लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಯಮಾಲಿನಿ ಗೊತ್ತಲ್ವಾ? ಸುಮಾರು 20 ವರ್ಷದಷ್ಟು ಕಾಲ ಕ್ಯಾಬರೆ ನಟಿಯಾಗಿ, ಬ್ಯಾಡ್ ಗರ್ಲಾಗಿ 500 ಫಿಲ್ಮುಗಳಲ್ಲಿ ನಟಿಸಿದರು. ಅಕ್ಕ ಜ್ಯೋತಿಲಕ್ಷ್ಮಿಯ ತರವೇ 13-14ರ ವಯಸ್ಸಿನಲ್ಲಿ ಕುಟುಂಬದ ನಿರ್ವಹಣೆಗೆಂದು ಕ್ಯಾಬರೆ ಡ್ಯಾನ್ಸಿಗಿಳಿದರು.

ಸಿನೆಮಾದಲ್ಲಿ ಗುಡ್ ಗರ್ಲಾಗಿ, ಹೀರೋಯಿನ್ನಾಗಿ ನಟಿಸುವವರದ್ದು ಏನಾದರೊಂದು ಗಾಸಿಪ್ ಇರುವಾಗ, ಯಾವ ಗಾಸಿಪ್ಪೂ, ವಿವಾದವೂ ಇಲ್ಲದೆ ಜಯಮಾಲಿನಿ 500 ಫಿಲ್ಮುಗಳಲ್ಲಿ ಕುಣಿದಿದ್ದು, ಅದೂ ಆ ಕಾಲದಲ್ಲಿ ಅಷ್ಟು ಮಾದಕವಾಗಿ, ಸಣ್ಣ ಮಾತಲ್ಲ.

ಆಕೆಗೊಬ್ಬ ದೊಡ್ಡ ಅಭಿಮಾನಿ ಇದ್ದರು. ಚೆನ್ನೈನ ಪೋಲೀಸ್ ಇನ್ಸಪೆಕ್ಟರ್ ಪಾರ್ಥೀಬನ್. ಬಹಳ ಇಷ್ಟ ಪಟ್ಟು ಇವರಿಗೆ ಪ್ರೊಪೋಸ್ ಮಾಡಿದರು. ಇಬ್ಬರೂ ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾರೆ. ಮಗನಿಗೆ ಮದುವೆಯಾಗಿದೆ. ಹೆಣ್ಣುಮಕ್ಕಳನ್ನು ಮೀಡಿಯಾದಿಂದ ದೂರ ಇಟ್ಟು, ಯಾವುದೇ ಕಾರಣಕ್ಕೂ ಸಿನೆಮಾಗೆ ಬರಲು ಬಿಟ್ಟಿಲ್ಲ. ಚೆನ್ನೈಯಲ್ಲಿ ಜಯಮಾಲಿನಿ ಸುಖವಾಗಿದ್ದಾರೆ.

ಇತ್ತೀಚೆಗೆ ಇವರ ಬಗ್ಗೆ ಒಂದಷ್ಟು ಸರ್ಚ್ ಮಾಡಿದೆ. ಬಹಳ ಖುಷಿಯಾಯ್ತು. ಜಯಮಾಲಿನಿ ಈಗಲೂ ಅದೆಷ್ಟು ಗಾರ್ಜಸ್ ಆಗಿದ್ದಾರೆ! ಎಷ್ಟು ಎಲಿಗೆಂಟ್!

ಸಿನೆಮಾಗಳಲ್ಲಿ ಹೀರೋಯಿನ್ನುಗಳಾಗಿ ನಟಿಸಿ ದುರಂತದ ಬದುಕನ್ನು ಎದುರಿಸುವವರೇ ಹೆಚ್ಚಾಗಿರುವಾಗ ಜಯಮಾಲಿನಿ ಬಹಳ ಇಷ್ಟವಾದರು.

About Author

Leave a Reply

Your email address will not be published. Required fields are marked *

You may have missed