day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಮುಂಗಾರು – ಹಿಂಗಾರು ನಡುವೆ ಫೆಂಗಲ್* *ತುಂತುರು ಮೇಘಧಾರೆಗೆ ಜನರು ಕಂಗಾಲು – AVIN TV

लाइव कैलेंडर

December 2024
M T W T F S S
 1
2345678
9101112131415
16171819202122
23242526272829
3031  

AVIN TV

Latest Online Breaking News

*ಮುಂಗಾರು – ಹಿಂಗಾರು ನಡುವೆ ಫೆಂಗಲ್* *ತುಂತುರು ಮೇಘಧಾರೆಗೆ ಜನರು ಕಂಗಾಲು

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮುಂಗಾರು – ಹಿಂಗಾರು ನಡುವೆ ಫೆಂಗಲ್*
*ತುಂತುರು ಮೇಘಧಾರೆಗೆ ಜನರು ಕಂಗಾಲು*

ಈಗಷ್ಟೇ ಚಿಕ್ಕಮಗಳೂರು ಜನತೆ ಮಳೆಗಾಲದಿಂದ ಸುಧಾರಿಸಿಕೊಂಡು, ಚಳಿಗಾಲಕ್ಕೆ ಒಗ್ಗಿಕೊಳ್ಳಲಾರಂಭಿಸುತ್ತಿದ್ದಂತೆಯೇ
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ ಎಫೆಕ್ಟ್
ಎಡತ್ತಾಕಿಕೊಂಡಿದೆ. ಸುರಿಯುತ್ತಿರುವ ಅಕಾಲಿಕ ಮಳೆ, ಕೊರೆಯುವ ಚಳಿ ಪುನಃ ಮಳೆಗಾಲದ ವಾತಾವರಣವನ್ನು ನಿರ್ಮಿಸಿದಂತಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಸೇರಿ ಕರ್ನಾಟಕದ ಕೆಲವಡೆ ಇನ್ನೂ 2 ದಿನ ಮಳೆ ಮುನ್ಸೂಚನೆ ನೀಡಿದ್ದು, ರೈತರನ್ನು ಕಂಗಾಲಾಗಿಸಿದೆ. ಚಿಕ್ಕಮಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಕಾಫಿ ಮತ್ತು ಭತ್ತದ ಬೆಳೆ ನಾಶವಾಗುವ ಆತಂಕ ಎದುರಾಗಿದೆ. ಕೊಯ್ಲಿಗೆ ಬಂದಿರುವ ಕಾಫಿ ಮತ್ತು ಭತ್ತ ಗದ್ದೆಯಲ್ಲೇ ಮೊಳಕೆ ಒಡೆಯುತ್ತಿದ್ದು, ರೋಗದ ಆತಂಕ ಬಂದೊದಗಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆ ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತುಪಡಿಸಿ
ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ನಾಳೆ (ಡಿ. 03) ಒಂದು ದಿವಸದ ರಜೆಯನ್ನು ಘೋಷಿಸಿದ್ದಾರೆ.

ಒಟ್ಟಿನಲ್ಲಿ ಮುಂಗಾರು – ಹಿಂಗಾರು ನಡುವೆ ಫೆಂಗಲ್ ಸೈಕ್ಲೋನ್ ನುಸುಳಿ ಜನಜೀವನ ಬಸವಳಿಯುವಂತಾಗಿದೆ.

About Author

Leave a Reply

Your email address will not be published. Required fields are marked *