day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ವಂಚಿತ ಕನಸು*ಇದೊಂದು ಅಪೂರ್ವ ದೃಶ್ಯ.. ಮನಸ್ಸಿನಾಳಕೆ ಇಳಿದು ಘಾಸಿ ಗೊಳಿಸಿತು – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ವಂಚಿತ ಕನಸು*ಇದೊಂದು ಅಪೂರ್ವ ದೃಶ್ಯ.. ಮನಸ್ಸಿನಾಳಕೆ ಇಳಿದು ಘಾಸಿ ಗೊಳಿಸಿತು

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ವಂಚಿತ ಕನಸು*
……………….
ಇದೊಂದು ಅಪೂರ್ವ ದೃಶ್ಯ.. ಮನಸ್ಸಿನಾಳಕೆ ಇಳಿದು ಘಾಸಿ ಗೊಳಿಸಿತು. ಮಾತು ಮೌನಕ್ಕೆ ಜಾರಿತು. ಮೌನದ ಮಾತುಗಳು ಉಮ್ಮಳಿಸಿ ಬಂತು..

ಅದು ಇಳಿ ಸಂಜೆ 5.30ರ ಸಮಯ.. ನಿದ್ರೆಯಿಂದ ಎದ್ದು, ಸೊಂಪಾದ ಸ್ನಾನ ಮಾಡಿ ಮನಸ್ಸು ಇಳಿ ಬಿಟ್ಟಿದ್ದೆ. ತಂಗಾಳಿಯ ಸವಿಯ ಸವಿಯಲು ತಾರಸಿನ ಮೇಲೆ ಹೆಜ್ಜೆ ಹಾಕಿದೆ. ಒಂದೆರಡು ಬಾರಿ ಅತ್ತಿಂದಿತ್ತ ತಿರುಗಾಡಿ ಮೇಲಿಂದ ಕೆಳಗೆ ಕಣ್ಣಾಯಿಸಿದೆ. ನನಗೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಕಣ್ಣ ದೃಷ್ಟಿ ಮತ್ತಷ್ಟು ತೀಕ್ಷ್ಣಗೊಳಿಸಿದೆ. ಅಲ್ಲಿ ಸುಮಾರು 50 ಮೀಟರ್ ದೂರದಲ್ಲಿ ಒಬ್ಬ ಪುಟ್ಟ ಹುಡುಗಿ ಕಾಣಿಸಿದ್ಲು. ಆಕೆ ಕುಳಿತ ಜಾಗ, ಲಾಕ್ಡೌನ್ ಬಳಿಕ ಪಾಳು ಬಿದ್ದಿತ್ತು. ಆ ಸ್ಥಳದಲ್ಲಿ ಕಸ-ಕಡ್ಡಿ ಗಿಡ-ಗೆಂಟೆಗಳು ಬೆಳೆದು ಕಾಡಿನಂತೆ ಆಗಿತ್ತು.. ಅದನ್ನ ಒಂದೆರಡು ವಾರದ ಹಿಂದೆ ಅಷ್ಟೇ ಸ್ವಚ್ಛಗೊಳಿಸಿದ್ರು.. ಮೊದಲಿಗೆ ಹೋಲಿಸಿದ್ರೆ ಈಗ ನೋಡಲು ಕೊಂಚ ಅಂದವಾಗಿ ಕಾಣಿಸುತ್ತಿತ್ತು. ಅದೇ ಜಾಗಕ್ಕೆ ಲಾಕ್ದೌನ್ ನಿಂದ ಕೆಲಸ ಕಳೆದುಕೊಂಡು ಊರಿಗೆ ತೆರಳಿದ್ದ ಕುಟುಂಬ ಮತ್ತೆ ವಾಪಸ್ ಬಂದಿರುವಂತೆ ಅನ್ನಿಸಿತು.

ಹಾಗೆ ಕುತೂಹಲದಿಂದ ಕಣ್ಣಾಯಿಸಿದೆ. ಅಲ್ಲಿ ಒಬ್ಬ ಪುಟ್ಟ ಹುಡುಗಿ ಮುರುಕಲು ಟೇಬಲ್, ಪಂಚರ್ ಆಗಿದ್ದ ಗಾಲಿಯ ಚೇರ್ ಮೇಲೆ ಕುಳಿತುಕೊಂಡಿದ್ಲು.. ಬಹುಶಃ ಆಕೆಯ ವಯಸ್ಸು 8 ರಿಂದ 10 ಇರಬಹುದು. ಕೈಯಲ್ಲಿ ಒಂದು ಲೋಟ ಇತ್ತು.. ಸಂಜೆಯ ಸಮಯ ಆದ್ದರಿಂದ ಟೀ ಅಥವಾ ಕಾಫಿ ಹೀರುತ್ತಿರಬಹುದು ಎಂಬುದು ನನ್ನ ಸಹಜ ಊಹೆ. ಹಾಗೆ ಅವಳತ್ತ ಒಂದೆರಡು ಬಾರಿ ತೀಕ್ಷ್ಣವಾಗಿ ದೃಷ್ಟಿ ಹಾಯಿಸಿದೆ. ಅಷ್ಟರಲ್ಲಿ ಅವಳು ಏನೋ ಮಾಡುತ್ತಿದ್ದಾಳೆ ಅಂತ ಅನ್ನಿಸಿತು. ಗುರಿಯಿಟ್ಟು ಮತ್ತೆ ನೋಡಿದೆ. ಅದ್ಯಾಕೋ ಮೈ ಒಮ್ಮೆ ಜುಂ ಎನ್ನಿಸಿತು. ಕೈ ರೋಮಗಳು ಕೂಡ ಮಾತನಾಡುವಂತಾಯ್ತು. ಮನಸ್ಸು ಮತ್ತಷ್ಟು ಇಳಿಯಾಯ್ತು.. ತಲೆಯಲ್ಲಿ ಯೋಚನೆಗಳು ಶುರುವಾಯ್ತು. ಛೇ.. ಎಂತಹ ಸಮಾಜ ಎನ್ನಿಸಿ ಬಿಡ್ತು..

ಅಲ್ಲಿಗೆ ಬಂದಿರುವ ಕುಟುಂಬ ಎಲ್ಲೋ ಹೊರ ರಾಜ್ಯದಿಂದ ಬಂದಿರಬಹುದು ಅನ್ನಿಸುತ್ತೆ. ಇಲ್ಲಿ ಯಾವುದೋ ಕೆಲಸ ಕಾರ್ಯಗಳನ್ನು ಹುಡುಕಿ ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನು ಸಂಜೆ ವೇಳೆ ಆ ಹುಡುಗಿ ಒಬ್ಬಳೇ ಕುಳಿತಿದ್ಲು. ಆ ವೇಳೆ ಅವಳ ಸನ್ನೆ, ಯೋಚನೆ, ಕ್ರಿಯೆ ಇವುಗಳನ್ನ ನೋಡಿ ನನಗೆ ಹಲವು ವಿಷಯಗಳು ತಲೆಯಲ್ಲಿ ಗಿರಕಿ ಹೊಡೆಯಲು ಶುರು ಮಾಡ್ತು. ಅದು ಮಳೆ ಬರುವ ಸಮಯವು ಆಗಿತ್ತು.. ಅಲ್ಲಿ ಮುರಿದು ಹೋಗಿದ್ದ ಟೇಬಲ್ ಜೊತೆಗೆ ವಿಲ್ ಇಲ್ಲದ ಚೇರ್ ಮೇಲೆ ಕುಳಿತು, ಕಂಪ್ಯೂಟರ್ ಟೈಪಿಂಗ್ ಮಾಡುವುದನ್ನ ಬಹಳ ಇಂಟ್ರಸ್ಟ್ ನಿಂದ ಫೀಲ್ ಮಾಡ್ತಾ ಇದ್ಲು.. ಸಿಸ್ಟಮ್ ನ ಬ್ಯಾಕ್ ಸ್ಪೇಸ್ನಿಂದ ಹಿಡಿದು, ಸ್ಪೇಸ್ ಬಾರ್, ಮೌಸ್ ಕೂಡ ಯೂಸ್ ಮಾಡ್ತಾ ಇದ್ಲು. ಆದ್ರೆ ಅದ್ಯಾವುದು ಅವಳ ಬಳಿ ಇರಲಿಲ್ಲ. ಅತ್ತ ಅವಳ ಕಲ್ಪನೆಗೆ ಸಾಟಿಯೇ ಇರಲಿಲ್ಲ.. ಅವಳ ಇನ್ವಾಲ್ ಮೆಂಟ್ ನೋಡಿ ನನ್ಗೆ ಅಚ್ಚರಿಯಾಯ್ತು.. ಹೀಗೆ ಮುಂದುವರಿಸುತ್ತಾ, ಯಾರೋ ತನ್ನ ಆಫೀಸ್ಗೆ ಇಂಟರ್ವೂಗೆ ಬಂದಂತೆ..ಅವರನ್ನ ಇವಳು ಬರಮಾಡಿಕೊಂಡಂತೆ ಸನ್ನೆ ಮಾಡ್ತಾ ಇದ್ಲು. ಇಂಗ್ಲೀಷ್ ನಲ್ಲಿ ಪ್ರಶ್ನೆ ಕೇಳುತ್ತ ಕನವರಿಸುತಿದ್ಲು.. ಗತ್ತು-ಗಾಂಭೀರ್ಯದ ಜೊತೆ ಸ್ಟೈಲ್ ಆಗಿ ಟೀ ಕುಡಿತಾ ಇದ್ಲು.. ತಾರಸಿಯ ಮೇಲೆ ಇದ್ದ ನನಗೆ ಅವಳ ಆಸೆ ಆಕಾಂಕ್ಷೆ ಜೊತೆಗೆ ಬಡತನದ ಬಗ್ಗೆ ಚಿಂತೆ ಆಗತೊಡಗಿತು. ಛೇ.. ಆಕೆಯ ಬಳಿ ಕಂಪ್ಯೂಟರ್ ಇಲ್ಲದೇ ಇದ್ರೂ ಅದೆಷ್ಟು ಆಸಕ್ತಿ ಇದೆ ಅನ್ನಿಸಿತು. ಅವರ ಬಳಿ ಕಂಪ್ಯೂಟರ್ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಾ ಇದ್ಲು, ಅದೆಷ್ಟು ಕಲೀತಾ ಇದ್ಲು ಅನ್ನಿಸಿತು. ಪಾಪ ಅದ್ಯಾವುದೇ ಸೌಭಾಗ್ಯ ಅವಳಿಗೆ ಸಿಗೋದು ಬಹಳ ದೂರದ ಮಾತು ಅಂದುಕೊಂಡು ಮನಸ್ಸಲ್ಲಿ ಗೊಣಗಿಕೊಂಡೆ. ಬಡತನ ಅನ್ನೋದು ಮುನುಷ್ಯನ ಆಸೆ ಆಕಾಂಕ್ಷೆ, ಸ್ಥಾನಮಾನಕ್ಕೆ ಹೇಗೆ ಕೊಳ್ಳಿ ಇಡುತ್ತೆ ಅಂತ ಬೇಸರಪಟ್ಟೆ.

