day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಇಂದು ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ, ಅಂದರೆ 8ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಇಂದು ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ, ಅಂದರೆ 8ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

[9:48 am, 29/04/2021] ಮಗ್ಗಲಮಕ್ಕಿ ಗಣೇಶ್: ಇಂದು ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ, ಅಂದರೆ 8ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ

ಇಂತಹ ಅಪಾಯಕಾರಿ ಸಂದರ್ಭದಲ್ಲಿ ಸುಮಾರು 60-70 ಲಕ್ಷ ಜನ ಮತ ಚಲಾಯಿಸಲಿದ್ದಾರೆ. ಕೇವಲ ಮೂರೇ ದಿನದ ಹಿಂದೆ ಇಷ್ಟೇ ಸಂಖ್ಯೆಯ ಜನ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದ್ದಾರೆ.

ಚುನಾವಣಾ ಆಯೋಗ ಎನ್ನುವುದು ಈಗ ಸಂಪೂರ್ಣವಾಗಿ ಆಡಳಿತ ಪಕ್ಷದ ನಿಯತ್ತಿನ ನೌಕರ/ಸೇವಕ/ಸಾಕುಪ್ರಾಣಿ ಆಗಿಬಿಟ್ಟಿದೆ. ಆಡಳಿತ ಪಕ್ಷಕ್ಕೆ, ಅಂದರೆ ಈಗ ಸದ್ಯಕ್ಕೆ ಬಿಜೆಪಿ ಪಕ್ಷಕ್ಕೆ, ಅವರಿಗೆ ಅನುಕೂಲವಾದ ಸಮಯ ಮತ್ತು ಹಂತಗಳಲ್ಲಿ ಅದು ಚುನಾವಣೆ ಘೋಷಣೆ ಮಾಡುತ್ತಿದೆ ಮತ್ತು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಟಿ.ಎನ್.ಶೇಷನ್ನರು ಮುಖ್ಯ ಆಯುಕ್ತರಾಗುವ ಮೊದಲೂ ಸಹ ಕೇಂದ್ರ ಚುನಾವಣಾ ಆಯೋಗ ಈ ಮಟ್ಟಿಗೆ ದುರ್ಬಳಕೆ ಆಗಿರಲಿಲ್ಲವೇನೋ!?

ವಿಸ್ತೀರ್ಣದಲ್ಲಿ ತಮಿಳುನಾಡಿಗಿಂತ ಚಿಕ್ಕ ರಾಜ್ಯ ಪಶ್ಚಿಮ ಬಂಗಾಳ; ತಮಿಳುನಾಡಿನ ಮುಕ್ಕಾಲು ಭಾಗವೂ ಇಲ್ಲ (ಮತ್ತು ಕರ್ನಾಟಕದ ಅರ್ಧದಷ್ಟೂ ಇಲ್ಲ). ಜನಸಂಖ್ಯೆಯಲ್ಲಿ ಮಾತ್ರ ತಮಿಳುನಾಡಿಗಿಂತ 2 ಕೋಟಿ ಹೆಚ್ಚಿಗಿದೆ. ತಮಿಳುನಾಡಿನ ಒಟ್ಟು ಶಾಸಕರ ಸಂಖ್ಯೆ 234 ಇದ್ದರೆ, ಪಶ್ಚಿಮ ಬಂಗಾಳದ್ದು 294. ಇದೇ ತಿಂಗಳ ಆರಂಭದಲ್ಲಿ ತಮಿಳುನಾಡಿನ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಿತು. ಆದರೆ ಪಶ್ಚಿಮ ಬಂಗಾಳದ ವಿಧಾನಸಭೆಗೆ ಕಳೆದ ಮಾರ್ಚ್ ತಿಂಗಳಲ್ಲಿ ಆರಂಭವಾದ ಮೊದಲ ಹಂತದ ಚುನಾವಣೆ ಈಗ ಏಳು ಹಂತಗಳನ್ನು ಪೂರೈಸಿದ್ದು ಇಂದು ಅಂತಿಮ ಹಂತದ ಮತದಾನ ನಡೆಯುತ್ತಿದೆ.

ಯಾವ ಕಾರಣಕ್ಕಾಗಿ ಅಥವ ಯಾರ ಲಾಭಕ್ಕಾಗಿ ಅಲ್ಲಿ ಈ ತರಹಕ್ಕೆ ಇಷ್ಟೊಂದು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ? ಖಂಡಿತವಾಗಿಯೂ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಎಂದು ಯಾರು ಬೇಕಾದರೂ ಊಹಿಸಬಹುದು. ಹಾಗೆಯೇ, ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ, ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಯಾವುದೇ ಗಂಭೀರ ಕ್ರಮಗಳನ್ನು ಮುಂಜಾಗ್ರತೆಯಿಂದ ಕೈಗೊಳ್ಳಲೇ ಇಲ್ಲ. ದೇಶದ ಪ್ರಧಾನಿ ಮತ್ತು ಕೇಂದ್ರದ ಗೃಹ ಸಚಿವರು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮೇಲೆ ಜಿದ್ದಿಗೆ ಬಿದ್ದು ಅತ್ಯಂತ ಬೇಜವಾಬ್ದಾರಿಯಿಂದ ಜನಸಾಮಾನ್ಯರ ಜೀವವನ್ನು ಲೆಕ್ಕಿಸದೆ ಲಕ್ಷಾಂತರ ಜನರನ್ನು ಸೇರಿಸಿ ಹತ್ತಾರು ಸಭೆ, ರ್ಯಾಲಿಗಳನ್ನು ನಡೆಸಿ ಪ್ರಚಾರ ಮಾಡಿರುವುದನ್ನು ಚುನಾವಣಾ ಆಯೋಗ ಅದು ತನಗೆ ಸಂಬಂಧವೇಪಡದ ವಿಷಯ ಎಂಬಂತೆ ವರ್ತಿಸುತ್ತಿದೆ.

ದೇಶದಲ್ಲಿ ಯಾವಾಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನಿವೃತ್ತರಾದ ತಕ್ಷಣ ಒಂದು ರಾಜ್ಯದ ರಾಜ್ಯಪಾಲನಾಗಿ ನೇಮಕವಾದರೋ, ಮತ್ತೊಬ್ಬ CJI ಸಹ ನಿವೃತ್ತರಾದ ತಕ್ಷಣ ರಾಜ್ಯಸಭೆ ಸದಸ್ಯರಾಗಿ ನೇಮಿಸಲ್ಪಟ್ಟರೋ, ಅಲ್ಲಿಗೆ ನಮ್ಮ ದೇಶದ ನ್ಯಾಯಾಂಗವೂ ಎಷ್ಟು ರಾಜಿಯಾಗಿದೆ, ಭ್ರಷ್ಟವಾಗಿದೆ ಮತ್ತು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಕಳೆದುಕೊಂಡಿದೆ ಎಂದು ಊಹಿಸಲು ಸಾಮಾನ್ಯ ಪ್ರಜ್ಞೆಗಿಂತ ಹೆಚ್ಚಿನ ಬುದ್ದಿವಂತಿಕೆ ಬೇಕಾಗಿಲ್ಲ. ಹಾಗಿರುವಾಗ, ನೇರ ರಾಜಕೀಯ ನೇಮಕಾತಿ ಆಗಿರುವ ಚುನಾವಣಾ ಆಯೋಗದ ಆಯುಕ್ತರುಗಳು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಬಯಸುವುದು ಮೂರ್ಖತನ.

ಈಗ ಕೊರೋನಾವೈರಸ್ ಸೃಷ್ಟಿಸಿರುವ ತಲ್ಲಣಗಳು ಮತ್ತು ದುರಂತಗಳು ನಮ್ಮ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಅಗತ್ಯತೆಯನ್ನು ಎತ್ತಿ ತೋರಿಸುತ್ತಿವೆ. ಹಾಗೆಯೇ ನಮ್ಮ ಒಟ್ಟಾರೆ ರಾಜಕೀಯ ನಾಯಕರುಗಳ ಅಯೋಗ್ಯತೆ ಮತ್ತು ದಿವಾಳಿತನವನ್ನು ಅನಾವರಣಗೊಳಿಸಿದೆ.

 

BJP and its leaders are alien to both reasoning and science. ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರುಗಳಿಗೆ ವಿಜ್ಞಾನ ಮತ್ತು ವೈಚಾರಿಕತೆಗಳೆರಡೂ ಅಪಥ್ಯ. ಅದರ ಫಲವನ್ನು ದೇಶ ಇಂದು ಉಣ್ಣುತ್ತಿದೆ. ಇತಿಹಾಸವನ್ನು ಇಂದಿನ ಸಂದರ್ಭಕ್ಕೆ ಹೋಲಿಸಿಕೊಂಡು ಅರ್ಥೈಸುವುದು ಮತ್ತು ದ್ವೇಷಸಾಧನೆ; ಅವರಿಗೆ ಇವಷ್ಟೇ ಮುಖ್ಯವೇ ಹೊರತು ಭವಿಷ್ಯ ಮತ್ತು ಉತ್ತಮ ಸಮಾಜ ನಿರ್ಮಾಣವಲ್ಲ. ಇಲ್ಲದಿದ್ದರೆ ಇಂತಹ ದುರಂತದ ಸಂದರ್ಭದಲ್ಲಿಯಾದರೂ ಅವರುಗಳು ಜನಪರ ಕಾಳಜಿಯಿಂದ ಆಡಳಿತದಲ್ಲಿ ದಕ್ಷತೆ ತೋರಿಸುತ್ತಿದ್ದರು, ಜವಾಬ್ದಾರಿಯಿಂದ ವರ್ತಿಸುತ್ತಿದ್ದರು, ಮತ್ತು ಎಲ್ಲಾ ರೀತಿಯ ಭ್ರಷ್ಟಾಚಾರವನ್ನು ತಡೆಯುತ್ತಿದ್ದರು.

ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಮತ್ತು ಪಕ್ಷಾತೀತವಾದ ಭ್ರಷ್ಟಾಚಾರ ಯಾವೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತದೆ ಹಾಗೂ ಎಂತೆಂತಹ ಅಯೋಗ್ಯರನ್ನು ನಾಯಕರನ್ನಾಗಿ ಮಾಡಿ ಸಮಾಜವನ್ನೇ ಅಪಾಯಕ್ಕೆ ಒಡ್ಡುತ್ತದೆ ಎಂದು ಈಗಲಾದರೂ ಜನರಿಗೆ ಅರಿವಾಗಿದೆ ಎಂದು ಭಾವಿಸುತ್ತೇನೆ. ಭ್ರಷ್ಟರನ್ನು ಮತ್ತು ಅಯೋಗ್ಯರನ್ನು ಜನ ಇನ್ನು ಮುಂದಕ್ಕಾದರೂ ತಿರಸ್ಕರಿಸಬೇಕು. ಅದೇ ನಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ; ದೇಶದ ಸುರಕ್ಷತೆಗೆ ನಾವು ಮಾಡಬೇಕಾದ ಕರ್ತವ್ಯ.

ಹೊಣೆಗೇಡಿ ಮತ್ತು ಸ್ವಾರ್ಥಿ, ಸ್ವಕೇಂದ್ರಿತ ರಾಜಕಾರಣಿಗಳ ತರಹ ಸಮುದಾಯವೂ ವರ್ತಿಸಬಾರದು. ಈಗ ಎದುರಾಗಿರುವ ಸಾಂಕ್ರಾಮಿಕ ರೋಗದಿಂದ ಬಚಾವಾಗಲು ಜನರು ಎಚ್ಚರ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಯಾವುದೇ ರೀತಿಯಲ್ಲಿಯೂ ಭ್ರಷ್ಟ ರಾಜಕಾರಣಿಗಳನ್ನು ಅನುಸರಿಸಕೂಡದು.

ಭಾರತ ಇಂದು ಮಹಾ ಸಂಕಷ್ಟವನ್ನು ಎದುರಿಸುತ್ತಿದೆ ಮತ್ತು ಇದು ಇನ್ನೂ ಕೆಲವು ವರ್ಷಗಳ ಕಾಲ ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಯುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದೇ ಯುದ್ಧ, ಕ್ಷಾಮ, ಅಥವ ನೈಸರ್ಗಿಕ ವಿಪತ್ತುಗಳು ಇಷ್ಟೊಂದು ದೀರ್ಘಕಾಲ ಇಷ್ಟೊಂದು ಸಾವುನೋವುನಷ್ಟಗಳನ್ನು ಉಂಟು ಮಾಡಿರಲಿಲ್ಲ.

ಒಂದು ಕಡೆ ಮಹಾ ವಿಪತ್ತು, ಇನ್ನೊಂದೆಡೆ ರಾಕ್ಷಸ ರಾಜಕಾರಣ. ಮಹಾತ್ಮನ ಸತ್ಯ ಮತ್ತು ಅಹಿಂಸೆಯ ಸಂದೇಶ ಹಾಗೂ ಸರಳ ಮತ್ತು ನಿಸರ್ಗಸ್ನೇಹಿ ಬದುಕು ಮಾತ್ರ ಈ ದೇಶವನ್ನು ಸದ್ಯದ ಕುವ್ಯವಸ್ಥೆ ಮತ್ತು ಭವಿಷ್ಯದ ಅರಾಜಕತೆಯಿಂದ ಕಾಪಾಡಬಲ್ಲುದು.

  • ರವಿ ಕೃಷ್ಣಾರೆಡ್ಡಿ

ರಾಜ್ಯಾಧ್ಯಕ್ಷರು ಕೆ.ಆರ್.ಎಸ್ ಪಕ್ಷ

Career | job

Navachaithanya Old Age Home

 

About Author