लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮದುವೆಯ ಹಿಂದಿನ ರಾತ್ರಿಯೂ ಸಹ ಡಾ. ರಾಜ್‌ಕುಮಾರ್ ಅವರು ಹೊಸಪೇಟೆ ಕ್ಯಾಂಪ್‌ನಲ್ಲಿ ಬಣ್ಣ ಹಚ್ಚಿದ್ದರು. …

1 min read

ಮದುವೆಯ ಹಿಂದಿನ ರಾತ್ರಿಯೂ ಸಹ ಡಾ. ರಾಜ್‌ಕುಮಾರ್ ಅವರು ಹೊಸಪೇಟೆ ಕ್ಯಾಂಪ್‌ನಲ್ಲಿ ಬಣ್ಣ ಹಚ್ಚಿದ್ದರು. ಅಷ್ಟು ಕೆಲಸದ ಮಧ್ಯೆಯೇ ಮದುವೆ ಸಮಾರಂಭಕ್ಕೆ ಆಗಮಿಸಿದ ಅಣ್ಣಾವ್ರು ಕಲೆಯ ಮೇಲಿನ ತಮ್ಮ ನಿಷ್ಠೆಯನ್ನು ತೋರಿಸಿದ್ದರು.

ಮದುವೆಯ ದಿನ ಬೆಳಗ್ಗೆ 3.30ಕ್ಕೆ ತಾಯಿ, ಸೋದರರು ಹಾಗೂ ಸೋದರಿಯರು ರಾಣಪ್ಪನ ಚೌಲ್ಟ್ರಿ ತಲುಪಿದರು. ಕಲ್ಯಾಣ ಮಂಟಪ ಸೇರಿದ ಬಳಿಕವೇ ಅಣ್ಣಾವ್ರು ಬಣ್ಣ ಅಳಿಸಿಕೊಂಡರು. ನಂಜನಗೂಡಿನ ಗೌರಿ ಘಟ್ಟದ ಬೀದಿಯಲ್ಲಿರುವ ರಾಣಪ್ಪ ಚೌಲ್ಟ್ರಿ ಇಂದಿಗೂ ಆ ಐತಿಹಾಸಿಕ ನೆನಪನ್ನು ಹೊತ್ತಿದೆ.

ಆ ಸಮಯದಲ್ಲಿ ಕಲ್ಯಾಣ ಮಂಟಪದ ಬಾಡಿಗೆ ಕೇವಲ 60 ರೂ. ಮಾತ್ರ. ಇಂದು ಅದೇ ಮಂಟಪದ ಬಾಡಿಗೆ ದಿನಕ್ಕೆ 10 ಸಾವಿರ ರೂ. ಆಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಮದುವೆಯ ಒಂದು ಭಾವಚಿತ್ರವೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಬಳಿ ಇಲ್ಲ.

ಮದುವೆಯಂದು ಭಾವಗೀತೆ ಮತ್ತು ಭಕ್ತಿಗೀತೆಗಳನ್ನು ಹಾಡಲು ನಾಗರತ್ನಮ್ಮ ಅವರನ್ನು ಅಪ್ಪಾಜಿಗೌಡರು ವಿಶೇಷವಾಗಿ ಕರೆಸಿದ್ದರು.

ಅಣ್ಣಾವ್ರ ಸರಳತೆ, ಕಲೆಯ ಮೇಲಿನ ಪ್ರೀತಿ ಮತ್ತು ಜೀವನದ ಮೌಲ್ಯಗಳನ್ನು ಹೇಳುವ ಅಪರೂಪದ ಘಟನೆ ಇದು 🙏

#. ಢಾ. ರಾಜಕುಮಾರ್ 🙏🙏🙏

⚠ ಇಲ್ಲಿ ಪ್ರಸ್ತುತಪಡಿಸಲಾದ ವಿಷಯವು ಸುದ್ದಿ ವರದಿ ಮತ್ತು ಜಾಗೃತಿಗಾಗಿ ಮಾತ್ರ. ಇದು ಯಾವುದೇ ಹಾನಿಕಾರಕ ಕ್ರಿಯೆಗಳನ್ನು ಅನುಮೋದಿಸುವುದಿಲ್ಲ ಅಥವಾ ವೈಭವೀಕರಿಸುವುದಿಲ್ಲ. ವಾಸ್ತವಿಕ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಒದಗಿಸುವುದು ನಮ್ಮ ಗುರಿಯಾಗಿದೆ. ಒದಗಿಸಲಾದ ಮಾಹಿತಿಯು ಮೂರನೇ ವ್ಯಕ್ತಿಯ ಸುದ್ದಿ ಮೂಲಗಳಿಂದ ಬಂದಿದೆ ಮತ್ತು ಅದು ನಮಗೆ ಸೇರಿಲ್ಲ. ಇದರ ಬಳಕೆಯಿಂದ ಉಂಟಾಗಬಹುದಾದ ಯಾವುದೇ ಸಮಸ್ಯೆಗಳು ಅಥವಾ ಅನಾನುಕೂಲತೆಗೆ ನಾವು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ⚠🙏🙏🙏. ಢಾ. ರಾಜಕುಮಾರ್.

 

ರವಿಕುಮಾರ್.  ಬೆಂಗಳೂರು.

About Author

Leave a Reply

Your email address will not be published. Required fields are marked *

You may have missed