ಇತ್ತ ತಂದೆ-ತಾಯಿಗೂ ಶಿಕ್ಷಣ ಇಲ್ಲ. ಜೊತೆಗೆ ಮಕ್ಕಳಿಗೂ ಸರಿಯಾಗಿ ಸಿಗುತ್ತಿಲ್ಲ. ಇವೆಲ್ಲದರ ಮಧ್ಯೆ ವಂಚಿತವಾಗುತ್ತಿರೋದು ಮಕ್ಕಳು. ತನ್ನ ಕನಸನ್ನ ಮೂಟೆಕಟ್ಟಿ ಅತ್ಯಮೂಲ್ಯ ಜೀವನದಿಂದ ವಂಚಿತವಾಗುತ್ತಿದ್ದಾರೆ. ಛೇ ಅವರು ಬಡವಾರಾಗಿ ಹುಟ್ಟಿದ್ದೇ ತಪ್ಪಾ ಅನ್ನಿಸಿತು. ಆಕೆಗೂ ಒಳ್ಳೆ ಶಿಕ್ಷಣ, ಡಿಜಿಟಲ್ ಯಂತ್ರಗಳ ಲಭ್ಯತೆ ಇದ್ದಿದ್ದರೆ. ಆಕೆಯ ದೊಡ್ಡ ಆಫೀಸರ್ ಆಗುವ ಕನಸು ನೆರವೇರುತ್ತಿತ್ತೇನೋ. ಏನೇ ಆಗ್ಲಿ ಸಮಾಜದ ಅನಾಚಾರಕ್ಕೆ ಇಂತ ಅದೆಷ್ಟೋ ಕುಟುಂಬಗಳು ಬಲಿಯಾಗುತ್ತಿವೆ.. ಇಂತವುಗಳನ್ನ ನೆನೆಸಿಕೊಂಡರೆ ಯಾರಾದ್ರೂ ಭಾವುಕರಾಗ್ತಾರೆ. ನಾನು ಕೂಡ ಒಮ್ಮೆ ಭಾವುಕನಾಗಿಬಿಟ್ಟೆ.

ಶಿವು.ದಾರದಹಳ್ಳಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author