day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಕನ್ನಡ-ಕನ್ನಡಿಗ -ಕರ್ನಾಟಕ ಮರೆಮಾಚಿದರೆ ಹೇಗೆ?!ಲೇಖಕ ಡಾ.ಸಂಪತ್ ಬೆಟ್ಟಗೆರೆ ಪ್ರಶ್ನೆ#avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

*ಕನ್ನಡ-ಕನ್ನಡಿಗ -ಕರ್ನಾಟಕ ಮರೆಮಾಚಿದರೆ ಹೇಗೆ?!ಲೇಖಕ ಡಾ.ಸಂಪತ್ ಬೆಟ್ಟಗೆರೆ ಪ್ರಶ್ನೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಕನ್ನಡ – ಕನ್ನಡಿಗ – ಕರ್ನಾಟಕ ಮರೆಮಾಚಿದರೆ ಹೇಗೆ?! *
– ಲೇಖಕ ಡಾ.ಸಂಪತ್ ಬೆಟ್ಟಗೆರೆ ಪ್ರಶ್ನೆ
***
ಕನ್ನಡದ ಹಿರಿಯ ಸಂಶೋಧಕರಾಗಿದ್ದ ಡಾ.ಎಂ.ಚಿದಾನಂದ ಮೂರ್ತಿ ಅವರು ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಸಂಶೋಧನೆ ಕೈಗೊಂಡವರು. ಜೊತೆಗೆ ತಮ್ಮ ಜೀವಿತಾವಧಿಯ ಕೊನೆಯವರೆಗೆ ಕನ್ನಡ ಅಸ್ಮಿತೆಗೆ ಧಕ್ಕೆ ಬಂದಾಗಲೆಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಇಲ್ಲಿನ ಶಾಸಕರು, ಸಂಸದರು, ಮಂತ್ರಿಗಳಿಗೆ ಕನ್ನಡದ ಉಳಿವಿಗಾಗಿ ಹಾಗೂ ಬೆಳವಣಿಗೆಯ ಹಿತದೃಷ್ಟಿಯಿಂದ ಗಮನ ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದರು. ಜೊತೆಗೆ ಇದಕ್ಕೆ ಆಳುವ ವರ್ಗವು ಪ್ರತಿಸ್ಪಂದನೆ ತೋರದೇ ಇದ್ದಾಗ ಪ್ರತಿಭಟನೆಯ ಮಾರ್ಗದಲ್ಲಿ ಕನ್ನಡಕ್ಕೆ ನ್ಯಾಯವನ್ನು ದೊರಕಿಸಿಕೊಳ್ಳಲು ಕೂಡ ಹಿಂಜರಿಯುತ್ತಿರಲಿಲ್ಲ. ಅಂದಹಾಗೆ ಪಿ.ಲಂಕೇಶ್, ತೇಜಸ್ವಿ, ಪ್ರೊ.ರಾಮ್ ದಾಸ್, ಯು. ಆರ್. ಅನಂತಮೂರ್ತಿ, ಕಲಬುರ್ಗಿ ಅವರ ಚಿಂತನೆಯ ನಡೆಗಳು ಕನ್ನಡತನದ ಬಗ್ಗೆ ಸರ್ಕಾರಗಳಿಗೆ ಚಿಕಿತ್ಸಾ ಸ್ವರೂಪದಲ್ಲಿ ಮಾರ್ಗದರ್ಶನ ಮಾಡುತಿದ್ದವು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಘಟನಾತ್ಮಕ ಸಂಸ್ಪರ್ಶವನ್ನು ನೀಡಿದ ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಅವರುಗಳು ಕೂಡ ನಮ್ಮ ಸರ್ಕಾರಗಳು ಕನ್ನಡ, ಕನ್ನಡಿಗ, ಕರ್ನಾಟಕದ ಕಾಳಜಿಯಿಂದ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆದವರಲ್ಲಿ ಪ್ರಮುಖರು. ರಹಮತ್ ತರೀಕೆರೆ, ರವಿ ಬೆಳಗೆರೆಯಂತಹ ಯುವ ಮನಸಿನ ಪ್ರೇರಕ ಬರಹಗಾರರ ಆಲೋಚನೆಯ ಕ್ರಮಗಳನ್ನು ನಾವಿಲ್ಲಿ ಮರೆಯುವಂತಿಲ್ಲ. ಆದರೆ ಇವರಲ್ಲಿ ಹಲವರು ಭೌತಿಕವಾಗಿ ಈಗ ನಮ್ಮೊಂದಿಗಿಲ್ಲ, ಇನ್ನಿರುವ ಕೆಲವರು ನಾನಾ ಕಾರಣಗಳಿಂದ ಸುಮ್ಮನಾದವರಂತೆ ಕಂಡುಬರುತ್ತಿದ್ದಾರೆ. ಅಥವಾ ಇವರ ಅಭಿಪ್ರಾಯಗಳನ್ನು ನಮ್ಮ ಸರ್ಕಾರದ ಬಹುತೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಕೇಳಿಸಿಕೊಳ್ಳುವಲ್ಲಿ ಮಿದುಳು ಮತ್ತು ಹೃದಯವನ್ನು ಕಳೆದುಕೊಂಡು ಹಣದ ಜಾಗತಿಕ ರಾಜಕಾರಣ ಲೋಕಕ್ಕೆ ಮರುಳಾಗಿದ್ದಾರೆ. ಆದ್ದರಿಂದ ಇತ್ತೀಚೆಗೆ ಕನ್ನಡ ಹಾಗೂ ಕರ್ನಾಟಕದ ಅಸ್ಮಿತೆಯನ್ನು ಮರೆಮಾಚುವ ಪ್ರಯತ್ನಗಳಿಗೆ ಪೂರಕವಾದ ವಾತಾವರಣಗಳು ಪ್ರಸ್ತುತ ಜಾಗತೀಕರಣದಲ್ಲಿ ಬೇಂದ್ರೆಯಜ್ಜನ ‘ಕುರುಡು ಕಾಂಚಾಣ’ ಪದ್ಯದ ವಿವರದಂತೆ ಕಾರ್ಯನಿರತವಾಗಿದೆಯೇನೋ ಎಂಬ ಗುಮಾನಿ ಕಾಡುತ್ತಿದೆ ಎಂಬುದಾಗಿ ಕನ್ನಡದ ಈ ಹೊತ್ತಿನ ಸೃಜನಶೀಲ ಸಾಹಿತ್ಯದ ವಿಶಿಷ್ಟ ಬರಹಗಳ ಲೇಖಕ ಡಾ.ಸಂಪತ್ ಬೆಟ್ಟಗೆರೆ ಅವರು ತಿಳಿಸಿದ್ದಾರೆ.

ಅವರು ಅವಿನ್ ಟಿವಿಯ ಸ್ಥಾನಿಕ ಸಂಪಾದಕ ಹಾಗೂ ಮೂಡಿಗೆರೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಅವರೊಂದಿಗೆ ಪ್ರಸ್ತುತ ಶೈಕ್ಷಣಿಕವಾಗಿ ಕನ್ನಡ ಎದುರಿಸುತ್ತಿರುವ ಎರಡು ಆತಂಕಗಳ ಬಗ್ಗೆ ಮಾತನಾಡುತ್ತ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಪ್ರಸ್ತುತ ಲೋಕಸಭಾ ಸಚಿವಾಲಯದ ‘ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಪ್ರೈಡ್)’ ಆನ್ ಲೈನ್ ನಲ್ಲಿ ಸಂಸದರು, ಶಾಸಕರು, ಅಧಿಕಾರಿಗಳಿಗೆ ತಲಾ ಆರು ವಿದೇಶಿ ಮತ್ತು ದೇಶಿಯ ಭಾಷೆಯನ್ನು ಕಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರಲ್ಲಿ ದೇಶಿಯ ಭಾಷೆಯಾಗಿ ಕನ್ನಡವನ್ನು ನಿರ್ಲಕ್ಷ್ಯಮಾಡಿ ಕೇವಲ ತಮಿಳು, ತೆಲುಗು, ಒಡಿಯಾ, ಬಂಗಾಳಿ, ಮರಾಠಿ, ಗುಜರಾತಿ ಭಾಷೆಗಳನ್ನು ಮಾತ್ರ ಪರಿಗಣಿಸಿ ಅಭ್ಯಾಸಕ್ಕೆ ಅನುವುಮಾಡಿಕೊಟ್ಟಿರುವುದೊಂದು. ಹಾಗಾದರೆ ಎರಡೂ ಸಾವಿರಗಳಿಗಿಂತಲೂ ಅತೀ ಹೆಚ್ಚಿನ ಪ್ರಾಚೀನವಾದ, ತಂತ್ರಜ್ಞಾನ, ವಿಜ್ಞಾನ ಹಾಗೂ ವರ್ತಮಾನದಲ್ಲೂ ಜಾಗತಿಕ ಮನ್ನಣೆ ಹೊಂದಿರುವ ಹಾಗೂ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನೂ ಪಡೆದಿರುವ, ಜಾನಪದ, ಕೃಷಿ, ಗ್ರಾಮೀಣ, ನಗರ ಸಮುದಾಯಗಳನ್ನೂ ಪ್ರತಿನಿಧಿಸುವ ಕನ್ನಡ ಭಾಷೆಯ ಕಲಿಕೆಯು ನಮ್ಮ ಶಾಸಕಾಂಗ ಹಾಗೂ ಕಾರ್ಯಾಂಗದವರಿಗೆ ಅವಶ್ಯಕತೆ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಸೌಲಭ್ಯ ನಮ್ಮ ನೆರೆಯ ತಮಿಳು, ತೆಲುಗಿಗೆ ಸಿಗುವುದಾದರೆ ನಮ್ಮ ಕನ್ನಡಕ್ಕೆ ಯಾಕಿಲ್ಲ? ಎಂಬುದನ್ನು ನಮ್ಮ ಕರ್ನಾಟಕದಿಂದ ನಾವು ಆರಿಸಿ ಕಳುಹಿಸಿರುವ ಸಂಸದರು, ಶಾಸಕರು, ಮಂತ್ರಿಗಳು ಕನ್ನಡತನದ ಸ್ವಾಭಿಮಾನದಿಂದ ಕೇಳಬೇಕಿತ್ತು. ಆದರೆ ಇವರಾಗಲಿ, ಕನ್ನಡ ಪ್ರೀತಿಯನ್ನು ಹೊಂದಿರುವ ಚಿಂತಕರಾಗಲಿ ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡದಿರುವುದು ನಿಜಕ್ಕೂ ವಿಷಾದನೀಯ ಎಂದು ಡಾ.