ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿ ಯಾದ ದಿನ “.
1 min read
“ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿ ಯಾದ ದಿನ “. 💐💐💐💐💐💐💐💐💐
ಪುರುಷ ಸಮಾಜದ ಸಿದ್ದ ಮಾದರಿಯನ್ನು ಮೀರಿ ದಿನಾಂಕ 24. 01. 1966 ರಂದು ಶ್ರೀಮತಿ ಇಂದಿರಾ ಗಾಂಧಿಯವರು ಭಾರತದ ಪ್ರಥಮ ಮಹಿಳಾ
ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವಾಗಿದೆ.
ಹೆಣ್ಣು ಮಕ್ಕಳು ಮನಸು ಮಾಡಿದರೆ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟ ಪ್ರಪ್ರಥಮ ಮಹಿಳೆ ಅವರು ಪ್ರಧಾನಿಯಾದ ಸಂದರ್ಭದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದವರು ಆ ಮೂಲಕ ತಾನು ಅಧಿಕಾರ ಸ್ವೀಕರಿಸದ ದಿನವನ್ನು ವಿಶೇಷವಾಗಿ ಭಾರತದ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಲೆಂದು ಆ ದಿನವನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಘೋಷಿಸುತ್ತಾರೆ…
ಜಾತಿ ಯಾವುದೇ ಇರಲಿ, ಪಕ್ಷ ಯಾವುದೇ ಇರಲಿ ,ಲಿಂಗ ಯಾವುದೇ ಇರಲಿ ಆದರೆ ಅವರು ಮಾಡಿದ ಕೆಲಸ ಭಾರತದ ಅಭಿವೃದ್ಧಿಗೆ ಮುನ್ನುಡಿಯಂತಿತ್ತು.
1975ರಲ್ಲಿ ರಾಕೆಟ್ ಉಡಾವಣೆ ಮಾಡಿದ ಸಂದರ್ಭದಲ್ಲಿ ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡಿತು ವಿಜ್ಞಾನ ತಂತ್ರಜ್ಞಾನಕ್ಕೆ ಇಂದಿರಾಗಾಂಧಿಯವರು ಹಾಕಿದ ಅಡಿಪಾಯ ಇಂದು ಭಾರತ ತಂತ್ರಜ್ಞಾನದಲ್ಲಿ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಬೆಳದಿದೆ . ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಸೇರಿಸಿದವರಲ್ಲದೆ ಅನೇಕ ಜನಪರ ಜೀವಪರ ಕೆಲಸಗಳನ್ನು ಮಾಡಿದವರು ಅಂತಹ ದಿಮಂತ ಪ್ರಧಾನಿ ಅಧಿಕಾರ ಸ್ವೀಕರಿಸಿದ ದಿನವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.
✍️ ಡಾ. ಹರೀಶ್ ನಲ್ಕೆ

