लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೇರಳ ಚುನಾವಣೆ: ಉಸ್ತುವಾರಿಯಾಗಿ ಮೂಡಿಗೆರೆಯ ಸಂದೀಪ್ ಬೆಟ್ಟಗೆರೆ ನೇಮಕ….

1 min read

ಕೇರಳ ಚುನಾವಣೆ: ಉಸ್ತುವಾರಿಯಾಗಿ ಮೂಡಿಗೆರೆಯ ಸಂದೀಪ್ ಬೆಟ್ಟಗೆರೆ ನೇಮಕ

‎ಚಿಕ್ಕಮಗಳೂರು:- ಕೇರಳ ರಾಜ್ಯ ಚುನಾವಣೆಯ ಉಸ್ತುವಾರಿಯಾಗಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಅವರನ್ನು ನೇಮಕ ಮಾಡಲಾಗಿದ್ದು, ಈ ನೇಮಕವು ಕಾಂಗ್ರೆಸ್ ಪಕ್ಷದ ವಿಶ್ವಾಸ, |ನಾಯಕತ್ವದ ಸಾಮರ್ಥ ಮತ್ತು ಸಂಘಟನೆಗೆ ಸಲ್ಲಿಸಿದ್ದ  ಸೇವೆಗೆ ದೊರೆತ ಗೌರವವಾಗಿದೆ.

‎ಕೇರಳ ರಾಜ್ಯವು ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯವಾಗಿದ್ದು, ಅಲ್ಲಿ ನಡೆಯುವ ಚುನಾವಣೆಗಳು ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಭಾವ ಬೀರುತ್ತವೆ. ಉಸ್ತುವಾರಿಯಾಗಿ ನೇಮಕಗೊಂಡಿರುವ ಬಿ.ಎಂ.ಸಂದೀಪ್ ಅವರು ಈಗಾಗಲೇ 20 ರಾಜ್ಯಗಳಲ್ಲಿ ಪಕ್ಷದ ವಿವಿಧ ಸಂಘಟನಾತ್ಮಕ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

‎ಮುಂದಿನ ದಿನಗಳಲ್ಲಿ ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಗಮನಿಸಿ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

About Author

Leave a Reply

Your email address will not be published. Required fields are marked *

You may have missed