लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸಮಾಜದ ಪರಿವರ್ತನೆ ಶಿಕ್ಷಣದಿಂದ ಮಾತ್ರ ಸಾಧ್ಯ ‎ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಬಣಕಲ್ ನ 39ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ…….

1 min read

‎ಸಮಾಜದ ಪರಿವರ್ತನೆ ಶಿಕ್ಷಣದಿಂದ ಮಾತ್ರ ಸಾಧ್ಯ

ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಬಣಕಲ್ ನ 39ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ದಿನಾಂಕ 27:12:2025 ಶನಿವಾರ ವಿಜೃಂಭಣೆಯಿಂದ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮೂಡಿಗೆರೆ ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್ ಇದರ ನಿರ್ದೇಶಕರಾದ ಅನುಕುಮಾರ್ ಪಿ.ಜಿ ಮಾತನಾಡಿ ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ನಿವಾರಣೆಗೆ ಸ್ಪಂದನೆ ಸಿಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಏಕೆಂದರೆ  ಶಿಕ್ಷಣ ನೀಡುವ ಪ್ರತಿಯೊಂದು ವಿದ್ಯಾ ಸಂಸ್ಥೆ ತನ್ನ ಜವಾಬ್ದಾರಿಯನ್ನು ಅರಿತು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕಿದೆ. ವಿದ್ಯಾ ಭಾರತಿ ವಿದ್ಯಾಸಂಸ್ಥೆಯು ಇಂತಹ ಕಾರ್ಯದಲ್ಲಿ ಒಂದು ಮಾದರಿ ವಿದ್ಯಾಸಂಸ್ಥೆಯಾಗಿದೆ ಎಂದರು.
‎ಸಹಕಾರ ಭಾರತಿ ಇದರ ಅಧ್ಯಕ್ಷರಾದ ಕೆ.ಟಿ ಸತೀಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸಿನೊಂದಿಗೆ ಸಾಗಬೇಕು ಜೊತೆಗೆ ಅದರ ಸಾಧನೆಗೆ ಪರಿಪೂರ್ಣವಾದ ಯೋಜನೆಗಳನ್ನು ರೂಪಿಸಿಕೊಂಡರೆ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಬಹುದು ಎಂದರು.
ಸಮಾರಂಭದಲ್ಲಿ ಬಣಕಲ್ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಝರೀನಾ ಧ್ವಜಾರೋಹಣ ನೆರವೇರಿಸಿದರು.ಮತ್ತು ಕಾಫಿಬೆಳೆಗಾರರಾದ ಬಿ.ಎನ್. ಶಮಂತ್ ಬಣಕಲ್. ಬಿ.ಎಸ್.ಮೋಹನ್ ಬಾಳೂರು. ಎಸ್.ಎನ್.ಸಂತೋಷ್ ಬಿಡಿಕೆ.ಶಾಲೆಯ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಾದ ಇಂದ್ರಜಿತ್ .ಬಿ.ಜಿ  ಕುಮಾರಿ ಸ್ಪಂದನ.ಎಂ.ಜೆ ಅತಿಥಿಗಳಾಗಿ ಭಾಗವಹಿಸಿದ್ದರು.
‎ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಈ.ಸುಬ್ರಾಯಗೌಡ . ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ. ನಿರ್ದೇಶಕರಾದ ಬಿ.ರಮೇಶ್. ಬಿ.ಬಿ.ಮಂಜುನಾಥ್.ಮತ್ತು  ಸ್ಥಳೀಯ ಮುಖಂಡರು ವಿವಿಧ ಶಾಲೆಗಳ ಅಧ್ಯಕ್ಷರು ,ಮುಖ್ಯ ಶಿಕ್ಷಕರು, ಶಾಲಾ ಪೋಷಕರು ಉಪಸ್ಥಿತರಿದ್ದರು .ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಟಿ.ಆರ್ ಶಾಲಾ ವರದಿಯನ್ನು ಮಂಡಿಸಿದರು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗರಾಜು ಸರ್ವರನ್ನು ಸ್ವಾಗತಿಸಿದರು.ಶಾಲಾ ಉಪಮುಖ್ಯ ಶಿಕ್ಷಕ ವಸಂತಹಾರಗೂಡು ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿ ಕುಮಾರಿ ಪದ್ಮಶ್ರೀ ಸರ್ವರನ್ನು ವಂದಿಸಿದರು.

‎    ವಿಜೃಂಭಣೆಯಿಂದ ನಡೆದ ಸಮಾರಂಭದಲ್ಲಿ ಶಾಲಾ ಶಿಕ್ಷಕರಾದ ಕುಸುಮ .ಎಸ್ ಶೆಟ್ಟಿ .ಭಕ್ತೇಶ್ .ಶೇಖರಪ್ಪ.ವಿಜಯೇಂದ್ರ.ಶ್ವೇತಾ.ಸಂಗೀತ.ಕನ್ನಿಕಾ.ಗೀತಾ.ಲೋಕೇಶ್.ಪ್ರತಾಪ್.ಲಿಂಗರಾಜು.ಕಮಲಮ್ಮ.ಅಶ್ವಿತಾ.ಪೂಜಾ.ಆಶಾ.ಅನುಷ.ಆರೋಗ್ಯವಾಣಿ.ಪ್ರೀತಿ.ಚಂದನ.ಸುಶ್ಮಿತಾ.ನೃತ್ಯ ಶಿಕ್ಷಕ ಕಿಶೋರ್ ಶಾಲಾ ಬೋಧಕೇತರ ಸಿಬ್ಬಂದಿ.ಅಡುಗೆ ಸಿಬ್ಬಂದಿ.ಹಳೇ ವಿದ್ಯಾರ್ಥಿಗಳು.ಉಪಸ್ಥಿತರಿದ್ದರು.
‎   ವೇದಿಕೆ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿತು.

About Author

Leave a Reply

Your email address will not be published. Required fields are marked *

You may have missed