತಿಗಳು ಮತ್ತು ಚಿಂತಕಬರಹಗಾರರು ಸಾಹಿತ್ಯದ ಬಗ್ಗೆ ತಿಳುವಳಿಕೆ ಹೇಳಿದ್ದಾರೆ ನಾನು ಸಾಹಿತ್ಯ ಉಚ್ಚಾರವನ್ನು ಸುಧಾರಿಸಿಕೊಳ್ಳುತ್ತಿದ್ದನೆ ನನ್ನ ಸಂಗೀತದ ಬಯಕೆಯನ್ನು ಅರಿತ ಒಬ್ಬ ಸಂಗೀತ ಗುರುಗಳು ನನಗೆ ಉಚಿತವಾಗಿ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ
ರವಿಯನ್ನು ಮಾತನಾಡಿಸಿದಾಗ ನನ್ನ ಗಮನಕ್ಕೆ ಬಂದ ಅಂಶವೇನೆಂದರೆ ಆತನ ಸಂಗೀತ ಮತ್ತು ಹಾಡುಗಾರಿಕೆ ಬಗ್ಗೆ ಅತಿಯಾದ ಬಯಕೆಯಿದೆ ಅವನಲ್ಲಿ ನಾನು ಹಾಡು ಕಲಿಯಬೇಕು ಹಾಡಬೇಕು ಮುಖ್ಯವಾಹಿನಿಗೆ ಬರಬೇಕು ಅಂತ ಆತನ ಇಚ್ಛೆಯಾಗಿದೆ ಆದರೆ ನಾವುಗಳು ಟ್ರೋಲ್ ಮಾಡಿ ಮಜಾ ತೆಗೆದುಕೊಳ್ಳುವ ಭರಾಟೆಯಲ್ಲಿ ಆತನ ಕನಸುಗಳಿಗೆ ಮತ್ತು ಮನಸ್ಸುಗಳ ಮೇಲೆ ಬರೆ ಹಾಕಿರುವುದಂತೂ ಸತ್ಯ ಆದರೆ ಮುಂದೆ ನಾವು ಹಾಗೆ ಮಾಡದೆ ಆತನ ಕನಸು ಮನಸ್ಸು ಮತ್ತು ಯೋಜನೆಗಳನ್ನು ಯೋಚನೆಗಳನ್ನು ಚಿಂತನೆ ಮಾಡೋಣ ಮತ್ತು ಗೌರವಿಸೋಣ
ನಿಜ ಆತನ ಸಂಗೀತದ ಹಾಡು ಶೈಲಿಯಲ್ಲೇ ಹಾಸ್ಯಯಿದೆ ಆತನ ಹಾಡುವ ಶೈಲಿ ನಗುವಿಗೆ ಸೋಪಾನವಾಗಲಿ ಆತನ ಕೇಳೋಣ ಖುಷಿ ಪಡೋಣ ಆತನ ಕನಸಿಗೆ ಬಣ್ಣ ಹಚ್ಚೋಣ ಮಸಿ ಬಳಿಯುವುದು ಬೇಡ ಆತನ ಕನಸು ಮತ್ತು ಮನಸ್ಸಿಗೆ ಏಣಿ ಆಗೋಣ
ರಿಯಲಿಟಿ ಶೋ ಅನ್ನುವ “ನಾಟಕ ಶಾಲೆ”ಗೆ ಹೋದ ಹಳ್ಳಿಯ ಪ್ರತಿಭೆಗಳು ಸುಖವನ್ನು ಕಂಡಿದ್ದು ಮಾತ್ರ ಇಲ್ಲ ಆದರೆ ಈತನ ಪ್ರತಿಭೆ ಮೂಲೆಗುಂಪಾಗುವುದು ಬೇಡ ಹಾಗೂ ಆಗದಿರಲಿ ಈತನಿಗೆ ರಿಯಾಲಿಟಿ ಶೋಗಳು ಅವಕಾಶ ಕೊಡಲಿ, ಕೊಟ್ಟೂರು ಮುಗ್ದತೆಯನ್ನು ಬಳಿಸಿಕೊಂಡು ಅಪಹಾಸ್ಯ ಮಾಡಿ ಹಾಸ್ಯಾಸ್ಪದ ಕ್ಕೆ ಅವಕಾಶ ಕೊಡದೆ ಆತನ ಶುದ್ಧ ಹಾಡುಗಾರಿಕೆ ಹೊರಹೊಮ್ಮುವಂತೆ ಮಾಡುವ ಹೊಣೆ ರಿಯಾಲಿಟಿ ಶೋಗಳಿಗೆ ಇರುತ್ತದೆ ರವಿ ಶುದ್ಧ ಮತ್ತು ಸ್ಪಷ್ಟ ಹಾಡುಗಾರಿಕೆ ವಾಹಿನಿಗಳು ಹೊರತರಲಿ ಎನ್ನುವುದೇ ನಮ್ಮ ಈ ಪರಿಚಯ ಲೇಖನದ ಆಶಯ
ರವಿಯ ಕನಸು ನನಸಾಗಲಿ ಭವಿಸ್ಯದ ಸಂಗೀತ ತಾರೆ ನಮ್ಮ-ನಿಮ್ಮ ಮದ್ಯೆ ಮಿಂಚುತ್ತಿರಲಿ ಎಂಬ
ಹಾರೈಕೆ ನಮ್ಮದು.
✍️ ಈಶ್ವರ್ ಸಿ ನಾವುಂದ
ಚಿಂತಕ -ಬರಹಗಾರ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Assisted living facilities in Bangalore India

About Author