ಸಂಪತ್ ಬೆಟ್ಟಗೆರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದರಂತೆ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣ ಕ್ರಮದಲ್ಲಿ ಅಳವಡಿಸಿಕೊಳ್ಳಲು ನಮ್ಮ ರಾಜ್ಯದಲ್ಲಿ ತ್ವರಿತವಾದ ಪ್ರಯತ್ನಗಳಾಗುತ್ತಿವೆ. ಆದರೆ ಇದರಲ್ಲಿ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಗುರುತರವಾದ ಆತಂಕದ ಶಿಫಾರಸ್ಸುವೊಂದು ಸದ್ದುಮಾಡುತ್ತಿದೆ. ಅಂದರೆ ಪ್ರಸ್ತುತ ಮೂರು ವರ್ಷಗಳ ಸ್ನಾತಕ ಪದವಿಯಲ್ಲಿದ್ದ ಎರಡು ವರ್ಷಗಳ ಪದವಿಯ ಕನ್ನಡ ಕಲಿಕೆಗೆ ಕಡಿತಗೊಳ್ಳುವ ಆತಂಕ ಬಂದೊದಗಿದೆ. ಅಂದರೆ ಮುಂದೆ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ನಾಲ್ಕು ವರ್ಷಗಳಾಗುವ ಈ ಪದವಿ ಕ್ರಮದಲ್ಲಿ ಕನ್ನಡವನ್ನು ಕೇವಲ ಎರಡು ಸೆಮಿಸ್ಟರ್ ಅಂದರೆ ಒಂದು ವರ್ಷಕ್ಕೆ ಸೀಮಿತಗೊಳಿಸಿರುವ ಶಿಫಾರಸ್ಸು ಅದು.
ಇದು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ವಿಸ್ತಾರವಾಗಿ ಭಾಷೆ, ಸಂಸ್ಕೃತಿ, ಜಾನಪದ, ವೈಜ್ಞಾನಿಕ, ವೈಚಾರಿಕತೆಯ ವಿಚಾರಗಳನ್ನು ಕನ್ನಡದ ಮೂಲಕವೂ ವಿದ್ಯಾರ್ಥಿಗಳಿಗೆ ಕಲಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಡಾ. ‌ಅಶ್ವತ್ಥ ನಾರಾಯಣ ಅವರು ಕನ್ನಡಪರ ಮನಸ್ಸುಗಳಿಗೆ ಭರವಸೆಯನ್ನು ನೀಡಿ ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯ ಇಲ್ಲ, ಕನ್ನಡವನ್ನು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಶಿಫಾರಸ್ಸಿನಂತೆ ಒಂದು ವರ್ಷಕ್ಕೆ ಮಾತ್ರ ಕಡಿತಮಾಡುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಹೇಳಿರುವುದು ಆಶಾದಾಯಕ ಎನಿಸಿದೆ ಎಂದು ಅಭಿಪ್ರಾಯಿಸಿದ ಲೇಖಕ ಡಾ. ಸಂಪತ್ ಬೆಟ್ಟಗೆರೆ ಅವರು ಇಂದಿನ ಯುವ ಸಮುದಾಯ ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಪರಿಕಲ್ಪನೆಯನ್ನು ಕುರಿತು ಹಿರಿಯರಿಂದ ಅರಿತು ಕನ್ನಡತನವನ್ನು ಕಾಪಾಡಿಕೊಂಡು ಬರುವುದು ಅತ್ಯಂತ ಜರೂರು ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author