ವೈಚಾರಿಕವಾಗಿ ನೂತನ ಮನೆಯ ಗೃಹಪ್ರವೇಶ”….
1 min read
”ವೈಚಾರಿಕವಾಗಿ ನೂತನ ಮನೆಯ ಗೃಹಪ್ರವೇಶ”
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಹುಲ್ಲೆ ಮನೆ ಗ್ರಾಮದ ಉಮೇಶ್ ರುಕ್ಮಿಣಿ ದಂಪತಿಗಳು ಕಷ್ಟಪಟ್ಟು ಇಷ್ಟಪಟ್ಟು ಕಟ್ಟಿದ ನೂತನ ಮನೆಯ ಗೃಹಪ್ರವೇಶವನ್ನು ಪುರೋಹಿತಶಾಹಿಯ ಗೊಡ್ಡು ಸಂಪ್ರದಾಯಗಳನ್ನು ಧಿಕ್ಕಾರಿಸಿ ತಮ್ಮ ಮುದ್ದಿನ ಮಕ್ಕಳ ಮೂಲಕ ಉದ್ಘಾಟಿಸಿ ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವೈಚಾರಿಕ ಅಂಶಗಳುಳ್ಳ ಪ್ರತಿಜ್ಞಾವಿಧಿಯನ್ನು ಹೇಳುವ ಮೂಲಕ ದೇಶದಲ್ಲಿ ಈ ಹೊತ್ತಿನಲ್ಲಿ ಮೌಡ್ಯ ಕಂದಾಚಾರ ಅಜ್ಞಾನ ತುಂಬಿ ತುಳುಕುತ್ತಿರುವ ಈ ಸಂದರ್ಭದಲ್ಲಿ ಪುರೋಹಿತಶಾಹಿಯ ಯಾವುದೇ ಆಚರಣೆಯನ್ನು ಮಾಡದೆ ಹೊಸ ಮನೆ ಅಂಗಳದಲ್ಲಿಯೇ ಬಾಡೂಟವನ್ನು ಮಾಡಿಸಿ ನೆರೆದಿದ್ದ ಎಲ್ಲಾ ನೆಂಟರಿಷ್ಟರಿಗೆ ಬಡಿಸಿ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪ್ರಗತಿಪರ ಚಿಂತಕರಾದ ಡಾ. ಹರೀಶ್ ನಲ್ಕೆ ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿ ವೈಚಾರಿಕತೆಯ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸುರೇಶ್ ಹುಲ್ಲೆ ಮನೆ, ಕುಮಾರ್ ಉದುಸೆ, ರಮೇಶ್ ಗುಪ್ತ ಶೆಟ್ಟಿ ಹಳ್ಳಿ ಮತ್ತು ರಮೇಶ್ ಹುಲ್ಲೇಮನೆ ಮುಂತಾದವರಿದ್ಧರು..
ವರದಿ….
ಮಗ.

