लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಚೆಕ್‌ ಕೇಸ್ ವಿಚಾರದಲ್ಲಿ ತನಗೆ ‎ಮೋಸವಾಗಿದೆ: ಎಂ.ಪಿ.ಕುಮಾರಸ್ವಾಮಿ….

1 min read

‎ಚೆಕ್‌ ಕೇಸ್ ವಿಚಾರದಲ್ಲಿ ತನಗೆ
‎ಮೋಸವಾಗಿದೆ: ಎಂ.ಪಿ.ಕುಮಾರಸ್ವಾಮಿ.

‎ಮೂಡಿಗೆರೆ: ಚೆಕ್ ಕೇಸ್ ವಿಚಾರದಲ್ಲಿ ತನಗೆ ಮೋಸ ಮಾಡಲಾಗಿದೆ. 2018 ರಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತನ್ನ ಒಡನಾಡಿಯಾಗಿದ್ದ ಮಿತ್ರನೋರ್ವ ತನ್ನಿಂದ ಹಣ ಪಡೆಯುವ ದೃಷ್ಟಿಯಿಂದ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

‎ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಆಕ್ಸಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಆ ಖಾತೆಯಲ್ಲಿ ಯಾವುದೇ ವ್ಯವಹಾರ ಮಾಡುತ್ತಿರಲಿಲ್ಲ. ತಾನು ಸಹಿ ಹಾಕಿದ್ದ 8 ಚಿಕ್ಕನ್ನು ತನಗೆ ತಿಳಿಯದೇ 2018 ರಲ್ಲಿ ಆ ವ್ಯಕ್ತಿ ಕೊಂಡೊಯ್ದಿದ್ದಾರೆ. ಬಳಿಕ ಆ ವೃಕ್ತಿಯ ಆಕೌಂಟ್‌ ನಿಂದ ತನಗೆ ಹಣ ಕೊಟ್ಟಂತೆ ಮಾಡಲು ಹಾಗೂ ಸಾಕ್ಷಿ ಹೊಂದಿಸಿಕೊಳ್ಳಲು ತನ್ನ ಖಾತೆಗೆ 68 ಲಕ್ಷ ರೂ ಜಮಾ ಮಾಡಿದ್ದಾರೆ. ನಂತರ ಅವರ ಬಳಿಯಿದ್ದ ನನ್ನ 8.ಚೆಕ್ಕಲ್ಲಿ ಕೆಲ ಚೆಕ್ ಬಳಸಿಕೊಂಡು ಅವರ ಸಂಬಂಧಿಕರಿಂದ ಹಣ ಡ್ರಾ ಮಾಡಿದ್ದಾರೆ.

‎ತನ್ನಿಂದ ಹಣ ಪಡೆಯಲು ಬಾಕಿ ಚೆಕ್ ಬಳಸಿ ಚೆಕ್‌ ಬೌನ್ಸ್ ಕೇಸ್ ಹಾಕಿದ್ದಾರೆಂದು ಹೇಳಿದರು.

‎ಈ ವಿಚಾರ ತನಗೆ ಕೋರ್ಟ್ನಿಂದ ನೋಟೀಸು ಬರುವವರೆಗೂ ತಿಳಿದಿರಲಿಲ್ಲ. ನಂತರ ಕಾನೂನು ಹೋರಾಟ ನಡೆಸಲು ಮುಂದಾದೆ. ಇದಕ್ಕೆ ಕಾರಣರಾದ ಆ ವ್ಯಕ್ತಿಯು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರು ಬೇರೆಯವರ ವಿರುದ್ಧವೂ ಅನೇಕ ಚೆಕ್ ಕೇಸ್ ಪ್ರಕರಣ ಹಾಕಿರುವ ಬಗ್ಗೆ ಮಾಹಿತಿ ದೊರಕಿದೆ. ಮುಖ್ಯವಾಗಿ ತನ್ನ ಖಾತೆಯಿಂದ 5 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡುವಾಗ ಬ್ಯಾಂಕ್‌ ನವರು ತನ್ನ ಒಪ್ಪಿಗೆ ಪಡೆಯದೇ ನೀಡಿದ್ದಾರೆ. ಅಲ್ಲದೇ ತನ್ನ ಖಾತೆಯಿಂದ ಹಣ ಪಡೆದವರು ಅವರ ಸಂಬಂಧಿಕರೆಂದು ತಿಳಿದಿರಲಿಲ್ಲ. ಈ ಎಲ್ಲದರ ಬಗ್ಗೆ ಪೊಲೀಸ್ ತನಿಖೆ ನಡೆಸಲು ದೂರು ನೀಡಿದ್ದೇನೆ. ಜತೆಗೆ ತನ್ನ ಖಾತೆಯಿಂದ ಹಣ ಪಡೆದವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed